ನವರಾತ್ರಿಯ ಆರನೆಯ ದಿನದ ಪೂಜಾ ಮಾತೆ- ಕಾತ್ಯಾಯಿನಿ ದೇವಿ
ನವರಾತ್ರಿಯ ಆರನೆಯ ದಿವಸ ಮಾತೆಯನ್ನು ಕಾತ್ಯಾಯಿನಿಯಾಗಿ ಆರಾಧಿಸಲಾಗುವುದು.ಕಾತ್ಯಾಯಿನಿ ಮಾತೆಯ ಸ್ವರೂಪವು ಉಗ್ರರೂಪವಾಗಿರುತ್ತದೆ. ಸಿಂಹವಾಹಿನಿಯಾದ ಈಕೆ ಭಕ್ತರ ಪಾಲಿಗೆ ಶಾಂತಿ ಸ್ವರೂಪಿಣಿಯೂ ಹೌದು, ಮಾತೃ ಸ್ವರೂಪಿಣಿಯೂ ಹೌದು. ಆದರೆ ಶಿಷ್ಟರ ಪಾಲಿಗೆ ಮಾತ್ರ ಸಂಹಾರಕಾರಿಣಿಯಾದ ಮಾತೆ ದುರ್ಗೆಯಾಗಿರುವಳು. ಕಾತ್ಯಾಯಿನಿ ದೇವಿಯು ಮೂರು ಕಣ್ಣು ಹಾಗೂ ಹಣೆಯ ಮೇಲೆ ಅರ್ಧ ಚಂದ್ರಾಕ್ರತಿಯ ಅಲಂಕಾರವನ್ನು ಹೊಂದಿರುತ್ತಾಳೆ.
*ಪುರಾಣದ ಪ್ರಕಾರ*-*ಕಾತ್ಯಾಯಿನಿ ಮಾತೆಯ ಕಥೆ*
*"ಕಾತ್ಯಾಯನಸ್ಯ ಅಪತ್ಯಂ* *ಸ್ತ್ರೀ* *ಕಾತ್ಯಾಯನಿ”* (ಕಾತ್ಯಾಯನನ ಮಗಳು ಕಾತ್ಯಾಯನಿ) ಅಯನ ಎಂದರೆ- ಹಲವಾರು ನಕ್ಷತ್ರ ಸಮೂಹಗಳಿಂದ ಯುಕ್ತವಾಗಿರುವ ಭಾಗವೆಂದು, ಕಾತ್ಯಾಯನ ಋಷಿಗಳು ಇಂತಹ ಒಂದು ಅಯನದ ಪಾಲಕರಾಗಿದ್ದರು.*'ಕಾತ್ಯ'* ಎಂಬ ಗೋತ್ರದಲ್ಲಿ ಹುಟ್ಟಿದ ಮಹರ್ಷಿ ಕಾತ್ಯಾಯನರು ಮಾತೆ ದುರ್ಗೆಯ ಆರಾಧಕರಾಗಿದ್ದರು. ದೇವಿಯ ಉಪಾಸನೆ ಮಾಡುತ್ತಾ ಅನೇಕ ವರ್ಷಗಳವರೆಗೆ ಕಠಿಣ ತಪಸ್ಸನ್ನಾಚರಿಸಿದ್ದರು. ದೇವಿಯು ತನ್ನ ಮಗಳಾಗಿ ಹುಟ್ಟಬೇಕೆಂದು ಅವರ ಇಚ್ಛೆಯಾಗಿತ್ತು.
ಕಾಲಕಳೆದಂತೆ, ಪೃಥ್ವಿಯಲ್ಲಿ ಮಹಿಷಾಸುರನ ಉಪಟಳ ಜಾಸ್ತಿಯಾದಾಗ ತ್ರಿಮೂರ್ತಿಗಳು ಸೇರಿ ತಮ್ಮ ತೇಜಸ್ಸಿನ ಅಂಶವನ್ನಿತ್ತು ದೇವಿಯನ್ನು ಸೃಷ್ಟಿಸಿದರು ಹಾಗೂ ಅವಳ ಮೊಟ್ಟಮೊದಲ ಪೂಜೆಯನ್ನು ನೆರೆವೇರಿಸುವಂತೆ ಮಹರ್ಷಿ ಕಾತ್ಯಾಯನರಿಗೆ ತಿಳಿಸಿದರು..ಈ ಪ್ರಸಂಗದಿಂದ ದೇವಿಗೆ *‘ಕಾತ್ಯಾಯನೀ’* ಎಂಬ ನಾಮಕರಣವಾಯಿತು.
ಅಶ್ವೀಜ ಶುಕ್ಲ ಸಪ್ತಮಿ, ಅಷ್ಟಮಿ ಮತ್ತು ನವಮಿಯಂದು ಮಹರ್ಷಿ ಕಾತ್ಯಾಯನರಿಂದ ಪೂಜಿತಳಾಗಿ ದಶಮಿಯಂದು ಮಹಿಷಾಸುರನ ವಧೆ ಮಾಡಿದ್ದಳು. ಸಿಂಹವಾಹಿನಿಯಾದ ಇವಳಿಗೆ ನಾಲ್ಕು ಕೈಗಳಿದ್ದು, ಬಲಗಡೆಯ ಕೈಗಳಲ್ಲಿ ಅಭಯ ಮತ್ತು ವರಮುದ್ರೆಯಿದ್ದರೆ ಎಡಗಡೆಯ ಕೈಗಳಲ್ಲಿ ಖಡ್ಗ ಮತ್ತು ಕಮಲ ಹಿಡಿದಿದ್ದಾಳೆ.
ದೇವಿ ಕಾತ್ಯಾಯಿನಿಯನ್ನು ಬ್ರಹ್ಮಾಂಡದಲ್ಲಿ ಪ್ರಧಾನ ದೇವತೆಯಾಗಿ ಪರಿಗಣಿಸಲಾಗಿದೆ. ಯುಗಯುಗಗಳಿಂದಲೂ ಈಕೆಯನ್ನು ಪೂಜಿಸಲಾಗುತ್ತಾ ಬರುತ್ತಿದೆ. ಕೃಷ್ಣನನ್ನು ಭೂಮಿಗೆ ಕರೆತರಲು ಗೋಪಿಕೆಯರು ಕಾತ್ಯಾಯಿನಿಯನ್ನು ಭಕ್ತಿಯಿಂದ ಪೂಜಿಸಿದರೆಂಬ ನಂಬಿಕೆಯಿದೆ. ಅಷ್ಟು ಮಾತ್ರವಲ್ಲದೇ, ಉತ್ತಮ ವರನನ್ನು ಪಡೆಯುವುದಕ್ಕೂ ಕೂಡ ಹುಡುಗಿಯರು ತಾಯಿ ಕಾತ್ಯಾಯಿನಿಯನ್ನು ಪೂಜಿಸುತ್ತಾರೆ.
ಶ್ರೀಕೃಷ್ಣನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಕಾಳಿಂದೀ ನದಿಯ ದಡದಲ್ಲಿ ಕಾತ್ಯಾಯನಿಯ ಆರಾಧನೆ ಮಾಡಿದ್ದರು. ಕಾತ್ಯಾಯನಿಯ ಪಾದಗಳಲ್ಲಿ ಶರಣು ಹೊಂದುವುದರಿಂದ ರೋಗ, ಭಯ, ಶೋಕ, ಹಾಗೂ ಸಂತಾಪಗಳು ನಾಶವಾಗಿ ಭಕ್ತರಿಗೆ ಧರ್ಮಾರ್ಥ ಕಾಮಮೋಕ್ಷ ಗಳ ಪ್ರಾಪ್ತಿಯಾಗುತ್ತದೆ.
*ಜಾತಕದಲ್ಲಿನ ಸಮಸ್ಯೆಗಳು ನಿವಾರಣೆಯಾಗುವುದು.*
ಕಾತ್ಯಾಯಿನಿ ದೇವಿಯ ಆಶೀರ್ವಾದದಿಂದ ಜಾತಕದಲ್ಲಿ ಕಂಡು ಬರುವ ಹಲವಾರು ಸಮಸ್ಯೆಗಳು, ದೋಷಗಳು ದೂರವಾಗುತ್ತವೆ. ಗುರುವಾರದ ಶಕ್ತಿ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿ ಜ್ಞಾನ ಮತ್ತು ವಿವೇಕದ ದೇವತೆಯೆಂದು ಪೂಜಿಸಲಾಗುತ್ತದೆ. ಈ ದೇವಿಯ ಕರುಣೆ ಅಥವಾ ಆಶೀರ್ವಾದ ಇಲ್ಲದೆ ಜ್ಞಾನ ಸಂಪಾದನೆ ಮಾಡಲು ಸಾಧ್ಯವಿಲ್ಲ. ಎಂದು ಹೇಳಲಾಗುವುದು.
1) ಮಾತೆ ಕಾತ್ಯಾಯಿನಿಯನ್ನು ಆರಾಧಿಸುವುದರಿಂದ ಕಾಳಸರ್ಪ ದೋಷ, ರಾಹು ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳು ದೂರಾಗುತ್ತದೆ. ಆದ್ದರಿಂದ ಜಾತಕದಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿರುವವರು ತಾಯಿ ಕಾತ್ಯಾಯಿನಿಯನ್ನು ಶ್ರದ್ಧಾ, ಭಕ್ತಿಯಿಂದ ಆರಾಧಿಸಬೇಕು.
2) ತಾಯಿಯ ಆರಾಧನೆಯು ಸೋಂಕಿನಿಂದಾಗುವ ಆರೋಗ್ಯದ ಸಮಸ್ಯೆಗಳನ್ನು, ಹಾಗೂ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡುತ್ತಾಳೆ.
3) ತಾಯಿ ಕಾತ್ಯಾಯಿನಿಯನ್ನು ಹೆಚ್ಚಾಗಿ ಮಹಿಳೆಯರು ಆರಾಧಿಸಬೇಕು. ಭಕ್ತಿಯಿಂದ ತಾಯಿ ಕಾತ್ಯಾಯಿನಿಯನ್ನು ಪೂಜಿಸುವುದರಿಂದ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ವಿವಾಹದ ಸಮಸ್ಯೆಗಳು ಬಹುಬೇಗ ನಿವಾರಣೆಯಾಗುತ್ತವೆ.
*ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ*
ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುತ್ತಾಳೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಪ್ರಯೋಜನ, ಸಮೃದ್ಧಿ ಹಾಗೂ ಯಶಸ್ಸನ್ನು ಪಡೆದುಕೊಳ್ಳುತ್ತಾನೆ. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರವಾಗುವುದು.
ಕಾತ್ಯಾಯಿನಿ ತಾಯಿಯು ಗುರು ಗ್ರಹ ಮತ್ತು ಶುಕ್ರ ಗ್ರಹದೊಂದಿಗೆ ಸಂಬಂಧವನ್ನು ಹೊಂದಿದ್ದಾಳೆಂದು ಹೇಳಲಾಗಿದೆ. ಇದಕ್ಕೆ ಮುಖ್ಯ ಕಾರಣವು ಗುರು ಗ್ರಹವು ವಿವಾಹದ ಅಂಶವನ್ನು ಪ್ರತಿಪಾದಿಸುತ್ತದೆ. ತಾಯಿ ಕಾತ್ಯಾಯಿನಿಯನ್ನು ಪೂಜಿಸಿದರೆ ಮದುವೆಯಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳೂ ಕೂಡ ನಿವಾರಣೆಯಾಗುತ್ತದೆ ಮತ್ತು ಗಂಡ - ಹೆಂಡತಿಯರ, ನಡುವೆ ದಾಂಪತ್ಯ ಸಮಸ್ಯೆಗಳಿದ್ದರೂ ಕೂಡ ಬಹುಬೇಗ ನಿವಾರಣೆಯಾಗುತ್ತದೆ.
*ಆರನೇ ದಿನದ ನವರಾತ್ರಿಯ ಪ್ರಾಮುಖ್ಯತೆ *
ಕಾತ್ಯಾಯಿನಿ ದೇವಿಗೆ ಸಮರ್ಪಿತವಾದ ಆರನೇ ದಿವಸದ ಪೂಜೆಯು ಬಹಳ ಶ್ರೇಷ್ಠವಾದದ್ದು. ಈ ದಿನವನ್ನು ಮಹಾಷಷ್ಟಿ ಎಂದು ಕೂಡ ಕರೆಯಲಾಗುತ್ತದೆ. ನವರಾತ್ರಿಯ ಆಚರಣೆಯಲ್ಲಿ ಮೂರು ದಿನಗಳ ಮಹಾಲಕ್ಷ್ಮಿ ಪೂಜೆಯ ಮೂರನೇ ಮತ್ತು ಅಂತಿಮ ದಿನ ಎಂದು ಪರಿಗಣಿಸಲಾಗುವುದು.(ಇಲ್ಲಿ ಮೂರನೇ ದಿನವೆಂದರೆ - 4, 5, 6, ನೇ ದಿವಸದವರೆಗೆ) ಕಾತ್ಯಾಯಿನಿ ಪೂಜೆಯಿಂದ ವ್ಯಕ್ತಿಯು ಉನ್ನತ ಸಾಮಾಜಿಕ ಸ್ಥಾನಮಾನವನ್ನು ಪಡೆದುಕೊಳ್ಳುವರು..
ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ ಸಮೃದ್ಧಿ ಮತ್ತು ಸಂಪತ್ತನ್ನು ದೇವಿ ನೀಡುತ್ತಾಳೆ.. ಜೊತೆಗೆ ಉತ್ತಮ ತಿಳಿವಳಿಕೆ ಮತ್ತು ಶಾಂತಿಯುತವಾದ ಸಂಬಂಧಗಳೊಂದಿಗೆ ಕುಟುಂಬದಲ್ಲಿ ಸೌಹಾರ್ದತೆ ನೆಲೆಸುತ್ತದೆ ಎನ್ನುವ ನಂಬಿಕೆಯಿದೆ...ಈ ದೇವಿಗೆ ಕೆಂಪು, ಹಳದಿ, ದಾಸವಾಳದ ಹೂವಿನಿಂದ ಪೂಜಿಸಲಾಗುತ್ತದೆ..ಮತ್ತು ಸಾಧಕರು--ಆಜ್ಞಾ ಚಕ್ರದಲ್ಲಿ ಮನಸ್ಸನ್ನು ಇಟ್ಟು, ನೆಲೆಸಬೇಕು..ಯೋಗ ಸಾಧನೆಯಲ್ಲಿ ಈ ಆಜ್ಞಾ ಚಕ್ರದ ಸ್ಥಾನವು ಅತ್ಯಂತ ಮಹತ್ವದ್ದಾಗಿದೆ.
*ಕಾತ್ಯಾಯಿನಿ ದೇವಿಯ ಮಂತ್ರ*
*"ಓಂ ದೇವಿ ಕಾತ್ಯಾಯಿನಿ ನಮಃ*
ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ
ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ."
*ಕಾತ್ಯಾಯಿನಿ ದೇವಿಯ ಪ್ರಾರ್ಥನೆ*
"ಚಂದ್ರಹಾಸೋಜ್ವಲಕಾರ ಶರ್ದೂಲವರವಾಹನ
ಕಾತ್ಯಾಯಿನಿ ಶುಭಂ ದದ್ಯಾದ್ ದೇವಿ ದಾನವಘಟಿನಿ."
ಕಾತ್ಯಾಯಿನಿ ದೇವಿಯ ಸ್ತುತಿ
"ಯಾ ದೇವಿ ಸರ್ವಭೂತೇಶ್ ಮಾ ಕಾತ್ಯಾಯನಿ ರೂಪೇನ ಸಂಸ್ಥಿತಾ
ಸಮಸ್ತಸ್ತೈ ಸಮಸ್ತಸ್ತೈ ಸಮಸ್ತಸ್ತೈ ನಮೋ ನಮಃ"
*ಕಾತ್ಯಾಯಿನಿ ದೇವಿಯ ಕವಚ*
"ಕಾತ್ಯಾಯನಮುಖ ಪತು ಕಾಮ್ ಸ್ವಾಹಸ್ವರೂಪಿಣಿ
ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ
ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ."
*ಕಾತ್ಯಾಯಿನಿ ಪೂಜಾ ವಿಧಾನ*
ಕಾತ್ಯಾಯಿನಿಯನ್ನು ಹೆಚ್ಚಾಗಿ ಮಹಿಳೆಯರು ಹುಡುಗಿಯರು ಪೂಜಿಸುತ್ತಾರೆ..ಕಾತ್ಯಾಯಿನಿ ದೇವಿಯನ್ನು ಒಲಿಸಿಕೊಳ್ಳುವ ವಿಧಾನ.
1) ಮಾತೆ ಕಾತ್ಯಾಯಿನಿಯನ್ನು ಗೋಧೂಳಿ ಸಮಯದಲ್ಲಿ ಅಂದರೆ ಮುಸ್ಸಂಜೆ ವೇಳೆ ಪೂಜೆಯನ್ನು ಮಾಡಬೇಕು.
2) ಮಾತೆ ಕಾತ್ಯಾಯಿನಿಯನ್ನು ಪೂಜೆಯ ಮೂಲಕ ಮೆಚ್ಚಿಸಲು ಹಳದಿ ಅಥವಾ ಕೆಂಪು ಬಟ್ಟೆಗಳನ್ನು ಧರಿಸಬೇಕು.
3) ನಂತರ ದೇವಿಯ ವಿಗ್ರಹ, ಫೋಟೋವನ್ನು, ಪ್ರತಿಷ್ಠಾಪಿಸಿ ಶುದ್ಧ ಮನಸ್ಸಿನಿಂದ ಹೂವುಗಳನ್ನು ದೇವಿಗೆ ಅರ್ಪಿಸಬೇಕು.
4) ಜೇನುತುಪ್ಪವೆಂದರೆ ಕಾತ್ಯಾಯಿನಿ ದೇವಿಗೆ ಬಲು ಪ್ರೀತಿಯಾಗಿರುವುದರಿಂದ ಪೂಜೆಯಲ್ಲಿ ದೇವಿಗೆ ಜೇನುತುಪ್ಪವನ್ನು ಅರ್ಪಿಸಬೇಕು. ಇದರಿಂದ ತಾಯಿ ಕಾತ್ಯಾಯಿನಿಯು ಪ್ರಸನ್ನಳಾಗುತ್ತಾಳೆ.
5) ಪೂಜೆಯ ಸಂದರ್ಭದಲ್ಲಿ ತಾಯಿ ಕಾತ್ಯಾಯಿನಿ ಸ್ವರೂಪವನ್ನು ಮನಸ್ಸಿನಲ್ಲಿಟ್ಟುಕೊಂಡು ಆರಾಧಿಸಬೇಕು.
6) ತಾಯಿಗೆ ಹೂವು, ಹಣ್ಣುಗಳನ್ನು ಅರ್ಪಿಸಿದ ನಂತರ ಕಾತ್ಯಾಯಿನಿ ದೇವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದು.
7) ಪೂಜೆಯು ಅಂತ್ಯಗೊಳ್ಳುತ್ತಿದ್ದಂತೆ, ದೇವಿ ಕಾತ್ಯಾಯಿನಿಗೆ ಅರ್ಪಿಸಿದ ಪ್ರಸಾದವನ್ನು ಎಲ್ಲರಿಗೂ ಕೊಟ್ಟು ತಾವೂ ಸ್ವೀಕರಿಸಬೇಕು.
8) ಅವಿವಾಹಿತ ಮಹಿಳೆಯರು ಕಾತ್ಯಾಯಿನಿ ದೇವಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ಅವರಿಗೆ ಆದಷ್ಟು ಬೇಗ ಕಂಕಂಣ ಬಲ ಕೂಡಿಬರುತ್ತದೆ.
9) ಕೆಲವು ಕಾರಣಗಳಿಂದ ವಿವಾಹವು ವಿಳಂಬವಾಗುತ್ತಿದ್ದರೆ ಅಂತವರು ಈ ಸಮಸ್ಯೆಯಿಂದ ಹೊರಬರಲು ಕಾತ್ಯಾಯಿನಿ ದೇವಿಯನ್ನು ಪೂಜಿಸಿ, ಈ ಮಂತ್ರವನ್ನು ಪಠಿಸಬೇಕು. ಇದರೊಂದಿಗೆ ಪೂಜೆಯ ಸಮಯದಲ್ಲಿ 3 ಅರಶಿಣದ ಉಂಡೆಯನ್ನು ತಯಾರಿಸಿ ತಾಯಿಗೆ ಅರ್ಪಿಸಬೇಕು. ನಂತರ ಆ ಅರಶಿಣದ ಉಂಡೆಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.
10) ವಿವಾಹಕ್ಕಾಗಿ ಕಾತ್ಯಾಯಿನಿ ಮಂತ್ರ 108 ಬಾರಿ ಜಪಿಸಿ
ಕಾತ್ಯಾಯಿನಿ ಮಹಾಮಾಯೇ, ಮಹಾಯೋಗಿನ್ಯಧೀಶ್ವರಿ |
ನಂದಗೋಪಸ್ತುತಂ ದೇವಿ, ಪತಿ ಮೇ ಕುರು ತೇ ನಮಃ ||
(ಸಾರ ಸಂಗ್ರಹ-ವಿವಿಧ ಮೂಲಗಳಿಂದ)