*ನಮಿಪೆ ನಮಿಪೆ ಶೈಲಪುತ್ರಿ*

Submitted by Shreerama Diwana on Sat, 10/17/2020 - 09:38
ಬರಹ

(ಶರಣು ಶರಣು ಜಯದುರ್ಗೆ)

ನಮಿಪೆ ನಮಿಪೆ ಶೈಲ ಪುತ್ರಿ

ಮಹಾ ಶಕ್ತಿ ಗುಣಗಾತ್ರಿ

ನಮಿಪೆ ನಮಿಪೆ ಶೂಲಧಾರಿ

ಮಹಾಮಹಿಮ ಗಾಯತ್ರಿ||

 

ನವರಾತ್ರಿಯಲಿ ಭಕುತರು

ನಿನ್ನ ಯ ಬಿಡದೆ  ಭಜಿಸುವರು

ಕರದಲಿ ಕಮಲವ ಹಿಡಿಯುತಲಿ

ನಂದಿಯ ನೇರಿ ಬರುತಿಹಳು||

 

ನಗಿಸುವವಳು ನೀನೆ ಅಳಿಸುವವಳು ನೀನೆ

ನಿ‌ನ್ನಯ ನಾಮ ತುಂಬಿದೆ ಹೃದಯ

ನವರಾತ್ರಿಯಲಿ ನೆನೆಯುವ ಸಮಯ||

 

ಜಯ ಶಾಕಾಂಬರಿ ಜಯ ಮೂಕಾಂಬಿಕೆ

ಜಯಜಯ ಶಕ್ತಿ ಜಯ ಕಾತ್ಯಾಯಿನಿ

ಜಯ  ಪರಮೇಶ್ವರಿ ಜಯ ಕಾಮೇಶ್ವರಿ

ಜಯ ಕಾದಂಬಿನಿ ಜಯ ಜಗಜ್ಜನನಿ||

 

ಜಯ ಪರ್ವತ ಪುತ್ರಿ ಶ್ರೀಗಾಯತ್ರಿ

ಜಯ ಕಾಮಾಕ್ಷಿ ಪುಣ್ಯ ಪ್ರದಾಯಿಣಿ

ತ್ರಿಶೂಲಧಾರಿಣಿ ಅಂಭಾ ಭವಾನಿ

ಪ್ರಥಮದಿ ಭಜಿಸುವೆ ಶ್ರೀದಾಕ್ಷಾಯಿಣಿ||

-ಶಂಕರಾನಂದ ಹೆಬ್ಬಾಳ 

 

ಚಿತ್ರ್