ಚಿಗುರೆಲೆಗಳ ತಂಬುಳಿ
ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು, ಬಾಳೆ ಹೂವು ಎಲ್ಲವನ್ನು ಒಂದು ಚಮಚ ತುಪ್ಪ ಸೇರಿಸಿ ಸ್ವಲ್ಪ ಹುರಿಯಬೇಕು. ಒಂದು ಕಪ್ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, 4 ಗಾಂಧಾರಿ ಮೆಣಸು, ಸಣ್ಣ ತುಂಡು ಹಸಿ ಶುಂಠಿ, ಚಿಟಿಕೆ ಜೀರಿಗೆ ಮತ್ತು ಅರಶಿನಹುಡಿ ಸೇರಿಸಿ ನುಣ್ಣಗೆ ರುಬ್ಬಿ, ಎರಡು ಸೌಟು ಮಜ್ಜಿಗೆ ಸೇರಿಸಿ ಮಿಶ್ರ ಮಾಡಬೇಕು.ಒಗ್ಗರಣೆ ಕೊಟ್ಟರೂ ಕೊಡದಿದ್ದರೂ ಆಗುತ್ತದೆ. ಸಾಸಿವೆ, ಒಣಮೆಣಸು, ಬೇಕಾದರೆ ಬೆಳ್ಳುಳ್ಳಿ ಹಾಕಬಹುದು. ಹಾಕಿ ತುಪ್ಪದಲ್ಲಿ ಒಗ್ಗರಣೆ ಕೊಡಬೇಕು.
ಪೇರಳೆ(ಸೀಬೆ), ಕೇಪುಳ, ಸಾಂಬ್ರಾಣಿ, ದಾಸವಾಳ, ಚಕ್ರಮುನಿ, ಶಂಖಪುಷ್ಪ, ಕರಿಬೇವು ಚಿಗುರು ಮತ್ತು ಶಂಖಪುಷ್ಪ ಹೂವು, ದಾಸವಾಳ ಹೂವು, ಕೇಪುಳ ಹೂವು ,ಬಾಳೆ ಹೂವು ಎಲ್ಲವನ್ನು ಚೆನ್ನಾಗಿ ಸ್ವಚ್ಛ ಮಾಡಿರಿ.
- Read more about ಚಿಗುರೆಲೆಗಳ ತಂಬುಳಿ
- Log in or register to post comments