ಬಡವರಿಗೆ ಕೊಳವೆಬಾವಿ ನೀರು ದಕ್ಕಲಿಲ್ಲ

ಊರು ರಾಣಿಬೆನ್ನೂರು. ಅಲ್ಲಿಂದ ಸುಮಾರು ೧೦ ಕಿಮೀ ದೂರದ ಒಂದು ಹಳ್ಳಿ. ಅಲ್ಲಿನ ೨೦ ಕಡು ಬಡತನದ ಕುಟುಂಬಗಳಿಗೆ ಸರಕಾರ ತಲಾ ಒಂದೆಕ್ರೆ ಜಮೀನು ನೀಡಿತು. ಅವರೆಲ್ಲ ಪರಿಶಿಷ್ಟ ವರ್ಗದವರು.

ಕೇವಲ ಜಮೀನು ನೀಡಿದರೆ ಅವರ ಉದ್ಧಾರ ಆಗದು ತಾನೇ? ಅದಕ್ಕಾಗಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ರಕಾರ ಹಣ ಸಹಾಯದ ಯೋಜನೆ ರೂಪಿಸಲಾಯಿತು: ಬ್ಯಾಂಕಿನಿಂದ ಶೇಕಡಾ ೪ ವಾರ್ಷಿಕ ಬಡ್ಡಿ ದರದಲ್ಲಿ ಸಾಲ ಮತ್ತು ಗುಂಪಿಗೆ ಸಾಲ ನೀಡುವ ಕಾರಣ ಯೋಜನಾ ವೆಚ್ಚದ ಶೇಕಡಾ ೫೦ ಸಹಾಯಧನ. ಇದು ’ವ್ಯತ್ಯಾಸ ಬಡ್ಡಿ ದರ’ (ಡಿ.ಆರ್. ಐ.) ಸಾಲವಾದ್ದರಿಂದ ಸಾಲಕ್ಕೆ ಚಕ್ರಬಡ್ಡಿ ವಿಧಿಸುವಂತಿಲ್ಲ ಹಾಗೂ ಸೊತ್ತುಗಳ ವಿಮೆಯ ವೆಚ್ಚವನ್ನು ಬ್ಯಾಂಕ್ ಭರಿಸತಕ್ಕದ್ದು.

Image

ಚಿಪ್ಕೋ ಆಂದೋಲನ: ಹಿಮಾಲಯದ ಅರಣ್ಯ ರಕ್ಷಣೆಗೆ ಜನಾಂದೋಲನ

೨೦೧೮ರಲ್ಲಿ ಕೇರಳದಲ್ಲಿ ಮತ್ತು ಕರ್ನಾಟಕದ ಕೊಡಗಿನಲ್ಲಿ ಮಹಾಮಳೆ ಹಾಗೂ ಮಹಾನೆರೆಯಿಂದಾದ ಜೀವಹಾನಿ ಮತ್ತು ಸೊತ್ತು ಹಾನಿಯ ನೆನಪು ಮಾಸುವ ಮುನ್ನ ೨೦೧೯ರಲ್ಲಿ ಪುನಃ ಅಂತಹದೇ ಅನಾಹುತ. ಇದಕ್ಕೆ ಮುಖ್ಯ ಕಾರಣ ಪಶ್ಚಿಮಘಟ್ಟಗಳಲ್ಲಿ ಕಾಡಿನ ಮಹಾನಾಶ ಎಂಬುದನ್ನು ತಿಳಿಯಲು ಯಾವುದೇ ಸಂಶೋಧನೆ ಅಗತ್ಯವಿಲ್ಲ.
ಈ ಸಂದರ್ಭದಲ್ಲಿ, ಐದಾರು ದಶಕಗಳ ಮುಂಚೆಯೇ ಹಿಮಾಲಯ ಪರ್ವತ ಶ್ರೇಣಿಯ ಉದ್ದಕ್ಕೂ ಸುಂದರಲಾಲ್ ಬಹುಗುಣ “ಚಿಪ್ಕೋ” (ಮರಗಳನ್ನು ರಕ್ಷಿಸಲಿಕ್ಕಾಗಿ ಅಪ್ಪಿಕೋ) ಆಂದೋಲನದ ಮೂಲಕ ಅರಣ್ಯ ರಕ್ಷಣೆ ಮಾಡಿದ್ದನ್ನು ನೆನಪು ಮಾಡಿಕೊಳ್ಳುವುದು ಅಗತ್ಯ.

Image

ಜಲಜಾಗೃತಿಗೆ ಹಳ್ಳಿಗೊಬ್ಬ ಸಾಕು

"ನಿನ್ನದು ಕೆರೆ ಹತ್ತಿರದ ಜಮೀನು. ಬೋರ್‍ವೆಲ್ ಹಾಕ್ಸು. ಬಾಳೆ ಮತ್ತು ಟೊಮೆಟೊ ಬೆಳೆಸಿ, ಚೆನ್ನಾಗಿ ದುಡ್ಡು ಮಾಡು" ಎಂದು ತನಗೆ ಹಳ್ಳಿಯಲ್ಲಿ ಹಲವರು ಉಪದೇಶ ಮಾಡಿದ್ದನ್ನು ನೆನೆಯುತ್ತಾರೆ ಬಿ. ಎಲ್. ಶೋಬನಬಾಬು. ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಪಾಸಾದದ್ದು ೧೯೮೮ರಲ್ಲಿ. ಸಂಬಳದ ಕೆಲಸಕ್ಕೆ ಹೋಗಬೇಕೆಂದು ಅವರಿಗೆ ಅನಿಸಲಿಲ್ಲ. ’ತಂದೆ ಲಕ್ಷ್ಮಣ ಶೆಟ್ಟಿಯವರ ಪಾಲಿಗೆ ಬಂದ ೧೨ ಎಕ್ರೆ ಜಮೀನಿದೆ. ಅಲ್ಲೇ ಕೆಲಸ ಮಾಡಿದರಾಯಿತು’ ಎಂಬ ಯೋಚನೆಯಿಂದ ತನ್ನ ಹಳ್ಳಿ ಎಸ್. ಬಿದರೆಗೆ ಮರಳಿದರು.

Image

ಮೌನ ಮೀರಲಿಲ್ಲ!

ಕಡಲಾಳದಂತಿರುವ ಬಡತನದ ಬವಣೆಯಲಿ,
ಈಜಲೆಂದು ದೂಡಿದೆ ನೀನು.
ನಾ ಮಾತಾಡಲಿಲ್ಲ| ಮೌನವ ಮೀರಲಿಲ್ಲ |
ಬಡತನದ ಬೇಗೆಯನು ಸಹಿಸುತಲಿ,
ಸಿರಿತನದ ಆಸೆಗಳ ಮರೆಯುತಲಿ, ಈಜಿ ದಡ ಸೇರಿದೆ ನಾನು.
ನಾ ಮುಳುಗಲಿಲ್ಲ| ಬಡತನ ಎನಗೆ ಹೊರೆಯಾಗಲಿಲ್ಲ |

ಜೀವನ ಯಾನದ ಪ್ರತಿಹಂತದಲು,
ದುಃಖದ ಬಾಣಗಳ ಮಳೆಗರೆದೆ ನೀನು.
ನಾ ದೂಷಿಸಲಿಲ್ಲ| ಮೌನವ ಮೀರಲಿಲ್ಲ |
ನೋವುಗಳ ನುಂಗುತಲಿ, ಮುಂಬರುವ
ನಲಿವುಗಳ ನೆನೆಯುತಲಿ, ಯಾನವ ಬೆಳೆಸಿದೆ ನಾನು.
ನಾ ಹೆದರಲಿಲ್ಲ| ದುಃಖದ ಬಾಣಗಳ ಇರಿತಕ್ಕೆ, ನಾ ಮಣಿಯಲಿಲ್ಲ |

ಅನ್ನದ ಕೃಷಿಗೆ ಸಾಂಘಿಕ ಸ್ಪರ್ಶ

“ಭತ್ತ ಬೆಳೆಯುವವರ ಸಂಖ್ಯೆ ತೀರಾ ತೀರಾ ಕಡಿಮೆ. ಮನೆ ತುಂಬಿಸುವಂತಹ ಧಾರ್ಮಿಕ ವಿಧಿಗಳನ್ನು ಪ್ರತಿ ವರುಷವೂ ಚಾಚೂ ತಪ್ಪದೆ ಮಾಡ್ತಾ ಇರ್ತೇವೆ. ಮನೆ ತುಂಬಿಸಲು ನಮ್ಮ ಗದ್ದೆಯ ತೆನೆಗಳೇ ಸಿಕ್ಕರೆ ಎಷ್ಟೊಂದು ಅಂದ, ಚಂದ. ನಾವು ಯಾರದ್ದೋ ಗದ್ದೆಯಿಂದ ತೆನೆಗಳನ್ನು ತಂದು ನಮ್ಮ ಮನೆಯನ್ನು ತುಂಬಿಸಿಕೊಳ್ಳುತ್ತೇವೆ. ಖುಷಿ ಪಡುತ್ತೇವೆ. ಯೋಚಿಸಿ ನೋಡಿ, ಇದರಲ್ಲಿ ನಿಜವಾಗಿಯೂ ಖುಷಿ ಇದೆಯಾ? ಬದಲಿಗೆ ಮನೆ ತುಂಬಿಸಲೆಂದೇ ಅಂಗಳದ ಬದಿಯಲ್ಲಿ ಸ್ವಲ್ಪ ಭತ್ತ ಬೆಳೆಯಿರಿ,” ಎನ್ನುವ ಕಿವಿಮಾತನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕ ಅಮೈ ದೇವರಾವ್ ಹೇಳುತ್ತಾರೆ. ಇವರಲ್ಲಿ ನೂರೈವತ್ತು ಭತ್ತದ ತಳಿಗಳು ಸಂರಕ್ಷಣೆಯಾಗತ್ತಿವೆ.

Image

ಮಂಗಳೂರಿನ ಮಣ್ಣಗುಡ್ಡೆ ಗುರ್ಜಿ – ೧೫೦ನೇ ವರುಷದ ಸಂಭ್ರಮ

ಮಂಗಳೂರಿನ ಜನಪ್ರಿಯ ಉತ್ಸವ “ಮಣ್ಣಗುಡ್ಡೆ ಗುರ್ಜಿ”. ಇದರ ೧೫೦ನೇ ವರುಷದ ಕಾರ್ಯಕ್ರಮಗಳು ಅದ್ದೂರಿಯಾಗಿ ಮುಕ್ತಾಯವಾದದ್ದು ೨೪ ನವಂಬರ್ ೨೦೧೯ರ ಭಾನುವಾರದಂದು. ಆ ದಿನ ಸಂಜೆಯಿಂದ ಮಣ್ಣಗುಡ್ಡೆ ಪರಿಸರದಲ್ಲಿ ಜನಸಾಗರ.
ಗುರ್ಜಿಯ ೧೫೦ನೇ ವರ್ಷಾಚರಣೆ ಅಂಗವಾಗಿ, ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಸಂಗೀತ ಕಚೇರಿ, ಉಚಿತ ಆರೊಗ್ಯ ಶಿಬಿರ, ಆಯುರ್ವೇದ ಮತ್ತು ಮಳೆನೀರು ಕೊಯ್ಲು ಬಗ್ಗೆ ಉಪನ್ಯಾಸಗಳು, ಕ್ರಿಕೆಟ್ ಪಂದ್ಯಾಟ , ಕ್ರೀಡೋತ್ಸವ ಇತ್ಯಾದಿ ಜನೋಪಯೋಗಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜನವರಿ ೨೦೧೯ರಿಂದ ತಿಂಗಳಿಗೊಂದರಂತೆ ಸಂಭ್ರಮದಿಂದ ಜರಗಿಸಲಾಯಿತು.

Image

ನನ್ನೊಬ್ಬನಿಂದ ಏನೆಲ್ಲ ಆದೀತು!

ಸಮುದ್ರ ತೀರದಲ್ಲಿ ಒಬ್ಬ ವ್ಯಕ್ತಿ ನಡೆಯುತ್ತಿದ್ದ. ಆಗಾಗ ಬಗ್ಗಿ, ಹೊಯಿಗೆಯಲ್ಲಿ (ಮರಳಿನಲ್ಲಿ) ಸಿಲುಕಿದ್ದ ನಕ್ಷತ್ರ ಮೀನುಗಳನ್ನು ಹೆಕ್ಕಿ, ಸಮುದ್ರದ ನೀರಿಗೆ ಎಸೆಯುತ್ತಿದ್ದ.
ಅವನಿಗೆದುರಾಗಿ ನಡೆದು ಬರುತ್ತಿದ್ದ ಇನ್ನೊಬ್ಬ ವ್ಯಕ್ತಿ. ಮೊದಲನೆಯ ವ್ಯಕ್ತಿ ಹತ್ತಿರ ಬಂದಾಗ ಎರಡನೆಯಾತ ಕೇಳಿದ, “ಅದೇನು ಮಾಡುತ್ತಿದ್ದಿ?” ಮೊದಲನೆಯಾತ ಮುಗುಳ್ನಕ್ಕು ತನ್ನ ಕೆಲಸ ಮುಂದುವರಿಸಿದ. ಆತನನ್ನು ಹಿಂಬಾಲಿಸಿದ ಎರಡನೆಯಾತ ಪುನಃ ಅದೇ ಪ್ರಶ್ನೆ ಕೇಳಿದ. ಈಗ ಮೊದಲನೇ ವ್ಯಕ್ತಿ ಉತ್ತರಿಸಿದ: “ಕಾಣುತ್ತಿಲ್ಲವೇ? ನಕ್ಷತ್ರ ಮೀನುಗಳನ್ನು ಹೆಕ್ಕಿಹೆಕ್ಕಿ ನೀರಿಗೆ ಎಸೆಯುತ್ತಿದ್ದೇನೆ – ಅವು ಬದುಕಿಕೊಳ್ಳಲಿ ಎಂದು.”

Image

ಹಾರೋಗೇರಿ ಬಾಂದಾರ - ಗ್ರಾಮೀಣ ಸಮುದಾಯದಿಂದ ಜಲಸಂರಕ್ಷಣೆಯ ಮಾದರಿ

ಹಾರೋಗೇರಿ ಬಾಂದಾರದ ಮೇಲೆ ನಿಂತಿದ್ದೆವು. ಅಂದು (೧೮ ಜೂನ್ ೨೦೦೯) ಹುಬ್ಬಳ್ಳಿಯಿಂದ ಹೊರಟು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಅರ್ಧ ತಾಸಿನಲ್ಲಿ ವರೂರು ಮುಟ್ಟಿದ್ದೆವು. ಅಲ್ಲಿಂದ ಬಲಕ್ಕೆ ತಿರುಗಿ, ೬ ಕಿಮೀ ದೂರದ ಸೂರಶೆಟ್ಟಿಕೊಪ್ಪ ಹಾದು ಹಾರೋಗೇರಿ ತಲಪಿದ್ದೆವು. ಕಳೆದೆರಡು ವಾರಗಳಲ್ಲಿ ಬಿದ್ದ ಮಳೆಯ ನೀರು ಬಾಂದಾರದಲ್ಲಿ ಸಂಗ್ರಹವಾಗಿತ್ತು. ಸುತ್ತಲಿನ ಗುಡ್ಡಗಳಲ್ಲಿ ಹಸುರು ಚಿಗುರು ನಗುತ್ತಿತ್ತು.

Image

ಈರೋಡಿನ ಅರಿಶಿನಕ್ಕೆ ಭೌಗೋಳಿಕ ಸೂಚಕದ ಹೆಗ್ಗಳಿಕೆ

ಅಲ್ಲಿ ಮೇಜುಗಳ ಸಾಲುಸಾಲುಗಳಲ್ಲಿ ಅರಿಶಿನದ ಗೆಡ್ಡೆಗಳು. ಸುತ್ತಲೂ ಅರಿಶಿನದ ಘಮ. ಮಾರಾಟಕ್ಕಿಟ್ಟ ಅರಿಶಿನವನ್ನು ಪರಿಶೀಲಿಸುತ್ತಿರುವ ಜನರು. ಇದು, ಪೂರ್ವಾಹ್ನ ೧೧ ಗಂಟೆಯ ಹೊತ್ತಿಗೆ ತಮಿಳ್ನಾಡಿನ ಈರೋಡಿನ ನಸಿಯನೂರಿನ ವಿಶಾಲ ಅರಿಶಿನ ಮಾರುಕಟ್ಟೆ ಪ್ರಾಂಗಣದ ನೋಟ.
ಈಗ ೬೫ನೇ ವರುಷಕ್ಕೆ ಕಾಲಿಟ್ಟಿರುವ ಅಲ್ಲಿನ ಅರಿಶಿನ ವರ್ತಕರ ಸಂಘಟನೆಯ ಸದಸ್ಯರ ಸಂಖ್ಯೆ ೩೫೭. ಈರೋಡಿನಿಂದ ೯ ಕಿಮೀ ದೂರದಲ್ಲಿರುವ ವಿಸ್ತಾರವಾದ ಮಾರುಕಟ್ಟೆ ಪ್ರಾಂಗಣವನ್ನು ಮಂಜಲ್ ಮಾನಗರಮ್ (ಅರಿಶಿನದ ರಾಜಧಾನಿ) ಎಂದು ಕರೆಯಲಾಗುತ್ತದೆ. ವರುಷವಿಡೀ ತೆರೆದಿರುವ ಆ ಮಾರುಕಟ್ಟೆಯಲ್ಲಿ ಶೇಖರಿಸಿಡಲಾಗಿದೆ ತಮಿಳ್ನಾಡು ಮತ್ತು ಪಕ್ಕದ ರಾಜ್ಯಗಳಿಂದ ಮಾರಾಟಕ್ಕೆ ತಂದ ಅರಿಶಿನದ ರಾಶಿರಾಶಿ.

Image

ಸತ್ಯಕ್ಕೆ ಒಂದೇ ಮುಖ

ಚಿತ್ರ ಕೃಪೆ : ಗೂಗಲ್

ಕೇಳ್ದೆ ಇದ್ರು ಯಾಕೇಳ್ಬೇಕೂ ಬಳ್ಳ ಸುಳ್ಳ
ಸಿಕ್ಕಿಬಿದ್ದಾಗ ಪೇಚಾಟ ಬೇಕಾ ಮಳ್ಳ
ಸತ್ಯವೆಂಬುದು ಕನ್ನಡಿ ತರ, ಒಂದೇ ಮುಖ
ಸುಳ್ಳಿನಿಂದ ಸಿಗೋದಿಲ್ಲ ಶಾಶ್ವತ ಸುಖ, ಎಂದ ನನ್ನ ಶಿವ.
                                                   ಬೋ.ಕು.ವಿ