ಚಂದ್ರಘಂಟ ದೇವಿ ನಮೋ
ಕವನ
ಸಿಂಹರೂಢ ಚಂದ್ರಘಂಟ ದೇವಿ
ತ್ರಿನೇತ್ರಧಾರಿ ದಶಹಸ್ತೆ ದುರ್ಗಮಾತೆಯೆ
ಕಸವರ ವರ್ಣದಿ ಹೊಳೆವ ತಾಯಿ
ಮೃದಹಾಸ ನಾನಾಲಂಕಾರ ಭೂಷಿತೆ..
ಚಂದ್ರನ ಶಿರದಿ ಧರಿಸಿದ ಚಂದ್ರಘಂಟೆ
ಧನಧಾತ್ರಿ ಆನಂದಧಾತ್ರಿ ನಾನಾರೂಪಧಾರಿಣಿ
ಪಿತಾಂಬರದಿ ಮಿಂಚೋ ಚಂದ್ರಮಿಖಿದೇವಿ
ದೈನ್ಯದಿಂದ ಪೂಜೆಗೈಯ್ವ ದಿವ್ಯರೂಪಿಣಿ...
ದುಷ್ಟರ ಸಂಹರಿಸೋ ರಣಚಂಡಿ
ಸಹಾನುಭೂತಿ ತೋರಿಸುವ ಸ್ವರೂಪಿಣಿ
ರೂಪ ಧೈರ್ಯದ ಸಂಕೇತ ಆದಿಶಕ್ತಿ ಚಂದ್ರಿಕೆ
ಸಿಂಹದಲಿ ಏರಿಬರುವ ಸಿಂಹವಾಹಿನಿ..
ನೂಸಲದಿ ಅರ್ಧಚಂದ್ರ ರಾರಾಜಿಸುತ
ರಕ್ಕಸರನು ಮೆಟ್ಟಿನಿಂತು ಸೀಳುತಿರುವೆ
ಅಂಬ ತಾಯಿ ಕರುಣಿಸಮ್ಮ ಮಹಾಮಾಯೆ
ವರವ ಬೇಡಿ ಕೂತಿರುವೆ ನಿತ್ಯ ತಾಯೆ...
ಭಕ್ತಿಯಿಂದ ನಿನ್ನ ಜಪಿಸಿ ನಡೆವೆವು
ಯುಕ್ತಿಯಲಿ ನಿನ್ನ ಹರಿಕೆ ಮಾಡುವೆವೂ
ಶಕ್ತಿ ಯುಕ್ತಿ ಒಂದುಗೂಡಿ ನಿನ್ನ ಸ್ಮರಿಸುತ
ಮುಕ್ತಿ ಪಡೆದು ಸನ್ಮಾರ್ಗ ಪಡೆಯುತಲಿ||
ದುರ್ಗೆಯ ಅವತಾರ ಚಂದ್ರಘಂಟ ತಾಯಿ
ಕೊರಳಲಿ ಶ್ವೇತ ಮಾಲೆ ಧರಿಸಿದ ರೂಪಿಣಿ
ಮಾನಸಿಕ ದೈಹಿಕ ಕಷ್ಟಗಳ ಮರೆಸೊ ದೇವಿ
ನಿತ್ಯ ಜಪಿಸಿ ಮೆರೆಗು ನೀಡೋ ಭಾಷಿಣಿ...
-ಅಭಿಜ್ಞಾ ಪಿ ಎಮ್ ಗೌಡ
ಚಿತ್ರ್