ಅರಮನೆ ಗುಡ್ಡದ ಕರಾಳ ರಾತ್ರಿಗಳು

ಪುಸ್ತಕದ ಲೇಖಕ/ಕವಿಯ ಹೆಸರು
ಗಿರಿಮನೆ ಶ್ಯಾಮರಾವ್
ಪ್ರಕಾಶಕರು
ಗಿರಿಮನೆ ಪ್ರಕಾಶನ, ಲಕ್ಷ್ಮೀಪುರಂ ಬಡಾವಣೆ, ಸಕಲೇಶಪುರ-೫೭೩೧೩೪
ಪುಸ್ತಕದ ಬೆಲೆ
ರೂ.೧೩೦.೦೦ ಮೊದಲ ಮುದ್ರಣ: ಮಾರ್ಚ್ ೨೦೧೬

ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪಕೊಟ್ಟು ಪ್ರಕಟಿಸಿದ ‘ಮಲೆನಾಡಿನ ರೋಚಕ ಕಥೆಗಳು’ ಎಂಬ ಓದುಗರಿಗೆ ಮೆಚ್ಚುಗೆಯಾಯಿತು. ಅದರ ಫಲವೇ ಅರಮನೆ ಗುಡ್ಡದ ಕರಾಳ ರಾತ್ರಿಗಳು ಪುಸ್ತಕ. ಇದು ಮಲೆನಾಡಿನ ರೋಚಕ ಕಥೆಗಳು ಸರಣಿಯ ಎರಡನೇ ಪುಸ್ತಕ. ಇದು ಕರ್ಮವೀರ ವಾರಪತ್ರಿಕೆಯಲ್ಲಿ ಧಾರವಾಹಿ ರೂಪದಲ್ಲಿ ಈಗಾಗಲೇ ಪ್ರಕಟವಾಗಿದೆ. 

ಈರುಳ್ಳಿಯನ್ನು ತಿಂದರೆ...

ಮಜ್ಜಿಗೆ ಅನ್ನದಲ್ಲಿ ಈರುಳ್ಳಿಯನ್ನು ತಿಂದರೆ ನಡೆಯುವ ಅದ್ಭುತಗಳನ್ನು ತಿಳಿದರೆ…ಯಾರೂ ತಿನ್ನದೆ ಇರಲಾರರು..!! ಈರುಳ್ಳಿ ಮಾಡುವಷ್ಟು ಒಳಿತನ್ನು ತಾಯಿಯೂ ಮಾಡುವುದಿಲ್ಲ ಎನ್ನುವರು. ಈರುಳ್ಳಿ ಸೇವನೆಯಿಂದ ಶರೀರಕ್ಕೆ ಶೀತವಾಗುತ್ತದೆ ಎನ್ನುತ್ತಾರೆ. ಆದರೆ ಮಜ್ಜಿಗೆಯಲ್ಲಿ ಸ್ವಲ್ಪ ಈರುಳ್ಳಿಯನ್ನು ಸೇವಿಸಿದರೆ ಸಂಪೂರ್ಣ ಆರೋಗ್ಯಕ್ಕೆ ಒಳ್ಳೆಯದಾಗುವುದೆಂದು ಪರಿಶೋಧನೆಯಲ್ಲಿ ತಿಳಿದುಬಂದಿದೆ. ಮಜ್ಜಿಗೆ ಅಥವಾ ಮೊಸರಿನಲ್ಲಿ ಈರುಳ್ಳಿಯನ್ನು ಬೆರೆಸಿ ಸೇವಿಸಿದರೆ ಶರೀರಕ್ಕೆ ಆರೋಗ್ಯ ನೀಡುವ ಹಲವು ಪೋಷಕಾಂಶಗಳು ನೀಡುತ್ತದೆ ಎಂದು ತಿಳಿದಿದೆ.

Image

ಗೀತಾಮೃತ - 3

ಅಧ್ಯಾಯ ೨

ಏಷಾ ತೇ ಭಿಹಿತಾ ಸಾಂಖ್ಯೇ  ಬುದ್ಧಿರ್ಯೋಗೇ ತ್ವಿಮಾಂ ಶೃಣು/

ಬುದ್ಧ್ಯಾ ಯುಕ್ತೋ ಯಯಾ ಪಾರ್ಥ ಕರ್ಮಬಂಧಂ ಪ್ರಹಾಸ್ಯಸಿ//೩೯//

Image

ಬಾಳಿಗೊಂದು ಚಿಂತನೆ (3) - ನಮ್ಮ ಉನ್ನತಿ

ಆನಂದ, ಸಂತೋಷ, ನೆಮ್ಮದಿ, ಆರೋಗ್ಯ, ಇವೆಲ್ಲವೂ ನಮಗಿದ್ದರೆ ಮಾತ್ರ ನಮ್ಮ ಬದುಕು ಚಂದ. ಸಂತಸ ತಾನಾಗಿಯೇ ಬರುವುದೇ ಇಲ್ಲ, ನಾವದನ್ನು ಬರುವಂತೆ ಮಾಡಬೇಕು. ಅದು ಅಂಗಡಿಯಲ್ಲಿ ಹಣ ಕೊಟ್ಟರೆ ಸಿಗುವ ವಸ್ತುವಲ್ಲ. ನಮ್ಮೊಳಗೆ ಅಡಕವಾಗಿದೆ. ಹೊರತರುವ ಕೆಲಸ ನಮ್ಮಿಂದಾಗಬೇಕು.

Image

ಮಹಾನ್ ಲೇಖಕ ಮಹಾತ್ಮಾ ಗಾಂಧಿ

ಮೊನ್ನೆ, ೨ ಅಕ್ಟೋಬರ್ ೨೦೨೦ರಂದು, ಮಹಾತ್ಮಾ ಗಾಂಧಿಯವರ ೧೫೧ನೇ ಜನ್ಮದಿನದಂದು ಅವರಿಗೆ ನಮ್ಮ ದೇಶವಾಸಿಗಳಿಂದ ಗೌರವಾರ್ಪಣೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು ಮಹಾನ್ ಲೇಖಕರೂ ಆಗಿದ್ದರು. ಅವರು ಬರೆದದ್ದು ಸುಮಾರು ೧೦೦ ಸಂಪುಟಗಳ “ಕಲೆಕ್ಟೆಡ್ ವರ್ಕ್ಸ್ ಆಫ್ ಮಹಾತ್ಮಾ ಗಾಂಧಿ” ಎಂಬ ಪುಸ್ತಕ ಸರಣಿಗೆ ಸಾಕಾಗುವಷ್ಟಿತ್ತು!

ತಮ್ಮ ಬಿಡುವಿಲ್ಲದ ಕೆಲಸಕಾರ್ಯಗಳ ನಡುವೆ ಇಷ್ಟೊಂದು ಬರೆಯಲು ಅವರಿಗೆ ಹೇಗೆ ಸಾಧ್ಯವಾಯಿತು ಎಂಬುದೊಂದು ವಿಸ್ಮಯ. ಅವರು ಯಾಕೆ ಇಷ್ಟೆಲ್ಲ ಬರೆದರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ.

Image

ಪುಟಾಣಿ ಹಂದಿ ಮರಿಯ ಗುಟ್ಟು

ಅದೊಂದು ಪುಟಾಣಿ ಹಂದಿಮರಿ. ರಾತ್ರಿ ಬೆಚ್ಚಗಿನ ಹುಲ್ಲಿನ ಮೇಲೆ ಸೋದರ ಮತ್ತು ಸೋದರಿ ಹಂದಿಮರಿಗಳ ಜೊತೆ ಮಲಗಿದ್ದಾಗ, ಅದು ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಮುಗುಳ್ನಗುತ್ತಿತ್ತು - ತನ್ನ ಗುಟ್ಟನ್ನು ನೆನೆಯುತ್ತಾ.  ತಾನು ಪುಟಾಣಿ ಹಂದಿ ಮರಿ ಆಗಿದ್ದರೆ ಒಳ್ಳೆಯದೇ ಎಂದುಕೊಳ್ಳುತ್ತಿತ್ತು.

ಆದರೆ, ಕೆಲವೇ ದಿನಗಳ ಮುಂಚೆ, ಪುಟಾಣಿ ಹಂದಿಮರಿಗೆ ಬಹಳ ಬೇಜಾರಾಗಿತ್ತು. ಅದರ ಕುಟುಂಬದಲ್ಲಿ ಪುಟಾಣಿ ಹಂದಿಮರಿಯೇ ಅತ್ಯಂತ ಕಿರಿಯ ಮತ್ತು ಅತ್ಯಂತ ಪುಟಾಣಿ. ಅದರ ಐದು ಅಣ್ಣಂದಿರು ಮತ್ತು ಐದು ಅಕ್ಕಂದಿರು ಅದಕ್ಕಿಂತ ಗಾತ್ರದಲ್ಲಿ ದೊಡ್ಡದಾಗಿದ್ದವು. ರೈತನ ಮಡದಿ ಇದನ್ನು "ಪುಟಾಣಿ" ಎಂದು ಕರೆಯುತ್ತಿದ್ದಳು ಯಾಕೆಂದರೆ ಅದು ಉಳಿದ ಎಲ್ಲ ಹಂದಿಮರಿಗಳಿಗಿಂತ ಗಾತ್ರದಲ್ಲಿ ಬಹಳ ಪುಟಾಣಿ ಆಗಿತ್ತು.

Image

ಕೋಲಾರದ ಶ್ರೀ ಗರುಡ ಸ್ವಾಮಿ ದೇವಸ್ಥಾನ

ಹಿಂದೂ ಪುರಾಣಗಳ ಪ್ರಕಾರ ಮಹಾ ವಿಷ್ಣುವಿನ ವಾಹನ ಗರುಡ ಎಂದು ಬಹುತೇಕರಿಗೆ ತಿಳಿದೇ ಇದೆ. ಆದರೆ ಈ ಗರುಡನಿಗೆ ಒಂದು ದೇವಸ್ಥಾನವಿದೆ ಮತ್ತು ಅಲ್ಲಿ ದೇವರ ರೂಪದಲ್ಲಿ ಅವನಿಗೆ ಪೂಜೆ ಸಲ್ಲಿಕೆಯಾಗುತ್ತದೆ ಎಂಬ ಸಂಗತಿ ಬಹುತೇಕರಿಗೆ ತಿಳಿಯದೇ ಇರಬಹುದು. ಗರುಡನನ್ನು ಇಲ್ಲಿ ಶ್ರೀ ಗರುಡಸ್ವಾಮಿ ಅಥವಾ ಗರುಡೇಶ್ವರ ಸ್ವಾಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಗರುಡನನ್ನೇ ಮುಖ್ಯದೇವರಾಗಿ ಆರಾಧಿಸುವ ಈ ಏಕೈಕ ದೇವಸ್ಥಾನ ಇರುವುದು ನಮ್ಮ ಕರ್ನಾಟಕ ರಾಜ್ಯದಲ್ಲೇ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಎಂಬಲ್ಲಿ ಶ್ರೀ ಗರುಡ ಸ್ವಾಮಿ ದೇವಸ್ಥಾನ ಇದೆ. ಕೊಲದೇವಿ ಎಂಬ ಗ್ರಾಮ ಮುಳಬಾಗಿಲು ತಾಲೂಕಿನಿಂದ ೧೪ ಕಿ.ಮೀ. ದೂರವಿದೆ.

Image

ಜನಾರ್ದನ ದುರ್ಗ ಅವರ ಹನಿಗಳು (ಭಾಗ ೩)

*ಆಗದು ಜಿ..!* 

ಅಹಿಂಸೆ ಪರಮೋ ಧರ್ಮ

ಬೋಧಿಸಿದರಂದು ಗಾಂಧೀ *ಜಿ* ..!

ಛಲ ದೃಢತೆಗೆ ಸಾಕ್ಷಿಯಾದರಂದು

ವಿಜಯಂ ಗೈದ ಶಾಸ್ತ್ರಿ *ಜಿ* ...!!

ಒಂದು ಒಳ್ಳೆಯ ನುಡಿ (7) - ಸತ್ಯ-ಸುಳ್ಳು

'ಸತ್ಯವಂತರಿಗಿದು ಕಾಲವಲ್ಲ' ಎಷ್ಟೋ ಜನ ಹೇಳುವುದು ಕೇಳಿದ್ದೇವೆ. ಸತ್ಯ ನುಡಿದವ ಹೊಂಡಕ್ಕೆ ಬಿದ್ದ. ಅವನಿಗೆ ಯಾಕೆ ಬೇಕಿತ್ತು ಸತ್ಯ ಹೇಳುವ ಕೆಲಸ, ಹೀಗೆಲ್ಲ ಹೇಳುವುದು, ಕೆಲವು ಸಲ ಕಷ್ಟಕ್ಕೆ ಸಿಲುಕಿದ್ದೂ ಇದೆ. ಹೌದು ದಾರಿಯಲ್ಲಿ ಹೋಗುವಾಗ ಆದ ಒಂದು ಅಪಘಾತವನ್ನು ನೋಡಿ, ಅವನನ್ನು ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದರೆ, ಅವನನ್ನೇ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿ ತಲೆತಿನ್ನುವುದೂ ಇದೆ. ಇದರಿಂದ ಅವನ ಸಮಯವೂ ನಷ್ಟ, ಕೆಲಸವೂ ಇಲ್ಲ. ಇದರಿಂದಲಾಗಿಯೇ ನೋಡಿಯೂ ನೋಡದ ಹಾಗೆ ಮಾಡಿಕೊಂಡು ಹೆಚ್ಚಿನವರು ತಮ್ಮ ಪಾಡಿಗೆ ತಾವಿರುತ್ತಾರೆ. ಹಾಗಾದರೆ ಸತ್ಯ ಬೇಡವೇ? ಸತ್ಯಕ್ಕೆ ಸಾವಿಲ್ಲ, ಸತ್ಯಕ್ಕೆ ಜಯ ಖಂಡಿತಾ ಇದೆ.

Image