ಬದುಕಿ, ಬದುಕಲು ಬಿಡಿ
ತಾವೇ ಈ ಭೂಮಿಗೆ ಒಡೆಯರು ನನ್ನಿಷ್ಟ ಏನು ಬೇಕಾದರೂ ಮಾಡ್ತೀನಿ ಎಂದು ಹೇಳುವವರು, ಕೇಳುವವರು ಯಾರೂ ಇಲ್ಲ ಎಂಬ ಅಹಂ ಭಾವವು ಮನೆ ಮಾಡಿದಾಗ ಯಾರೇ ಆಗಿರಲಿ ಅವರ ವಿನಾಶವು ಶುರು ಆಯಿತು ಅಂತ ತಿಳಿದುಕೊಳ್ಳಿ. ಪ್ರಾಣಿಗಳೂ ಕೂಡ ಈ ನಿಸರ್ಗದ ಮಕ್ಕಳು. ಒಂದು ಜೀವ ಸಂಕುಲ ಪೂರ್ಣವಾಗಬೇಕಾದರೆ ಮನುಷ್ಯರು ಎಷ್ಟು ಭೂಮಿಕೆ ನಿಭಾಯಿಸುತ್ತಾರೋ.. ಅಷ್ಟೇ ಏಕೆ ಅದಕ್ಕಿಂತ ಜಾಸ್ತಿ ಪ್ರಾಣಿ ಪಕ್ಷಿಗಳು ಪಾತ್ರ ವಹಿಸುತ್ತಾರೆ.
ಅಳಿಯುವ ಅಂಚಿನಲ್ಲಿರುವ ಪ್ರಾಣಿ ಪ್ರಭೇದಗಳ ಉಳಿವಿಗೆ ಕೈಲಾದಷ್ಟು ಪ್ರಯತ್ನ ಮಾಡುವ. ಸಸ್ಯಗಳನ್ನು ಕೂಡ ಅನೇಕ ರೀತಿಯಲ್ಲಿ ನಾಶಮಾಡುವ ಮೃಗ ಮನಸ್ಸಿನ ಮನಜರನ್ನು ನಮ್ಮೊಳಗೇ ಕಾಣಬಹುದು. ಸಸ್ಯವೊಂದು ಬೆಳೆದು ದೊಡ್ಡವಾಗಲು ಎಷ್ಟು ಸಮಯ ಬೇಕು ತಿಳಿಯಿರಿ. ಆದರೆ ಕಾಂಕ್ರಿಟ್ ರಸ್ತೆ ಎಂದೋ ಫ್ಲೈ ಓವರ್ ಎಂದೋ ಟೆಂಡರ್ ನಿಂದ ಬರುವ ಲಾಭಕ್ಕೋಸ್ಕರ ಹೇಳ ಹೆಸರಿಲ್ಲದಂತೆ ಗಿಡ ಮರಗಳ ನಾಶಕ್ಕೆ ದಾಪುಗಾಲು ಇಡುತ್ತಾ ಮುಂದೆ ಬರುತ್ತಿದ್ದಾರೆ. ಇನ್ನೊಂದು ರೀತಿಯಲ್ಲಿ ಈ ಪ್ರದೇಶ ನನಗೆ ಸೇರಿದ್ದು. ಇಷ್ಟು ಜಾಸ್ತಿ ಹಣ ಕೊಟ್ಟರೆ ನಿಮಗೆ ಬರೆದು ಕೊಡುತ್ತೇನೆ.. ನನ್ನ ಪಿತ್ರಾರ್ಜಿತ ಆಸ್ತಿ ಏನು ಬೇಕಾದರೂ ಮಾಡಿಕೊಳ್ಳಿ. ಹಣ ಮಾತ್ರ ನಾನು ಕೇಳಿದಷ್ಟು ಕೊಡಿ ಅನ್ನೋ ನಿರ್ದಾಕ್ಷಿಣ್ಯವಾಗಿ ಮಾತಾಡೋ ತುಂಬಾ ಜನ ನಮ್ಮ ಮುಂದೆ ಓಡಾಡುತ್ತಿದ್ದಾರೆ. ಪಿತ್ರಾರ್ಜಿತ ಆದರೆ ಅವರಿಗೆ ಏನು ಅವರ ಹಿರಿಯರು ಕಷ್ಟ ಪಟ್ಟಿದ್ದು , ಅವರಲ್ಲವಲ್ಲ.. (ಅನಿವಾರ್ಯತೆ ಹೊರತುಪಡಿಸಿ)
ಕಾಡಿನ ಮಧ್ಯದೊಳಗೆ ರೆಸಾರ್ಟ್ ಕಟ್ಟಿ ಜೀವನ ಮಾಡುವುದು ಈಗಿನ ಹೊಸ ಟ್ರೆಂಡ್. ಕಾಡಿನ ಒಳಗಿರುವ ಪ್ರಾಣಿಗಳ ಪರಿಸ್ಥಿತಿ ಏನಾಗಬೇಡ.. ನೀವೇ ಹೇಳಿ. ನಮಗೆ ಕಷ್ಟ ಬಂದರೆ ಹಾಗೆ ಹೀಗೆ ಅಂತ ಇಷ್ಟುದ್ದ ಗೋಗರೆದು ಎಲ್ಲರೆದುರು ಡಂಗುರ ಸಾರಬಹುದು... ಆದ್ರೆ ಪ್ರಾಣಿಗಳು ದಿನ ನಿತ್ಯ ಭಯದಿಂದ ಬದುಕುವ ಪರಿಸ್ಥಿತಿ. ಕಾಪಾಡುವ ಜನರಿಂದಲೇ ಭಯಪಡಬೇಕಾದ ಪರಿಸ್ಥಿತಿ. ಪ್ರಾಣಿಗಳು ಯಾರ ಜೊತೆ ಹೇಳಬೇಕು ಅವುಗಳ ಕಷ್ಟಗಳನ್ನು. ಅವುಗಳ ಮನಸ್ಸಿನ ನೋವನ್ನು. ಬರೆಯುತ್ತಾ ಹೋದರೆ ಇನ್ನೂ ಬಹಳಷ್ಟು ಇದೆ.. ಮುಂದೆ ಬರೆಯಲು ಪ್ರಯತ್ನ ಮಾಡುವೆ...
ಕಥೆಯಲ್ಲ ವ್ಯಥೆ ಇದು..
ಆಲೋಚನೆ ಮಾಡಿ ಸಹೃದಯಿ ಮಿತ್ರರೇ...
-ಪದ್ಮಶ್ರೀ ಕೆ.
ಕಾಡುನಾಶದ ಚಿಂತೆಯಲ್ಲಿದೆಯೇ ಚಿರತೆ…? (ಪೆನ್ಸಿಲ್ ಚಿತ್ರ: ಶ್ರೇಯಸ್ ಕಾಮತ್, ಬೆಂಗಳೂರು)