ಪ್ರತಿದಿನ ಮೊಸರು ಸೇವನೆಯ ಲಾಭಗಳೇನು?

ಪ್ರತಿದಿನ ಮೊಸರು ಸೇವನೆಯ ಲಾಭಗಳೇನು?

ನೀವು ದಿನವೂ ಮೊಸರು ಸೇವಿಸುತ್ತೀರಿ. ಅದರಲ್ಲೂ ಮಧ್ಯಾಹ್ನ ಸೇವಿಸಿ. ಮೊಸರು ಸೇವಿಸಿದರೆ ದೇಹಕ್ಕೆ ತಂಪಾಗುತ್ತದೆ ಎನ್ನುತ್ತಾರೆ. ಆದರೆ ಮೊಸರು ಹೀಟ್, ಮಜ್ಜಿಗೆ ತಂಪು. ದೇಹ ಹೀಟ್ ಅಥವಾ ಕೂಲ್ ಮಾಡುವ ಗುಣ ಅಷ್ಟೇ ಅಲ್ಲಾ ಮೊಸರಿನಿಂದ ತುಂಬಾನೇ ಉಪಯೋಗವಿದೆ. ರಾತ್ರಿ ವೇಳೆ ಮೊಸರು ಸೇವನೆ ಅಷ್ಟಾಗಿ ಆರೋಗ್ಯಕ್ಕೆ ಉತ್ತಮವಲ್ಲ. 

ದಿನವೂ ಮೊಸರು ಸೇವಿಸುವುದರಿಂದ ಹೃದಯ, ಹೊಟ್ಟೆ, ಹಾಗೂ ಚರ್ಮಕ್ಕೆ ಆಗುವ ಲಾಭಗಳು:

1. *ಜೀರ್ಣಕ್ರಿಯೆ*: ತಿಂದ ಆಹಾರ ಚೆನ್ನಾಗಿ ಪಚನಗೊಳ್ಳಲು ಮೊಸರು ಬೇಕು. ಕೆಲವೊಬ್ಬರು ಪ್ರತಿದಿನವೂ ಮೊಸರು ತಿನ್ನುವ ಅಭ್ಯಾಸ ಇಟ್ಟಕೊಂಡಿರುತ್ತಾರೆ. ಅಂತವರಿಗೆ ಜೀರ್ಣಕ್ರಿಯೆ ಸಮಸ್ಯೆ ಬರುವುದಿಲ್ಲ.

2. *ಮೂಳೆಗಳ ಆರೋಗ್ಯ*: ಹಾಲು ಹಾಗೂ ಹಾಲಿನ ಎಲ್ಲಾ ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಇರುತ್ತದೆ. ಇದು ನಿಮ್ಮ ಮೂಳೆಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ. ಮೂಳೆ ಗಟ್ಟಿ ಆಗಲು ಹಾಲು ಹಾಗೂ ಹಾಲಿನ ಪದಾರ್ಥ ಬಳಸಬೇಕು.

3. *ರೋಗನಿರೋಧಕ ಶಕ್ತಿ*: ಪ್ರತಿದಿನವೂ ಮದ್ಯಾಹ್ನದ ಹೊತ್ತು ಮೊಸರು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ರೋಗ ನಿರೋಧಕ ಶಕ್ತಿ ಬರಲು ಏನೇನೋ ಮಾಡುವ ಬದಲು ಹೀಗೆ ದಿನವೂ ಮೊಸರು ಸೇವಿಸಿ ರೋಗದಿಂದ ರಕ್ಷಣೆ ಪಡೆಯಬಹುದು.

4. *ಕೂದಲು*: ಬರೀ ಆರೋಗ್ಯಕ್ಕೆ ಅಲ್ಲ, ಬಾಹ್ಯ ಸೌಂದರ್ಯಕ್ಕೂ ಇದು ಸಹಾಯಕ. ವಾರಕ್ಕೆ ಒಮ್ಮೆ ತಲೆಗೆ ಮೊಸರು ಹಚ್ಚಿ ಸ್ನಾನ ಮಾಡಿದರೆ ಕೂದಲು ನಯವಾಗಿರುತ್ತದೆ. ಇನ್ನು ದೇಹದ ಒಳಗಿನಿಂದಲೂ ಕೂದಲು ಚೆನ್ನಾಗಿ ಬೆಳೆಯಲು ಮೊಸರು ಸಹಕರಿಸುತ್ತದೆ.

5. *ಆರೋಗ್ಯಕರ ಹೃದಯ*: ಪ್ರತಿದಿನ ನಾವು ತಿನ್ನುವ ಆಹಾರದಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಪೋಷಕಾಂಶ ಸಿಗುವುದಿಲ್ಲ. ಮೊಸರು ತಿನ್ನುವುದರಿಂದ ಆರೋಗ್ಯಕರ ಹೃದಯ ನಮ್ಮದಾಗಲಿದೆ.

6. *ವೆಜೈನಲ್ ಹೆಲ್ತ್* : ಹೆಣ್ಣು ಮಕ್ಕಳ ಗುಪ್ತಾಂಗಗಳ ಸುರಕ್ಷತೆ ಹಾಗೂ ಅದರ ಆರೋಗ್ಯಕ್ಕೂ ಮೊಸರಿನಿಂದ ಲಾಭವಿದೆ. ಯಾವುದೇ ರೀತಿ ಸೋಂಕು, ತುರಿಕೆ ಹೀಗೆ ಯಾವ ಸಮಸ್ಯೆಯೂ ಬೇಡ ಎಂದರೆ ಮೊಸರು ಸೇವಿಸಿ.

7. *ಚರ್ಮ ರಕ್ಷಣೆ* : ಚರ್ಮ ಸದಾ ಹೊಳಪಾಗಿರಲು ದುಬಾರಿ ಕ್ರೀಂಗಳ ಮೊರೆ ಹೋಗದೆ ಮನೆಯಲ್ಲಿಯೇ ಮುಖಕ್ಕೆ ಮೊಸರು ಹಚ್ಚುವುದು, ತಿನ್ನುವುದು ಮಾಡಿ. ಇದು ನಿಮ್ಮ ಪೂರ್ಣ ಆರೋಗ್ಯಕ್ಕೆ ಸಹಕಾರಿಯಾಗಿದೆ. ಕಡ್ಲೆಹಿಟ್ಟಿನ  ಜೊತೆ ಮೊಸರು ಹಾಕಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಬಹುದು.

*ಜಾಗ್ರತಿ ಫೌಂಡೇಶನ್ ಕಾರ್ಕಳ.*ಇವರ ವಾಟ್ಸಾಪ್ ಖಾತೆಯಿಂದ ಸಂಗ್ರಹಿತ ಮಾಹಿತಿ