ಮಾನ್ಸೂನ್ ಸಮಯದಲ್ಲಿ ಮುಂಬಯಿನಗರದಲ್ಲಿ ಆಗುವ ಅವಘಡಗಳು :

ಮಾನ್ಸೂನ್ ಸಮಯದಲ್ಲಿ ಮುಂಬಯಿನಗರದಲ್ಲಿ ಆಗುವ ಅವಘಡಗಳು :

ಈ ಬಾರಿ ೨೦೨೦ ರ ಅಕ್ಟೊಬರ್ ೩ ಶನಿವಾರದಂದು ಘಾಟ್ಕೋಪರ್ (ಪ) ದ ಅಸಲ್ಫಾ  ನಿವಾಸಿ, 'ಶ್ರೀಮತಿ ದಾಮಾ ಶೀತಲ್' ಎಂಬ ಹೆಸರಿನ ೩೨ ವರ್ಷದ ಗೃಹಿಣಿ,  'ಮ್ಯಾನ್ ಹೋಲ್' ನಲ್ಲಿ ಆಯತಪ್ಪಿ ಬಿದ್ದು ಮರಣಹೊಂದಿದ್ದಾರೆ. ಮಳೆಹನಿ ಹಾಕುತ್ತಿತ್ತು.ತಮ್ಮ ಮನೆಯ ಹತ್ತಿರದಲ್ಲೇ ಇದ್ದ ಹಿಟ್ಟಿನ ಗಿರಣಿಗೆ ತಮ್ಮ ಪುಟ್ಟ ಮಗುವನ್ನೂ  ಕರೆದುಕೊಂಡು ಹೋಗುತ್ತಿದಾಗ, ಅವರಿಗೆ ಮಳೆ ಹೆಚ್ಚಾಗಬಹುದೆಂದು ಅನ್ನಿಸಿ ಮಗುವನ್ನು  ಮನೆಗೆ ಕಳಿಸಿದರು. ಆಮೇಲೆ ಸುಮಾರು ೭ ಗಂಟೆಸಮಯದವರೆಗೂ ಮನೆಗೆ ವಾಪಸ್ ಆಗದಿದ್ದರಿಂದ ಅವರ ಪರಿವಾರದವರಿಗೆ ಅನುಮಾನವಾಗಿ, ಗಿರಣಿ ಹತ್ತಿರದಜನರನ್ನು  ವಿಚಾರಿಸಿದರು.  ಎಲ್ಲೂ ಪತ್ತೆಸಿಗದೆ.  'ಪೊಲೀಸ್ ಕಂಪ್ಲೇಮ್ಟ್' ಕೊಟ್ಟರು. ಮುಂಬಯಿ ಪೊಲೀಸರು,ಮತ್ತು  'ಮುಂಬಯಿ ಮಹಾನಗರಪಾಲಿಕೆಯ ಒಳಚರಂಡಿ ಸಿಬ್ಬಂದಿಗಳೊಡನೆ ಜಂಟಿಯಾಗಿ'  ಸುಮಾರು ೩೩ ಗಂಟೆಗಳ ಕಾಲ 'ಮಾಹಿಮ್', 'ಬಾಂದ್ರಾ', 'ಕುರ್ಲಾ' ಪ್ರದೇಶದ ಒಳಚರಂಡಿಗಳಲ್ಲಿ ಹುಡುಕಾಡಿದರು. ಕೊನೆಗೆ ವರ್ಲಿ ಹತ್ತಿರದ 'ಹಾಜಿ ಆಲಿ ದರ್ಗಾ'ದ ಹತ್ತಿರದ ಚರಂಡಿಯಲ್ಲಿ ದೇಹ ಪತ್ತೆಯಾಯಿತು. 
ಘಾಟ್ಕೋಪರ್ ನ 'ಮ್ಯಾನ್ ಹೋಲ್' ನ ಹತ್ತಿರ ಒಂದು 'ಪಿಶ್ವಿ' (ಬ್ಯಾಗ್) ಸಿಕ್ಕಿದ್ದು ಅದರ ಸುಳುವಿನಿಂದ 'ದಾಮ ಶೀತಲ್' ಒಳಗೆ ಬಿದ್ದಿರಬಹುದೆಂದು ಅನುಮಾನಬಂದು  ಹುಡುಕಲು ನೆರವಾಯಿತು. ಆದರೆ ಅಲ್ಲಿ ಈ ಪ್ರಸಂಗ ನಡೆದಾಗ ಯಾರೂ ಗಮನಿಸಿಲ್ಲ. ಮಳೆ ಜೋರಾಗಿ ಬರುತ್ತಿದ್ದು ಎಲ್ಲರೂ ಸಿಕ್ಕ ಕಡೆ ಓಡುತ್ತಿದ್ದರು. 
ಮೃತದೇಹ ಸಿಕ್ಕರೂ, ಒಂದು ತರಹ ಸಂದೇಹಾಸ್ಪದ ರೀತಿಯಲ್ಲಿ ಸಿಕ್ಕಿದ್ದು ಮುನಿಸಿಪಾಲಿಟಿ ಅಧಿಕಾರಿಗಳಿಗೆ ಇನ್ನು ಅರ್ಥವಾಗುತ್ತಿಲ್ಲ ಘಾಟ್ಕೋಪರ್ ಮ್ಯಾನ್ ಹೋಲ್ ಚಿಕ್ಕದಾಗಿದ್ದು ಒಬ್ಬ ಮಹಿಳೆಯ ದೇಹ ಅಲ್ಲಿಂದ ಎಲ್ಲೂ ಸಿಕ್ಕಿಹಾಕಿಕೊಳ್ಳದೆ ೨೨ ಕಿ. ಮೀ ದೂರ ಹೇಗೆ ತೇಲಿಕೊಂಡು ಹೋಗಲು ಸಾಧ್ಯ ? ಈ ಒಳಚರಂಡಿಗೆ ಮೂರು ಕಡೆ ಜಾಯಿಂಟ್ ಗಳಿವೆ. ಅದರಲ್ಲಿ ದೇಹ ತೇಲಿಹೋದರೆ, ಅದು ಮಾಹಿಮ್ ಖಾಡಿಯ 'ಮೀಥಿ  ರಿವರ್' ಹತ್ತಿರ ಹೋಗಿ ಬೀಳಬೇಕಿತ್ತು ಆದರೆ 'ಹಾಜಿ ಆಲಿ' ತನಕ ಹೇಗೆ ಹೋಯಿತು ಎನ್ನುವುದು ಅಧಿಕಾರಿಗಳಿಗೆ  ಅರ್ಥವಾಗುತ್ತಿಲ್ಲ. 

ರಸ್ತೆಯ ರಿಪೇರಿ, ಮೊದಲಾದ ಕೆಲಸಗಳ ತರುವಾಯ, 'ಮ್ಯಾನ್ ಹೋಲ್' ಗಳನ್ನು ಸರಿಯಾಗಿ ಮುಚ್ಚಿಹೋಗುವುದು ಅತಿ ಅನಿವಾರ್ಯ. ಹೊರಗೆ ಒಂದು 'ಕೆಂಪು ದೀಪ'ವನ್ನಾದರೂ ಇಡಬೇಕು. 2018 ರಲ್ಲಿ ಒಬ್ಬ ವೈದ್ಯನನ್ನು ಮುಂಬಯಿ ಶಹರ್ ಕಳೆದುಕೊಂಡಿತು (ಅವರೂ ತಮ್ಮ ಮನೆಯ ಹತ್ತಿರದ ಮ್ಯಾನ್ ಹೋಲ್ ನಲ್ಲಿ ಜಾರಿಬಿದ್ದು, ಮಾರನೆಯ ದಿನ ವರ್ಲಿಯ 'ಹಾಜಿ ಅಲಿ ದರ್ಗಾದ ಚರಂಡಿ'ಯ ಹತ್ತಿರವೇ ಅವರ ದೇಹ ಸಿಕ್ಕಿತ್ತು.) 'ಮುಂಬಯಿ ಮಹಾನಗರ ಪಾಲಿಕೆ ' ಇದನ್ನು ತೀವ್ರವಾಗಿ ಗಮನಿಸಿ ಇದಕ್ಕೆ ಒಂದು ಸಮರ್ಪಕ ಉಪಾಯವನ್ನು ಕಂಡು ಹಿಡಿದು ನಾಗರಿಕರ ಜೀವವನ್ನು ಕಾಪಾಡಬೇಕು. ಇದು ಬಹಳ ಮಹತ್ವದ ಜವಾಬ್ದಾರಿಯಾಗಿದೆ. 

Comments