ಬಾಳಿಗೊಂದು ಚಿಂತನೆ (9) - ಸಮಯ

ಬಾಳಿಗೊಂದು ಚಿಂತನೆ (9) - ಸಮಯ

ನಮ್ಮ ಊರಿನಲ್ಲಿ ಚಲಿಸುವ ಯಾವುದೇ ಬಸ್ಸುಗಳು ಆಯಾ ಸಮಯಕ್ಕೆ ಸರಿಯಾಗಿ ಬರುತ್ತದೆ, ಹೋಗುತ್ತದೆ. ನಮಗೆಲ್ಲೋ ಹೊರಗೆ ಹೋಗಲಿದೆ ಎಂದಾದರೆ, ಆ ಬಸ್ಸಿನ ಸಮಯಕ್ಕೆ ಸರಿಯಾಗಿ ನಾವು ಹೋಗುತ್ತೇವೆ. ಒಂದು ನಿಮಿಷ ತಡವಾದರೂ ಬಸ್ಸು ಹೋಗಿರುತ್ತದೆ. *ಕಳೆದು ಹೋದ ಸಮಯ ನಮ್ಮ ಬದುಕಿನಲ್ಲಿ ಮತ್ತೆಂದೂ ಬರದು* ಗಡಿಯಾರದ ಮುಳ್ಳುಗಳು ಮುಂದೆ ಸಾಗುವುದು ಸತ್ಯ. ಆ ಸಾಗುವ ಮುಳ್ಳುಗಳೊಂದಿಗೆ ನಾವು ಸಹ ಸಾಗೋಣ, ನಮಗೆ ಬೇಕಾದ್ದನ್ನು ಸಾಧಿಸಿಕೊಳ್ಳೋಣ.

ಇತ್ತೀಚೆಗೆ ಪ್ರತಿಯೊಬ್ಬರ ಬಾಯಿಯಲ್ಲು ಕೇಳುವ ಮಾತು*ಯಾವುದಕ್ಕೂ ಸಮಯವಿಲ್ಲ*ಎಂಬುದಾಗಿ. ಹೌದು ಸ್ನೇಹಿತರೆ, ಕಾರಣ ಮೊಬೈಲ್, ದೂರದರ್ಶನ, ಲ್ಯಾಪ್ ಟಾಪ್, ಆನ್ಲೈನ್, ಚಾಟ್ ಅಭ್ಯಾಸಗಳ ದಾಸರಾಗಿರುವುದು. ನಮ್ಮ ದಿನದ 24 ಗಂಟೆಯನ್ನು ನುಂಗಿ ಹಾಕುವುದು ಇವುಗಳೇ. ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳೋಣ. ಪುಸ್ತಕಗಳ ಓದು, ಒಳ್ಳೆಯ ಸಂದೇಶಗಳಿರುವ ಸಿನಿಮಾ ವೀಕ್ಷಣೆ, ಮಕ್ಕಳ ಸಾಹಿತ್ಯಗಳು ,ವೈಚಾರಿಕ ಕಿರು ಚಿತ್ರಗಳು, ಜೀವನಕ್ಕೆ ಹತ್ತಿರವಾದದ್ದನ್ನು ನೋಡುವುದು, ಓದುವುದು, ಚಿತ್ರಕಲೆ, ಒಳ್ಳೆಯ ಅಡುಗೆ ತಯಾರಿ. ಇದಕ್ಕೆಲ್ಲ ಬಳಸಿಕೊಳ್ಳೋಣ. ತೋಟಗಾರಿಕೆಯನ್ನು ಸಹ ಸ್ವಲ್ಪ ನಮ್ಮ ಸಮಯಕ್ಕೆ ಮೀಸಲಿಡಬಹುದು.

ಸಾಮಾನ್ಯವಾಗಿ ಕಛೇರಿಗಳಿಗೆ ಸಮಯಕ್ಕೆ ಸರಿಯಾಗಿ ನಾವು ಹೋಗಲೇಬೇಕು. ಆದರೆ ಎಷ್ಟೋ ಜನ ಸಮಯ ಮೀರಿಯೇ ಬರುವವರಿದ್ದಾರೆ. ಸಮಯಕ್ಕೆ ಸರಿಯಾಗಿ ಹಾಜರಾಗುವುದು ನಮ್ಮ ಕರ್ತವ್ಯ.

ಸಮಯವನ್ನು ಆದಷ್ಟೂ ಉತ್ತಮ ಕೆಲಸಕಾರ್ಯಗಳಲ್ಲಿ ತೊಡಗಿಸಿಕೊಂಡು, ಕಳೆದು ಹೋದುದಕ್ಕೆ ಚಿಂತಿಸದೇ, ಮುಂದಿನ ಬದುಕನ್ನು ಆರೋಗ್ಯಯುತವಾಗಿ, ನೆಮ್ಮದಿಯಿಂದ ಕಳೆಯಲು ನಾವೆಲ್ಲ ಕಟಿಬದ್ಧರಾಗೋಣ.

-ರತ್ನಾಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್