ಒಂದು ಗಝಲ್ - ನೋವಿನಲಿ ನಲಿವಿನಲಿ...

ಒಂದು ಗಝಲ್ - ನೋವಿನಲಿ ನಲಿವಿನಲಿ...

ಕವನ

ನೋವಿನಲಿ ನಲಿವಿನಲಿ

ಭಾಗಿಯಾಗುವೆಯಾ ಇನಿಯಾ||

ಸಂಗೀತದ ಸ್ವರದಲ್ಲಿ

ರಾಗವಾಗುವೆಯಾ ಇನಿಯಾ||

 

ಹಗಲಿರುಳು ಜೊತೆಯಾಗಿ

ಮನವನ್ನು ಅರಿತವನು|

ಕ್ಷಣಕ್ಷಣಕ್ಕೂ ಪ್ರಣಯದಲಿ

ಕೈಹಿಡಿಯುವೆಯಾ ಇನಿಯಾ||

 

ಮಾವು ಕೋಗಿಲೆಗಳ

ಸುಮಧುರ ಬಂಧವದು|

ಗಂಧದ ಪರಿಮಳವನು

ಮೂಸಿನೋಡುವೆಯಾ ಇನಿಯಾ||

 

ಅಧರದಲಿ ಜೇನಿನ

ಸಿಹಿಯನು ನೀಡುತಿರುವೆ|

ಲೋಕದ ನುಡಿಗಳಿಗೆ

ಭೀತಿಪಡುವೆಯಾ ಇನಿಯಾ||

 

ಅಭಿನವನ ಕಾವ್ಯವದು

ನಂದನವನು ಸೃಷ್ಟಿಸಿದೆ|

ಮೂರು ಗಂಟನು ಹಾಕಿ

ಅಗ್ನಿಸುತ್ತುವೆಯಾ ಇನಿಯಾ||

 

-ಶಂಕರಾನಂದ ಹೆಬ್ಬಾಳ 

 

ಚಿತ್ರ್