ಪುಸ್ತಕದ ಲೇಖಕ/ಕವಿಯ ಹೆಸರು
ಗಣೇಶ್ ಕಾಸರಕೋಡು
ಪ್ರಕಾಶಕರು
ಅಮ್ಮ ಪ್ರಕಾಶನ, ರಾಜೀವ ಗಾಂಧಿ ರಸ್ತೆ, ಜರಗನ ಹಳ್ಳಿ, ಬೆಂಗಳೂರು-೫೬೦೦೭೮
ಪುಸ್ತಕದ ಬೆಲೆ
ರೂ. ೧೨೦.೦೦ ಮುದ್ರಣ: ೨೦೧೧
ಆಫ್ ದಿ ರೆಕಾರ್ಡ್ ಅನ್ನುವುದು ಪತ್ರಕರ್ತರ ವೃತ್ತಿ ಜೀವನದಲ್ಲಿ ಸದಾ ಕೇಳುವ ಪದ. ಸಮಾಜದ ಗಣ್ಯ ವ್ಯಕ್ತಿಗಳು ಪತ್ರಕರ್ತರ ಜೊತೆ ಮಾತನಾಡುವಾಗ ಗುಟ್ಟಾಗಿ ಕೆಲವು ವಿಷಯಗಳನ್ನು ಹೇಳಿ ಬಿಡುತ್ತಾರೆ. ಅವರದ್ದೇ ಓರಗೆಯ ಪತ್ರಕರ್ತರಾದ ಬಿ.ಗಣಪತಿಯವರು ಈ ಪುಸ್ತಕಕ್ಕೆ ಬೆನ್ನುಡಿ ಬರೆದಿದ್ದಾರೆ. ಅದರಲ್ಲಿ ‘ಪತ್ರಕರ್ತರಾದ ಗಣೇಶ್ ಕಾಸರಗೋಡು ಅವರಿಗೆ ವೃತ್ತಿ ಜೀವನದ ಮೂರು ದಶಕಗಳ ಸಂಭ್ರಮ. ಸಿನೆಮಾ ಪ್ರಪಂಚಕ್ಕೆ ಒಬ್ಬ ಬೆರಗುಗಣ್ಣಿನ ಪತ್ರಕರ್ತನಾಗಿ ಅಡಿ ಇಟ್ಟ ಗಣೇಶರು ಇಂದು ಸಿನೆಮಾ ಲೋಕವೇ ಬೆರಗುಗಣ್ಣಿನಿಂದ ನೋಡುವಂತಹ ಪತ್ರಿಕಾ ಸಂಪಾದಕರಾಗಿ ಬೆಳೆದು ನಿಂತಿದ್ದಾರೆ. ಇದು ಅದೃಷ್ಟದ, ಜಾತಕದ ಮಹಿಮೆಯಲ್ಲ. ಅಕ್ಷರ ಪ್ರೀತಿ ಕೊಟ್ಟ ಆಸ್ತಿ.