ಕೂಷ್ಮಾಂಡ ದೇವಿಗೆ ಜೈ ಎನ್ನಿರಿ
ಕವನ
ಕೂಷ್ಮಾಂಡ ದೇವಿಯನು ಮನದಲ್ಲಿ ಸ್ಮರಿಸುತಲಿ
ಧ್ಯಾನಿಸುವೆ ವಂದಿಸುತ ಜಗನ್ಮಾತೆಯೆ ||
ಅಷ್ಟಭುಜ ದೇವಿಯನು ಕೆಂಬಣ್ಣ ಪುಷ್ಪದಲಿ
ಪೂಜಿಸುತ ನಲಿಯುವೆವು ಹರುಷದಲ್ಲಿ
ವ್ಯಾಘ್ರವಾಹಿನಿಯಾಗಿ ಬರುತಿಹಳು ತಾನಿಂದು
ಬ್ರಹ್ಮಾಂಡ ಸೃಷ್ಟಿಸುತ ಒಡಲಿನಲ್ಲಿ||
ಸಪ್ತಕರದಲ್ಲಿ ಬಿಲ್ಲು ಬಾಣವನಿಂದು ಗದೆ ಚಕ್ರ
ಜಪಮಾಲೆ ಧರಿಸುತ್ತ ಮೆರೆಯುವವಳು
ತೇಜದಲಿ ಪ್ರಜ್ವಲಿಪ ಕಿರಣವದು ಬೆಳಕಿನಲಿ
ಭಕ್ತರಿಗೆ ಅಭಯವನು ನೀಡುವವಳು||
ತಮವನ್ನು ಓಡಿಸುತ ಭಾನುವಿನ ತೆರದಲ್ಲಿ
ಕಾಂತಿಯನು ಕೊಡುತಿಹಳು ಜಗಕೆ ಇಂದು
ಷೋಡಶದ ಪೂಜೆಯಲಿ ಅಭಿನವಗೆ ಹರಸುತಲಿ
ಒಲಿಯುವಳು ತೋಷದಲಿ ನವರಾತ್ರಿಯಂದು||
-ಶಂಕರಾನಂದ ಹೆಬ್ಬಾಳ
ಚಿತ್ರ್