ನವರಾತ್ರಿಯ ಐದನೆಯ ದಿನದ ಪೂಜೆಯ ಸ್ಕಂದಮಾತಾ ದೇವಿ
ಸಂಪದದಲ್ಲಿ ಸ್ಕಂದಮಾತಾ ದೇವಿಯ ಭಕ್ತಿಪೂರ್ವಕವಾದ ಸುಂದರವಾದ ಕವನವನ್ನು ನೋಡಿದೆ. ನವರಾತ್ರಿಯ ಐದನೇ ದಿನ ಪೂಜಿಸಲ್ಪಡುವ ಸ್ಕಂದ ಮಾತಾ ದೇವಿಯ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ನಾನು ಹಂಚಿಕೊಳ್ಳ ಬಯಸುತ್ತೇನೆ.
ದೇವಿಯ ಐದನೇ ರೂಪವು ಸ್ಕಂದ ಮಾತೆಯಾಗಿದ್ದಾಳೆ. ಈ ದೇವಿಯನ್ನು ಪಂಚಮಿಯ ದಿವಸ ಪೂಜಿಸುವರು. ಈ ದೇವಿಯನ್ನು ಪಂಚಮಿ ಎಂದೂ ಕೂಡ ಕರೆಯುತ್ತಾರೆ. ಇವಳ ಶರೀರವು ಬಿಳಿಯ ಬಣ್ಣವಾಗಿ, ಮಮತಾಮಯಿಯಾಗಿ, ಮಾತೃಸ್ವರೂಪಿಯಾಗಿ ವಿರಾಜಿಸುತ್ತಿದ್ದಾಳೆ.
- Read more about ನವರಾತ್ರಿಯ ಐದನೆಯ ದಿನದ ಪೂಜೆಯ ಸ್ಕಂದಮಾತಾ ದೇವಿ
- Log in or register to post comments