*ಯಾರಿವರು?*

*ಯಾರಿವರು?*

ಕವನ

ಅಳತೆ ದೂರದಲಿ

ಕಂಡೆ ನಾನವಳ

ಅರೆ!ಕ್ಷಣದಲ್ಲೇ ಮಾಯ!!

 

ಬಿಡಿ ಕೂದಲ

ಚಿಂದಿ ಬಟ್ಟೆಯ

ಮಂದಹಾಸದ ಚೆಲುವಿ..

ಕರೆದು ಕೇಳಿದ್ದಳು

'ಹಸಿವು'..ಏನಾದರೂ ಕೊಡೇ ಅಕ್ಕ..

 

ಹುಟ್ಟಿದ್ದು ಎಲ್ಲೋ

ಹೆತ್ತವಳು ಯಾರೋ

ಯಾಕೆ ಅಲೆಯಬೇಕು

ಬಿಸಿಲಿನಲಿ??

ಪುಟ್ಟ ಹುಡುಗಿಗೆ ದೊಡ್ಡ ಶಿಕ್ಷೆ..

ತಪ್ಪು ಯಾರದ್ದಿಲ್ಲಿ...??

 

ನೆರೆಯ ಅಂಗಡಿಯಲಿ

ಬನ್ನು ಕದ್ದು ಹೊಡೆಸಿಕೊಂಡವಳ

ಬಿಡಿಸಿ ಕರೆದೊಯ್ದ ಅವನು

ಚಿಂದಿ ಬಟ್ಟೆಯ,ಬಿಳಿ ಮನದ 

ಸಾಹುಕಾರ...

ಯಾವ ಜನ್ಮದ ಬಂಧವೋ??

 

-ನಿಶ್ಮಿತಾ ಪಳ್ಳಿ

ಚಿತ್ರ : ಇಂಟರ್ನೆಟ್ ಕೃಪೆ

 

ಚಿತ್ರ್