ಕ್ಯಾರೆಟ್ ಸೇವನೆಯಿಂದ ಆಗುವ ಲಾಭಗಳು

ಕ್ಯಾರೆಟ್ ಸೇವನೆಯಿಂದ ಆಗುವ ಲಾಭಗಳು

ನಮ್ಮ ಆರೋಗ್ಯಕ್ಕೆ ಹೆಚ್ಚಿನ ಶಕ್ತಿ ನೀಡುವುದರಲ್ಲಿ ಎಲ್ಲಾ ತರಕಾರಿ ಹಣ್ಣುಗಳು ಮುಖ್ಯವಾಗಿರುತ್ತದೆ.  ಅದರಲ್ಲಿ ಅಗ್ರ ಸ್ಥಾನದಲ್ಲಿರುವುದು ಹಾಗೂ ಎಲ್ಲರ ಫೇವರೆಟ್ ತರಕಾರಿ ಕ್ಯಾರೆಟ್. ನಮ್ಮ ದೇಹಕ್ಕೆ ಬೇಕಿರುವ ಪ್ರೊಟೀನ್, ವಿಟಮಿನ್, ಪೊಟ್ಯಾಷಿಯಂ, ಕಾರ್ಬೋಹಡ್ರೇಟ್ಸ್ ಸಿಗಲಿದೆ. ಕ್ಯಾರೆಟ್ ಅನ್ನು ನಾವು ಚೆನ್ನಾಗಿ ತೊಳೆದು ಹಸಿಯಾಗಿಯೇ

 ತಿಂದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಮ್ಮ ದೈನಂದಿನ ಆಹಾರದಲ್ಲಿ ಕ್ಯಾರೆಟ್ ಅನ್ನು ನಿಯಮಿತವಾಗಿ ಬಳಸಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಹಿತಕಾರಿ. ಕ್ಯಾರೆಟ್ ಸೇವನೆಯಿಂದ ಏನೆಲ್ಲಾ ಪ್ರಯೋಜನವಿದೆ ಎಂಬುವುದನ್ನು ನೋಡುವುದಾದರೆ...

1. *ಜೀರ್ಣಕ್ರಿಯೆ:* ಕ್ಯಾರೆಟ್ ನಲ್ಲಿರುವ ಕಾರ್ಬೋಹೈಡ್ರೇಟ್ಸ್ ನಿಂದ ನಮ್ಮ ಆಹಾರ ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡಲಿದೆ.

2. *ಮಲಬದ್ಧತೆ:* ಕ್ಯಾರೆಟ್ ನಲ್ಲಿರುವ ನಾರಿನಾಂಶದಿಂದ ಮಲಬದ್ಧತೆ ಕಡಿಮೆಗೊಳಿಸಿ, ರಕ್ತ ಸಂಚಾರ ಹಾಗೂ ಆಹಾರ ಚಲನೆ ಸುಲಭವಾಗುತ್ತದೆ. 

3. *ಶ್ವಾಸಕೋಶ ಸಮಸ್ಯೆ:* ಕ್ಯಾರೆಟ್ ನಲ್ಲಿರುವ ವಿಟಮಿನ್ ' ಎ' ನಿಂದ ನಮಗೆ ಶ್ವಾಸಕೋಶ ಸಮಸ್ಯೆ ನಿವಾರಣೆಯಾಗಲು ಸಹಾಯ ಮಾಡುತ್ತದೆ.

4. *ಮೂಳೆಗಳು  :* ನಮ್ಮ ಮೂಳೆಗಳಿಗೆ ಬಲ ನೀಡುವ ಖನಿಜಾಂಶಗಳನ್ನು ಹೊಂದಿರುವ ಕ್ಯಾರೆಟ್ ನಮ್ಮ ಮೂಳೆಗಳಿಗೆ ಅತೀ ಮುಖ್ಯವಾಗಿರುತ್ತದೆ.

5. *ಕ್ಯಾನ್ಸರ್:* ಕ್ಯಾರೆಟ್ ನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಕ್ಯಾನ್ಸರ್ ನಂತಹ ಮಹಾಮಾರಿಯ ವಿರುದ್ಧ ಹೋರಾಡಲಿದೆ.

6. *ಕಣ್ಣಿನ ಆರೋಗ್ಯ:* ಕ್ಯಾರೆಟ್ ನಲ್ಲಿರುವ ವಿಟಮಿನ್ 'ಎ' ಮಕ್ಕಳ ಕಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ.

7. *ತೂಕ ಇಳಿಕೆ:* ಕ್ಯಾರೆಟ್ ನಲ್ಲಿರುವ ನಾರಿನಾಂಶವು ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಹಾಗೂ ಆಹಾರದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡುತ್ತದೆ. 

8. *ಚರ್ಮ:* ಕ್ಯಾರೆಟ್ ನಲ್ಲಿರುವ ಕೆರೋಟಿನ್ ನಂತಹ ಅಂಶಗಳು ನಮ್ಮ ಚರ್ಮಕ್ಕೆ ಪೋಷಣೆ ನೀಡಿ, ಚರ್ಮಕ್ಕೆ ಕಾಂತಿ ನೀಡಲಿದೆ.

*ಜಾಗ್ರತಿ ಫೌಂಡೇಶನ್ ಕಾರ್ಕಳ.* ಇವರ ವಾಟ್ಸಾಪ್ ಪುಟಗಳಿಂದ ಸಂಗ್ರಹಿತ

ಚಿತ್ರ ಕೃಪೆ: ಇಂಟರ್ನೆಟ್