ಬ್ರಹ್ಮಚಾರಿಣಿ ದೇವಿ

ಬ್ರಹ್ಮಚಾರಿಣಿ ದೇವಿ

ಕವನ

ಬ್ರಹ್ಮ ಚಾರಿಣಿ ದೇವಿ ಚರಣಕೆ

ಶಿರವ ಬಾಗುತ ನಮಿಸುವೆ|

ಜಪದ ಮಾಲೆಯ ಕರದಿ ಪಿಡಿಯುತ

ಸೌಮ್ಯ ಭಾವವ ತೋರುವೆ||ಪ||

 

ಎಲೆಯ ಸೇವಿಸಿ ಬದುಕಿ ತಪವನು

ಮಾಡಿ ನಿಂತ ಪಾರ್ವತಿ|

ಫಲವ ಪುಷ್ಪದ ಮಾಲೆ ಧರಿಸಿದ

ಮೈನ ಪುತ್ರಿಯೆ ಗುಣಮತಿ||

 

ಶ್ವೇತ ವಸ್ತ್ರವು ನಗುವ ವದನವು

ಕರದಿ ಕಮಂಡಲವಿಡಿಯುತ|

ಮಾತೆ ಉಮೆಯು ಶಿವನ ಮಡದಿಯು

ಉಗ್ರ ತಪವನು ಗೈಯುತ||

 

ಸುಮವು ಮಲ್ಲಿಗೆ ನಲಿದು ಕುಣಿದಿದೆ

ತಾಯೆ ನಿನ್ನ ಕೇಶದಿ|

ಕುಜದ ದೋಷವ ಪರಿಯ ಹರಿಸುತ

ದೂರಗೊಳಿಸುವೆ ಹಾಸದಿ||

 

ದಕ್ಷಪುತ್ರಿಯು ಯಜ್ಞ ಕುಂಡದಿ

ಮುಳುಗಿ ಬರುತಿಹೆ ಜಪದಲಿ

ರಕ್ಷೆ ಮಾಡುವ ನಿನ್ನ ಸ್ಮರಿಸುವೆ

ಕರವ ಜೋಡಿಸಿ ತಪದಲಿ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್