ಶ್ರೀ. ಹಿರೇಮಗಳೂರ್ ಕಣ್ಣನ್ ಕನ್ನಡದಲ್ಲಿ ನಮ್ಮ ಜೀವನದ ಸಂಸ್ಕಾರಗಳನ್ನು (ನಾಮಕರಣ, ಅನ್ನಪ್ರಾಶನ, ವಿವಾಹಗಳೇ ಮೊದಲಾದವುಗಳನ್ನು)  ವಿಧಿವತ್ತಾಗಿ ಮಾಡಿ ತೋರಿಸಿದ್ದಾರೆ. 

ಶ್ರೀ. ಹಿರೇಮಗಳೂರ್ ಕಣ್ಣನ್ ಕನ್ನಡದಲ್ಲಿ ನಮ್ಮ ಜೀವನದ ಸಂಸ್ಕಾರಗಳನ್ನು (ನಾಮಕರಣ, ಅನ್ನಪ್ರಾಶನ, ವಿವಾಹಗಳೇ ಮೊದಲಾದವುಗಳನ್ನು)  ವಿಧಿವತ್ತಾಗಿ ಮಾಡಿ ತೋರಿಸಿದ್ದಾರೆ. 

'ಅನುಭವಾಮೃತ' ನಮ್ಮ ತಂದೆ, ಸುಂಕದ ರಂಗರಾಯರಿಗೆ ಅತ್ಯಂತ ಪ್ರೀತಿಯ ಪುಸ್ತಕ. ಅದನ್ನು ರಚಿಸಿದವರು ಶ್ರೀ. ಮಹಾಲಿಂಗ ರಂಗ. ಅವರು  ಕ್ರಿ.ಶ.೧೬೭೫ ರಲ್ಲಿ ಇದ್ದಿರ ಬಹುದು. ಭಾಮಿನಿ ಷಟ್ಪದಿಯಲ್ಲಿ ರಚಿಸಿದ ಅನುಭವಾಮೃತ ಪದ್ಯ ಗುಚ್ಛದಲ್ಲಿ ಅದ್ವೈತವನ್ನು ಸರಳವಾಗಿ ಬೋಧಿಸುವ ಪ್ರಯತ್ನವನ್ನು ಕಾಣಬಹುದು. ಮಹಾಲಿಂಗರಂಗ ನಮ್ಮ ಚಿತ್ರದುರ್ಗಜಿಲ್ಲೆಗೆ ಸೇರಿದ ಉಚ್ಚಿಂಗಿದುರ್ಗದ ನಿವಾಸಿ. ಮುಂದೆ ಅವರು ನಿರ್ವಾಣ ಹೊಂದಿದ ಜಾಗ : ಕೊಣಚಕಲ್ ಬಳಿಯ ರಂಗನಾಥಸ್ವಾಮಿ ಗುಡ್ಡದಲ್ಲಿ. ಈ ಕೊಣಚಕಲ್ ಊರು ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿದೆ.

ಮಹಲಿಂಗರಂಗನ ವಿಶೇಷತೆ ಎಂದರೆ, ಕನ್ನಡ ಭಾಷೆಯನ್ನು ಆತ ತನ್ನ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ. ಆತನ ರಚನೆಗಳಲ್ಲಿ ಕನ್ನಡವನ್ನು ಅತ್ಯಂತ ಪ್ರೀತಿಯಿಂದ ಕಂಡು ಅದನ್ನು ಬಳಸಿ ಎಂದು ಕಳಕಳಿಯಿಂದ ಕೇಳಿಕೊಂಡಿದ್ದಾನೆ.  "ಸಂಸ್ಕೃತಭಾಷೆಯಲ್ಲಿ ಹೇಳಿದರೇನೇ ಅದು ಮಹತ್ವದ್ದು" ಎಂದು ಕೆಲವು ಪಂಡಿತರು ಹೇಳುತ್ತಿದ್ದುದ್ದನ್ನು ನಾನು ನನ್ನ ಬಾಲ್ಯದಲ್ಲಿ ಕೇಳಿಬಲ್ಲೆ. ಮದುವೆ, ಮುಂಜಿ ಮೊದಲಾದ ಕಾರ್ಯಗಳು ನಮ್ಮ ಜೀವನದ ಮಹತ್ವದ ಘಟ್ಟಗಳಗಳು. 

ಸುಲಿದ ಬಾಳೆಯ ಹಣ್ಣಿನಂದದಿ. 
ಕಳೆದ ಸಿಗುರಿನ ಕಬ್ಬಿನಂದದಿ.
ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ. 
ಲಲಿತವಹ ಕನ್ನಡದ ನುಡಿಯಲಿ. 
ತಿಳಿದು ತನ್ನೊಳು ತನ್ನ ಮೋಕ್ಷವ. 
ಗಳಿಸಿಕೊಂಡರೆ ಸಾಲದೇ? ಸಂಸ್ಕೃತದಲಿನ್ನೇನು?

ಇಂದಿನ ದಿನಗಳಲ್ಲಿ : 

ನಮ್ಮ ಸಮಯದ , ನಾಮಕರಣ, ಅನ್ನಪ್ರಾಶನ, ವಿವಾಹ ಮೊದಲಾದ ವಿಧಿಗಳನ್ನು ಸಂಸ್ಕೃತವಲ್ಲದೆ ಕನ್ನಡದಲ್ಲಿ ಹೇಳಲಾದೀತೇ ? ಇಂದು ಪ್ರಶ್ನೆ ಬಂದಾಗ, ನಮ್ಮ ಹಿರೇಮಗಳೂರ್ ಕಣ್ಣನ್ (ಮಾತೃಭಾಷೆ ತಮಿಳಿನ ಕಣ್ಣನ್ ಪರಿವಾರದವರು ಕನ್ನಡನಾಡಿನಲ್ಲೇ ದಶಕಗಳ ಕಾಲ ನೆಲಸಿ ಕನ್ನಡಭಾಷೆಯನ್ನು ತಮ್ಮ ಕೈನಲ್ಲಿ ಮಡು ಗಿಕೊಂಡಿದ್ದಾರೆ) ಹೌದು ; ಕನ್ನಡದಲ್ಲೇ ಅತ್ಯಂತ ಅರ್ಥಗರ್ಭಿತವಾಗಿ ಮಾಡಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.  

-ವೆಂಕಟೇಶ, ಮುಂಬಯಿ