*ಆ ಕಾಲ ಬಹಳ ಚೆನ್ನಾಗಿತ್ತು*

*ಆ ಕಾಲ ಬಹಳ ಚೆನ್ನಾಗಿತ್ತು*

ಮೊಬೈಲ್ ಹೀಗೇ ನೋಡುತ್ತಿರುವಾಗ ವಾಟ್ಸಾಪ್ ನಲ್ಲಿ ಬಂದ ಈ ಕೆಳಗಿನ ಕೆಲವು ವಿಷಯಗಳನ್ನು ಓದುವಾಗ ‘ಹೌದಲ್ವಾ’ ಮೊದಲು ಹೀಗೇ ಇತ್ತಲ್ವಾ ಎಂದು ಅನಿಸಿದ್ದು ಸುಳ್ಳಲ್ಲ. ನೀವೂ ಒಮ್ಮೆ ಓದಿ ಬಿಡಿ. ಮಜಾ ಕೊಡುತ್ತೆ. ನಿಮ್ಮ ಬಾಲ್ಯದ ನೆನಪು ಕಾಡಿದರೂ ಕಾಡಬಹುದು.    

  • ಒಂದು ಸಲ  ರೇಡಿಯೋನಲ್ಲಿ ಕೇಳಿದರೆ ಸಾಕು ಸಿನಿಮಾ ಹಾಡು  ಬಾಯಿಪಾಠ ಆಗ್ತಿತ್ತು  
  • ಕುಳಿತಿರೋ ಕಡೆ, ಬಸ್ಸುಗಳಲ್ಲಿ  ದಿನ ಪತ್ರಿಕೆ ತಂದು ಮಾರಾಟ ಮಾಡುತಿದ್ರು  
  • ಎಲ್ಲರ ಮನೆಯಲ್ಲೂ ಸೈಕಲ್ ಇತ್ತು . 
  • ಅಣ್ಣಾವ್ರ  ಹಳೇ ಚಿತ್ರಗಳು ಮನೆ ,ಮನಕ್ಕೆ ಖುಶಿ ಕೊಡ್ತಿತ್ತು
  • ಎಲ್ಲ ಬಸ್ಸುಗಳಲ್ಲೂ ಸೀಟ್ ಸಿಗ್ತಾ ಇತ್ತು
  • ಮದುವೆ  ಮನೆಗಳಲ್ಲಿ ಕೆಳಗೆ ಕೂರಿಸಿ ಊಟ ಬಡುಸ್ತಿದ್ರು 
  • ಕಪಿಲ್ ದೇವ್  ಕ್ರಿಕೆಟ್  ೫ ದಿನಗಳ ಟೆಸ್ಟ್ ಫೆಂಟಾಸ್ಟಿಕ್. 
  • ಪ್ರಜಾಮತ, ಸುಧಾ, ತರಂಗ ಪತ್ರಿಕೆಗಳಲ್ಲಿ ಒಳ್ಳೆ ಧಾರವಾಹಿ, ಕಥೆಗಳು ಬರುತ್ತಿತ್ತು.
  • ಮನೆಗಳಲ್ಲಿ ಟೇಪ್ ರೆಕಾರ್ಡರ್ ನಲ್ಲಿ ಸಂಗೀತ ಕೇಳ್ತಿದ್ರು  
  • ಮನೆ ಮುಂದುಗಡೆ ಹೆಂಗಸರು ರಂಗೋಲಿ ಹಾಕ್ತಿದ್ರು . 
  • ಸಿನೆಮಾಗೆ ಹೋಗೋಕ್ಕೆ ಎರಡು ಮೂರು ದಿನಗಳ ಪ್ಲಾನ್ ಹಾಕ್ಬೇಕಿತ್ತು 
  • ಯುಗಾದಿ, ದೀಪಾವಳಿ, ವಿಜಯದಶಮಿ ಬರೋದಿಕ್ಕೆ ಒಂದು ತಿಂಗಳು ಮುಂಚಿತವಾಗಿ ಕಾಯುತಿದ್ವಿ 
  • ಆ ಕಾಲಕ್ಕೆ ಟಾನ್ಸಿಲ್ಸ್ ದೊಡ್ಡ  ಆಪರೇಷನ್ 
  • ರೇಡಿಯೋನಲ್ಲಿ ಬರುವ ನಾಟಕಗಳು ಬಲು ಚೆನ್ನಾಗಿತ್ತು 
  • ಸುಮಾರು ಎಲ್ಲರೂ ಸರ್ಕಾರಿ ಶಾಲೆಯಲ್ಲೇ ಓದಿದ್ವಿ 
  • ಅಪರೂಪಕ್ಕೆ ರಸ್ತೆಯಲ್ಲಿ ಯಾವಾಗಲೋ ಒಂದು ಕಾರು ಹೋಗ್ತಿತ್ತು 
  • ಮಳೆ, ನಿಂತು ನಿಧಾನವಾಗಿ ಸುರಿಯುತ್ತಿತ್ತು 
  • ಕನ್ನಡ ಮೇಷ್ಟರಿಗೆ ಸರಿ ಸಾಟಿ ಯಾರು ಇರಲಿಲ್ಲ 
  • ಸುಲಭವಾಗಿ ವಧು ಸಿಕ್ಕುತಿದ್ಲು 
  • ವೆಸ್ಟ್ ಇಂಡೀಸನ್ನು ಕ್ರಿಕೆಟ್ ಆಟದಲ್ಲಿ ಗೆಲ್ಲುವುದು ಸಾಧ್ಯವಿರಲಿಲ್ಲ
  • ಸಂತೆಗೆ, ಜಾತ್ರೆಗೆ ಹೋಗಲು ಹತ್ತು ರೂಪಾಯಿ ಸಾಕಿತ್ತು 
  • ಅಮ್ಮ ಪಕ್ಕದಲ್ಲಿ ಕಥೆ ಕೇಳುತ್ತಾ ಆಗಾಗ ಮಲಗುತಿದ್ವಿ 
  • ಉರಿ ಬಿಸಿಲಿನಲ್ಲೂ ಚಪ್ಪಲಿ ಇಲ್ಲದೆ ನಡೆಯುತ್ತಿದ್ದೆವು 
  • ಹೇರ್ ಕಟ್ ಮಾಡಲು ಎರಡು ರೂಪಾಯಿ, ಶೇವಿಂಗ್ ಗೆ ಐವತ್ತು ಪೈಸೆ 
  • ಮದುವೆ ವಯಸ್ಸಿನ ಹೆಣ್ಣು ಮಕ್ಕಳು ಲಂಗ ದಾವಣಿ ಹಾಕುತಿದ್ರು 
  • ರಸ್ತೆಯಲ್ಲಿ ಲಗೋರಿ ಆಟ, ಸೈಕಲ್ ಟೈಯರ್ ಓಡಿಸುತಿದ್ವಿ 
  • ಎಸ್ ಎಲ್ ಬೈರಪ್ಪ, ಕುವೆಂಪು, ಎನ್.ನರಸಿಂಹಯ್ಯ, ತ್ರಿವೇಣಿಯವರ ಕಾದಂಬರಿಗಳು ಮನೆ ಮಾತಾಗಿತ್ತು 
  • ನವಿಲು ಗರಿ ಮರಿ ಹಾಕುವುದು ಎಂದು ನೋಟ್ ಪುಸ್ತಕದ ನಡುವೆ ಇಡುತಿದ್ವಿ 
  • ಐದು ರೂಪಾಯಿ ಕಳೆದುಕೊಂಡೆ ಅಂತ ಅಪ್ಪನ ಹತ್ತಿರ ಒದೆ ತಿನ್ನುತ್ತಿದ್ವಿ
  • ನಾಲ್ಕನೇ ತರಗತಿಯಿಂದ ಮಾತ್ರ ಇಂಗ್ಲಿಷ್ ಪಾಠ, ಎಂಟನೇ ಕ್ಲಾಸ್ ವರೆಗೂ ಅರ್ಧ ನಿಕ್ಕರು 
  • ಉಸಿರಾಡಲು ಶುದ್ಧ ಗಾಳಿ ಇತ್ತು ,ಕುಡಿಯುವ ನೀರನ್ನು ಯಾರು ಮಾರುತ್ತಿರಲಿಲ್ಲ 
  • ಸಿನಿಮಾ ಹಾಡಿನ ಪುಸ್ತಕ ಫುಟಪಾತ್ ನಲ್ಲಿ ಮಾರುತಿದ್ರು 

ಒಟ್ಟಿನಲ್ಲಿ  ಆಗ ಬಹಳ ಮರ್ಯಾದೆ ಇದ್ದಂತಹ ಕಾಲ ,ಕಳೆದು ಹೋದದ್ದು ದಿನಗಳು ಮಾತ್ರವಲ್ಲ ನಮ್ಮ ಸುಖಗಳು ಕೂಡ, ಅದ್ಬುತವಾದ ನೆನಪುಗಳೂ ಹೌದು. ಈಗ ಕಾಲ ಕ್ರಮೇಣ ಬದಲಾವಣೆಯ ಗಾಳಿ ಬೀಸಿದೆ ಬಯಸಿದೆ. ಹೊಸತನಕ್ಕೆ ನಾವು ಹಳಬರು ಒಗ್ಗಿ ಕೊಳ್ಳಲೇ ಬೇಕು. ಯಾಕೆಂದರೆ ಯುವಕರು ಇಂದಿನ ದಿನದ ಸವಿಯನ್ನು ಅನುಭವಿಸುತ್ತಿದ್ದಾರೆ. ಹಿಂದಿನ ನೆನಪುಗಳನ್ನು ಮೆಲುಕು ಹಾಕುತ್ತಾ ನಾವೂ ಹೊಸತನಕ್ಕೆ ತೆರೆದುಕೊಳ್ಳೋಣ. ಅಲ್ಲವೇ?

(ಸಂಗ್ರಹ) ಚಿತ್ರ ಕೃಪೆ: ಇಂಟರ್ನೆಟ್