ವಾಲಿದ ತಲೆಯ ಟೆಡ್ಡಿ ಕರಡಿ
ಪುಟ್ಟಣ್ಣ ದಂಪತಿಯ ಗೊಂಬೆ ಮಳಿಗೆಯಲ್ಲಿ ಹತ್ತುಹಲವು ಬಗೆಯ ಬೊಂಬೆಗಳು. ಮಳಿಗೆಯ ಹಿಂಭಾಗದ ಕೋಣೆಯಲ್ಲಿ ಅವರು ಕೈಯಿಂದಲೇ ಗೊಂಬೆಗಳನ್ನು ಮಾಡುತ್ತಿದ್ದರು. ಅವರಿಗೆ ವಯಸ್ಸಾಗಿದ್ದು ಇತ್ತೀಚೆಗೆ ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ.
ಪುಟ್ಟಣ್ಣನ ಪತ್ನಿ ಪದ್ಮಿನಿ ಹೇಳಿದಳು, “ನಾವಿನ್ನು ಯಾರಿಗಾದರೂ ಗೊಂಬೆ ಮಾಡುವುದನ್ನು ಕಲಿಸಬೇಕು." ಕೆಲವೇ ದಿನಗಳಲ್ಲಿ ಅವರು ತಂಗಣ್ಣ ಎಂಬ ಯುವಕನನ್ನು ಗೊಂಬೆ ಮಾಡುವುದರಲ್ಲಿ ತರಬೇತಿ ಪಡೆಯಲಿಕ್ಕಾಗಿ ನೇಮಿಸಿಕೊಂಡರು. ತಂಗಣ್ಣ ಕಷ್ಟ ಪಟ್ಟು ಕೆಲಸ ಮಾಡುತ್ತಿದ್ದ. ಮೊದಲನೆಯ ವಾರದಲ್ಲಿ ಅವನು ಟೆಡ್ಡಿ (ಗೊಂಬೆ) ಕರಡಿಗಳನ್ನು ಮಾಡಿದ.
- Read more about ವಾಲಿದ ತಲೆಯ ಟೆಡ್ಡಿ ಕರಡಿ
- Log in or register to post comments
ಶಂಕರಾನಂದ ಹೆಬ್ಬಾಳರ ಗಝಲ್
ಹೃದಯವ ಪ್ರೀತಿಸಿದವನ ಹೆಸರನ್ನು
ಮರೆವೆಯಾ ಗೆಳತಿ|
ಮನಸಿನಲ್ಲಿ ಪ್ರೇಮದ ಭಾವವನು
ತೊರೆವೆಯಾ ಗೆಳತಿ||
ಆಂತರ್ಯದ ನಾದವನು ವೀಣೆಯಲಿ
- Read more about ಶಂಕರಾನಂದ ಹೆಬ್ಬಾಳರ ಗಝಲ್
- Log in or register to post comments
ಸಾವಿರಾರು ಶಿಶುಗಳ ‘ಅಮ್ಮ'- ಸೂಲಗಿತ್ತಿ ನರಸಮ್ಮ
ನಾನು ಈಗಾಗಲೇ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಲ್ದಾರ್ ನಾಗ್, ಜಾಧವ್ ಪಯಾಂಗ್, ಲಕ್ಷ್ಮಿ ಕುಟ್ಟಿ ಬಗ್ಗೆ ಲೇಖನ ಬರೆದೆ. ನನ್ನ ಲೇಖನ ಓದಿದ ಹಲವಾರು ಮಂದಿ ನೀವು ಬರೆದ ಮಹನೀಯರು ಎಲ್ಲರೂ ಕರ್ನಾಟಕ ರಾಜ್ಯದ ಹೊರಗಿನವರು. ನಮ್ಮ ಕರ್ನಾಟಕ ರಾಜ್ಯದ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರತಿಭಾವಂತರ ಬಗ್ಗೆ ಯಾಕೆ ಬರೆಯುವುದಿಲ್ಲ ಎಂದರು. ಪ್ರತಿಭೆಗೆ ರಾಜ್ಯದ, ದೇಶದ ಸೀಮೆಗಳಿರುವುದಿಲ್ಲ. ಆದರೂ ಕರ್ನಾಟಕದಲ್ಲೂ ಪದ್ಮ ಪ್ರಶಸ್ತಿ ಪಡೆದ ಹಲವಾರು ಮಂದಿ ಗಣ್ಯರು ಇದ್ದಾರೆ. ೨೦೧೮ರಲ್ಲಿ ಪದ್ಮ ಪ್ರಶಸ್ತಿ ದೊರೆತವರ ಪಟ್ಟಿ ನೋಡಿದಾಗ ನಾನು ಸೂಲಗಿತ್ತಿ ನರಸಮ್ಮ ಅವರ ಸಾಧನೆ ಬಗ್ಗೆ ಗಮನಿಸಿದ್ದೆ.
- Read more about ಸಾವಿರಾರು ಶಿಶುಗಳ ‘ಅಮ್ಮ'- ಸೂಲಗಿತ್ತಿ ನರಸಮ್ಮ
- Log in or register to post comments
*ಆ ಕಾಲ ಬಹಳ ಚೆನ್ನಾಗಿತ್ತು*
ಮೊಬೈಲ್ ಹೀಗೇ ನೋಡುತ್ತಿರುವಾಗ ವಾಟ್ಸಾಪ್ ನಲ್ಲಿ ಬಂದ ಈ ಕೆಳಗಿನ ಕೆಲವು ವಿಷಯಗಳನ್ನು ಓದುವಾಗ ‘ಹೌದಲ್ವಾ’ ಮೊದಲು ಹೀಗೇ ಇತ್ತಲ್ವಾ ಎಂದು ಅನಿಸಿದ್ದು ಸುಳ್ಳಲ್ಲ. ನೀವೂ ಒಮ್ಮೆ ಓದಿ ಬಿಡಿ. ಮಜಾ ಕೊಡುತ್ತೆ. ನಿಮ್ಮ ಬಾಲ್ಯದ ನೆನಪು ಕಾಡಿದರೂ ಕಾಡಬಹುದು.
- Read more about *ಆ ಕಾಲ ಬಹಳ ಚೆನ್ನಾಗಿತ್ತು*
- Log in or register to post comments
ಬಾಳಿಗೊಂದು ಚಿಂತನೆ (5) - ನೋವು
ಇಲ್ಲಿ ನೋವು ಅಂದಾಕ್ಷಣ ನಮಗೆ ಕಣ್ಣೆದುರು ಬರುವುದು ಯಾತನೆ ಅಥವಾ ಗಾಯ, ಅನಾರೋಗ್ಯದ ಬೇನೆಗಳು. ಇದು ಆ ನೋವಲ್ಲ. ಶಾಶ್ವತವಾಗಿ ಮನಸ್ಸಿನಲ್ಲಿ ಮನೆ ಮಾಡುವ, ಎಷ್ಟು ಮರೆಯಬೇಕೆಂದರೂ ಮರೆಯಲು ಸಾಧ್ಯವಾಗದ ನೋವು. ಮಾತಿನ ನೋವು ಅಷ್ಟೂ ಆಳಕ್ಕೆ ದೇಹದಲ್ಲಿ ಬಲವಾಗಿ ಸ್ಥಾನಪಡೆದುಕೊಂಡು, ಜಪ್ಪಯ್ಯ ಅಂದರೂ ಹೊರಹೋಗದು.
- Read more about ಬಾಳಿಗೊಂದು ಚಿಂತನೆ (5) - ನೋವು
- Log in or register to post comments
ಶ್ರೀ. ಹಿರೇಮಗಳೂರ್ ಕಣ್ಣನ್ ಕನ್ನಡದಲ್ಲಿ ನಮ್ಮ ಜೀವನದ ಸಂಸ್ಕಾರಗಳನ್ನು (ನಾಮಕರಣ, ಅನ್ನಪ್ರಾಶನ, ವಿವಾಹಗಳೇ ಮೊದಲಾದವುಗಳನ್ನು) ವಿಧಿವತ್ತಾಗಿ ಮಾಡಿ ತೋರಿಸಿದ್ದಾರೆ.
'ಅನುಭವಾಮೃತ' ನಮ್ಮ ತಂದೆ, ಸುಂಕದ ರಂಗರಾಯರಿಗೆ ಅತ್ಯಂತ ಪ್ರೀತಿಯ ಪುಸ್ತಕ. ಅದನ್ನು ರಚಿಸಿದವರು ಶ್ರೀ. ಮಹಾಲಿಂಗ ರಂಗ. ಅವರು ಕ್ರಿ.ಶ.೧೬೭೫ ರಲ್ಲಿ ಇದ್ದಿರ ಬಹುದು. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಅನುಭವಾಮೃತ ಪದ್ಯ ಗುಚ್ಛದಲ್ಲಿ ಅದ್ವೈತವನ್ನು ಸರಳವಾಗಿ ಬೋಧಿಸುವ ಪ್ರಯತ್ನವನ್ನು ಕಾಣಬಹುದು. ಮಹಾಲಿಂಗರಂಗ ನಮ್ಮ ಚಿತ್ರದುರ್ಗಜಿಲ್ಲೆಗೆ ಸೇರಿದ ಉಚ್ಚಿಂಗಿದುರ್ಗದ ನಿವಾಸಿ. ಮುಂದೆ ಅವರು ನಿರ್ವಾಣ ಹೊಂದಿದ ಜಾಗ : ಕೊಣಚಕಲ್ ಬಳಿಯ ರಂಗನಾಥಸ್ವಾಮಿ ಗುಡ್ಡದಲ್ಲಿ. ಈ ಕೊಣಚಕಲ್ ಊರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿದೆ.
ಮಾನ್ಸೂನ್ ಸಮಯದಲ್ಲಿ ಮುಂಬಯಿನಗರದಲ್ಲಿ ಆಗುವ ಅವಘಡಗಳು :
ಈ ಬಾರಿ ೨೦೨೦ ರ ಅಕ್ಟೊಬರ್ ೩ ಶನಿವಾರದಂದು ಘಾಟ್ಕೋಪರ್ (ಪ) ದ ಅಸಲ್ಫಾ ನಿವಾಸಿ, 'ಶ್ರೀಮತಿ ದಾಮಾ ಶೀತಲ್' ಎಂಬ ಹೆಸರಿನ ೩೨ ವರ್ಷದ ಗೃಹಿಣಿ, 'ಮ್ಯಾನ್ ಹೋಲ್' ನಲ್ಲಿ ಆಯತಪ್ಪಿ ಬಿದ್ದು ಮರಣಹೊಂದಿದ್ದಾರೆ. ಮಳೆಹನಿ ಹಾಕುತ್ತಿತ್ತು.ತಮ್ಮ ಮನೆಯ ಹತ್ತಿರದಲ್ಲೇ ಇದ್ದ ಹಿಟ್ಟಿನ ಗಿರಣಿಗೆ ತಮ್ಮ ಪುಟ್ಟ ಮಗುವನ್ನೂ ಕರೆದುಕೊಂಡು ಹೋಗುತ್ತಿದಾಗ, ಅವರಿಗೆ ಮಳೆ ಹೆಚ್ಚಾಗಬಹುದೆಂದು ಅನ್ನಿಸಿ ಮಗುವನ್ನು ಮನೆಗೆ ಕಳಿಸಿದರು. ಆಮೇಲೆ ಸುಮಾರು ೭ ಗಂಟೆಸಮಯದವರೆಗೂ ಮನೆಗೆ ವಾಪಸ್ ಆಗದಿದ್ದರಿಂದ ಅವರ ಪರಿವಾರದವರಿಗೆ ಅನುಮಾನವಾಗಿ, ಗಿರಣಿ ಹತ್ತಿರದಜನರನ್ನು ವಿಚಾರಿಸಿದರು. ಎಲ್ಲೂ ಪತ್ತೆಸಿಗದೆ. 'ಪೊಲೀಸ್ ಕಂಪ್ಲೇಮ್ಟ್' ಕೊಟ್ಟರು.
‘ಕ’ವರ್ಗದ ಮುಕ್ತಕಗಳು
*ಕ* ನ್ನಡದ ವರ್ಣವದು ಸುಂದರವು ಬರೆಯಲ್ಕೆ
ತನ್ನನದು ಹೋಲುತಿರೆ ಸುಲಭದಲ್ಲಿ|
ಕನ್ನಡಕ ಧರಿಸದೆಯೆ ನೋಡುತ್ತ ಲಿಪಿಯನ್ನು
ರನ್ನವೆನ್ನುವರಲ್ಲಿ - ರುಕ್ಮಿಣಿಸುತ||
*ಕಾ* ದಿಹರು ಮೋಕ್ಷಕ್ಕೆ ಪೋಗುವಾ ದಾರಿಯಂ
- Read more about ‘ಕ’ವರ್ಗದ ಮುಕ್ತಕಗಳು
- Log in or register to post comments
ಫ್ರಾಂಕನ್ ಸ್ಟೈನ್
ಮೇರಿ ಶೆಲ್ಲಿ ಹತ್ತೊಂಬತ್ತನೆಯ ಶತಮಾನದಲ್ಲಿ ಬಹುಮಟ್ಟಿಗೆ ಚಾಲ್ತಿಯಲ್ಲಿದ್ದ ಕಾದಂಬರಿಕಾರ್ತಿ. ಅವಳು ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಬರೆದ ‘ಫ್ರಾಂಕನ್ ಸ್ಟೈನ್’ ಎಂಬ ಕಾದಂಬರಿ ಅವಳನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿಬಿಟ್ಟಿತು. ಮೇರಿ ಶೆಲ್ಲಿ ೧೭೯೭ರ ಆಗಸ್ಟ್ ೩೦ರಂದು ಇಂಗ್ಲೆಂಡಿನಲ್ಲಿ ಹುಟ್ಟಿದಳು. ಉತ್ತಮ ಶಿಕ್ಷಣವನ್ನು ಪಡೆದ ಮೇರಿ, ತನ್ನ ಹದಿನೆಂಟನೇ ವಯಸ್ಸಿನಲ್ಲಿ ತನ್ನದೇ ತಂದೆಯ ಗೆಳೆಯನಾದ ಪರ್ಸಿ ಬಿ.ಶೆಲ್ಲಿ ಜೊತೆ ಪ್ರೇಮಾಂಕುರವಾಗಿ ಅವನ ಜೊತೆ ಪ್ಯಾರಿಸ್ಸಿಗೆ ಓಡಿ ಹೋದಳು. ನಂತರ ಹಲವಾರು ಸಂಕಷ್ಟಗಳನ್ನು ಎದುರಿಸಿ ೧೮೧೬ರಲ್ಲಿ ಮದುವೆಯಾದಳು.
- Read more about ಫ್ರಾಂಕನ್ ಸ್ಟೈನ್
- Log in or register to post comments