ಚಂದ್ರಘಂಟ ದೇವಿ ನಮೋ

ಸಿಂಹರೂಢ ಚಂದ್ರಘಂಟ ದೇವಿ

ತ್ರಿನೇತ್ರಧಾರಿ ದಶಹಸ್ತೆ ದುರ್ಗಮಾತೆಯೆ

ಕಸವರ ವರ್ಣದಿ ಹೊಳೆವ ತಾಯಿ

ಮೃದಹಾಸ ನಾನಾಲಂಕಾರ ಭೂಷಿತೆ..

 

ಚಂದ್ರನ ಶಿರದಿ ಧರಿಸಿದ ಚಂದ್ರಘಂಟೆ

ಬಾಘ ಎಂಬ ಸ್ವಾಮಿ ವಿವೇಕಾನಂದರ ನಾಯಿ

ಸ್ವಾಮಿ ವಿವೇಕಾನಂದರ ಬಗ್ಗೆ ಯಾರಿಗೆ ಗೊತ್ತಿಲ್ಲ. ಭಾರತ ದೇಶದ ಸಂಸ್ಕೃತಿಯನ್ನು ವಿಶ್ವದ ಎಲ್ಲೆಡೆ ಪಸರಿಸುವಂತೆ ಮಾಡಿದ ಧೀಮಂತ ಹೆಮ್ಮೆಯ ಸಂತ ಇವರು. ಇವರಿಗೆ ಪ್ರಾಣಿ, ಪಕ್ಷಿಗಳಲ್ಲಿ ಅಪಾರವಾದ ಪ್ರೀತಿ ಇತ್ತು. ಸ್ವಾಮಿ ವಿವೇಕಾನಂದರು ಕೊಲ್ಕತ್ತಾದ ಬೇಲೂರು ಮಠದಲ್ಲಿ ವಾಸವಾಗಿರುವಾಗ ಅವರ ಬಳಿ ಆಡುಗಳು, ಜಿಂಕೆ, ನಾಯಿಗಳು, ಬಾತುಕೋಳಿಗಳು ಮತ್ತು ಹಲವಾರು ಪಕ್ಷಿಗಳು ಇದ್ದುವು. ಹಂಶಿ ಮತ್ತು ಮೋಟ್ರು ಎಂದು ಆಡುಗಳಿಗೆ ಅವರು ಪ್ರೀತಿಯಿಂದ ಹೆಸರನ್ನೂ ಇಟ್ಟಿದ್ದರು.

Image

ಒಂದು ಗಝಲ್ - ನೋವಿನಲಿ ನಲಿವಿನಲಿ...

ನೋವಿನಲಿ ನಲಿವಿನಲಿ

ಭಾಗಿಯಾಗುವೆಯಾ ಇನಿಯಾ||

ಸಂಗೀತದ ಸ್ವರದಲ್ಲಿ

ರಾಗವಾಗುವೆಯಾ ಇನಿಯಾ||

 

ಹಗಲಿರುಳು ಜೊತೆಯಾಗಿ

ಕ್ಯಾರೆಟ್ ಸೇವನೆಯಿಂದ ಆಗುವ ಲಾಭಗಳು

ನಮ್ಮ ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ನೀಡುವುದರಲ್ಲಿ ಎಲ್ಲಾ ತರಕಾರಿ ಹಣ್ಣುಗಳು ಮುಖ್ಯವಾಗಿರುತ್ತದೆ.  ಅದರಲ್ಲಿ ಅಗ್ರ ಸ್ಥಾನದಲ್ಲಿರುವುದು ಹಾಗೂ ಎಲ್ಲರ ಫೇವರೆಟ್ ತರಕಾರಿ ಕ್ಯಾರೆಟ್. ನಮ್ಮ ದೇಹಕ್ಕೆ ಬೇಕಿರುವ ಪ್ರೊಟೀನ್, ವಿಟಮಿನ್, ಪೊಟ್ಯಾಷಿಯಂ, ಕಾರ್ಬೋಹಡ್ರೇಟ್ಸ್ ಸಿಗಲಿದೆ. ಕ್ಯಾರೆಟ್ ಅನ್ನು ನಾವು ಚೆನ್ನಾಗಿ ತೊಳೆದು ಹಸಿಯಾಗಿಯೇ

Image

ಜೇನು ಕಲ್ಲಿನ ರಹಸ್ಯ ಕಣಿವೆ

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
೧೩೦.೦೦ ಮೊದಲ ಮುದ್ರಣ: ಮಾರ್ಚ್ ೨೦೧೬

ಜೇನು ಕಲ್ಲಿನ ರಹಸ್ಯ ಕಣಿವೆ ಇದು ಮಲೆನಾಡಿನ ರೋಚಕ ಕತೆಗಳು ಸರಣಿಯ ನಾಲ್ಕನೇ ಭಾಗದ ಪುಸ್ತಕ. ಎಂದಿನಂತೆ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ತಾವು ಮಲೆನಾಡಿನ ಪರಿಸರದಲ್ಲಿ ಅನುಭವಿಸಿದ ರೋಚಕತೆಗಳನ್ನು ಕಾಲ್ಪನಿಕ ಕಥೆಯ ಮೂಲಕ ಅನಾವರಣ ಮಾಡುತ್ತಾ ಹೋಗುತ್ತಾರೆ. ಗಿರಿಮನೆ ಶ್ಯಾಮರಾವ್ ಅವರು ಈ ಪುಸ್ತಕದಲ್ಲಿ ಒಂದು ಕಾಲ್ಪನಿಕ ಕಥೆಯನ್ನು ತುಂಬಾ ಸೊಗಸಾಗಿ ಹೆಣೆದಿದ್ದಾರೆ. ಒಂದೆಡೆ ಜೇನು ಕಲ್ಲಿನ ಗುಡ್ಡದಲ್ಲಿ ಜೇನು ನೊಣಗಳ ಬಗ್ಗೆ ಸಂಶೋಧನೆ ಮಾಡಲು ಬರುವ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಹಾಗೂ ಅವರ ತಂಡ ಮತ್ತೆ ಈ ತಂಡಕ್ಕೆ ಸಹಕಾರ ನೀಡುವ ಅರಣ್ಯ ಇಲಾಖೆಯ ಪೇದೆಗಳು. ಮತ್ತೊಂದೆಡೆ ಅರಣ್ಯಾಧಿಕಾರಿಯಾದ ಚಂದ್ರಪಾಲ್ ಮತ್ತು ಗಾಂಜಾ ಬೆಳೆಯುವ ವ್ಯಕ್ತಿಗಳು.

ಒಂದು ಒಳ್ಳೆಯ ನುಡಿ (13) - ಅಸೂಯೆ

ಅಸೂಯೆ ಎಂಬ ಬೀಜ ಬಿತ್ತಲ್ಪಟ್ಟು ಕ್ಷಣ ಮಾತ್ತದಲ್ಲಿ ಬೆಳೆದು ಹೆಮ್ಮರವಾಗಿ, ನಾಲ್ದೆಸೆಗೂ ಪಸರಿಸುತ್ತದೆ. ಕೆಟ್ಟದಕ್ಕೆ ಹೆಚ್ಚು ಹೊತ್ತು ಬೇಡ. ಅದೇ ಜಾಗದಲ್ಲಿ ಒಳ್ಳೆಯದನ್ನು ಮಾಡಲು, ಹೇಳಿಸಿಕೊಳ್ಳಲು ತಿಂಗಳಾದರೂ ಸಾಕಾಗದು. ಅಸೂಯೆ ಒಂದು ರೀತಿಯ ಕಾಸರಕದ ಕಾಯಿಯಂತೆ.

Image

ಗೀತಾಮೃತ - 6

ಅಧ್ಯಾಯ ೨

    ವಿಷಯಾ ವಿನಿವರ್ತಂತೇ ನಿರಾಹಾರಸ್ಯ ದೇಹಿನ:/

ರಸವರ್ಜಂ ರಸೋಪ್ಯಸ್ಯ ಪರಂ ದೃಷ್ಟ್ಯಾ ನಿವರ್ತತೇ//೫೯//

Image

ಬ್ರಹ್ಮಚಾರಿಣಿ ದೇವಿ

ಬ್ರಹ್ಮ ಚಾರಿಣಿ ದೇವಿ ಚರಣಕೆ

ಶಿರವ ಬಾಗುತ ನಮಿಸುವೆ|

ಜಪದ ಮಾಲೆಯ ಕರದಿ ಪಿಡಿಯುತ

ಸೌಮ್ಯ ಭಾವವ ತೋರುವೆ||ಪ||

 

ಎಲೆಯ ಸೇವಿಸಿ ಬದುಕಿ ತಪವನು

ಬಾಟಲಿಯಲ್ಲಿ ಪೋಲಾರ್ ಕರಡಿಗೆ ಸಂದೇಶ

ಪೋಲಾರ್ ಕರಡಿ ಹಿಮವಂತ ತನ್ನ ಮುಂಗೈಯನ್ನು ಹಿಮದ ಬಯಲಿನ ಒಂದು ತೂತಿನಲ್ಲಿ ತೂರಿಸಿ ಅಲ್ಲೇನಿದೆ ಎಂದು ಪರೀಕ್ಷಿಸಿತು. ಅಲ್ಲಿ ನೀರಿನಲ್ಲಿ ಏನೋ ಚಲಿಸಿದಂತೆ ಅದಕ್ಕೆ ಕಂಡಿತ್ತು.

ಆಗಲೇ ಒಂದು ಪೆಂಗ್ವಿನ್ ಆ ತೂತಿನಿಂದ ತಲೆ ಹೊರಗೆ ಹಾಕಿತು. ತನ್ನ ರೆಕ್ಕೆಗಳಲ್ಲಿ ಅದು ಒಂದು ಗಾಜಿನ ಬಾಟಲಿಯನ್ನು ಹಿಡಿದು ಕೊಂಡಿತ್ತು. “ಹಿಮಗಡ್ದೆಗಳ ಆ ಬದಿಯಲ್ಲಿ ನಾನು ಇದನ್ನು ಕಂಡೆ. ಇದು ಅಲ್ಲಿ ನೀರಿನ ಅಲೆಗಳಲ್ಲಿ ತೇಲುತ್ತಿತ್ತು” ಎಂದಿತು ಪೆಂಗ್ವಿನ್.

ಇಬ್ಬರು ಗೆಳೆಯರು ಹಿಮದಲ್ಲಿ ಕುಳಿತು ಆ ಬಾಟಲಿಯನ್ನು ಪರೀಕ್ಷಿಸಿದರು. “ಅದರೊಳಗೆ ಏನೋ ಇದೆ” ಎಂದಿತು ಪೆಂಗ್ವಿನ್. ಬಾಟಲಿಯ ಕಾರ್ಕ್ ತೆಗೆದು, ಪೆಂಗ್ವಿನ್ ತನ್ನ ಕೊಕ್ಕಿನಿಂದ ಅದರೊಳಗಿದ್ದುದನ್ನು ಹೊರ ತೆಗೆಯಿತು. ಅದೊಂದು ಚೀಟಿ. "ಅದರಲ್ಲೇನು ಬರೆದಿದೆ?” ಎಂದು ಕೇಳಿತು ಹಿಮವಂತ.

Image

ನನ್ನಂತರಂಗದ ಪಿಸುಮಾತ ಆಲಿಪೆಯಾ

ತಿಳಿಮುಗಿಲ ತೊಟ್ಟಿಲಲಿ ಮಲಗಿಹ 

ಹೊಳೆವ ಚಂದಿರನ ಬೆಳಕಿನಲಿ

ಚಳಿಯ ಪಿಸುಮಾತ ಶೃಂಗಾರ ಹೆಚ್ಚಿದೆ

ಕಳೆಯಲಿ ಮಿಂಚಿವೆ ಬೆರಗಿನಲಿ...

 

ಪ್ರೀತಿಯ ಕರೆಯನು ಆಲಿಸಿ ತಂದೆನು