ಚಿತ್ರ ಒಂದು - ಗಝಲ್ ಗಳು ಎರಡು

ಗಝಲ್ - ೧

ಕತ್ತಲಲಿ ಹೂನಗೆ ಚೆಲ್ಲಿ ಬಂದ ಬೆಳಕು ಮನದಿ ನವೋಲ್ಲಾಸ ಮೂಡಿಸಿದೆ ಸಖಿ

ಸುತ್ತಲಿನ ತಮವ ಕಳೆದು ಭರವಸೆಯ ಕಿರಣಗಳ ಹರಿಸಿದೆ ಸಖಿ

 

ಬಿಳಿಯ ಉಡುಪು ಧರಿಸಿ ಸರಳ   ರೇಖೆಯಲಿ ಒಳಗಡಿಯಿಡುವ ರಶ್ಮಿಯ ಕಂಡೆಯಾ

ಕಣ್ಣಾ ಮುಚ್ಚೆ... ಕಾಡೇ ಗೂಡೇ...(ರಂಗಕಲಾವಿದೆ ಬಿ ಜಯಶ್ರೀ ಆತ್ಮಕತೆ)

ಪುಸ್ತಕದ ಲೇಖಕ/ಕವಿಯ ಹೆಸರು
ಬಿ.ಜಯಶ್ರೀ (ನಿರೂಪಣೆ : ಪ್ರೀತಿ ನಾಗರಾಜ್)
ಪ್ರಕಾಶಕರು
ಲಡಾಯಿ ಪ್ರಕಾಶನ, ಗದಗ
ಪುಸ್ತಕದ ಬೆಲೆ
ರೂ 250/-

ಸಾವಿರದ ಶರಣವ್ವ ತಾಯೇ.....

`ಕಣ್ಣಾ ಮುಚ್ಚೆ... ಕಾಡೇ ಗೂಡೇ...’ ಒಂದು ಯಶೋಗಾಥೆ. ಕಲಾವಿದೆಯೊಬ್ಬಳ ಯಶಸ್ಸಿನ ಹಿಂದಿನ ಅಗ್ನಿದಿವ್ಯಗಳ ಅನಾವರಣ. ಇಲ್ಲಿ ಬದುಕು ಒಂದು ಸಮುದ್ರದ ಘನತೆ ಪಡೆದುಕೊಂಡಿದೆ. ಅದನ್ನು ಮೊಗೆಯಲು ಬೊಗಸೆಯನ್ನು ನಂಬಿ ಹೊರಟ ಪ್ರೀತಿ ನಾಗರಾಜರು ತಮ್ಮ ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಾದಷ್ಟನ್ನು ನಮಗೂ ಹಂಚಿದ್ದಾರೆ. ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ.

ಚಿಂತನ-ಮಂಥನ

ಮನಸ್ಸು

ನಮ್ಮ ಮನಸ್ಸು ಎನ್ನುವುದು ಒಂದು ಉತ್ತಮ ಕ್ಯಾಮೆರಾದ ಲೆನ್ಸ್ ಇದ್ದಂತೆ. ಲೆನ್ಸ್ ಚೆನ್ನಾಗಿದ್ದರೆ ಭಾವಚಿತ್ರ, ದೃಶ್ಯಗಳೂ ಚೆನ್ನಾಗಿರುತ್ತವೆ. ಎಷ್ಟೋ ಸಲ ನಾವು ಹೇಳುವುದುಂಟು 'ಅಯ್ಯೋ ಮಹರಾಯ, ನಿನ್ನ ಕ್ಯಾಮರಾ ಸರಿ ಇಲ್ಲ ,ಒಂದೂ ಫೋಟೋ ಚಂದ ಬಂದಿಲ್ಲ’ ಎಂಬುದಾಗಿ. ಆಗ ಫೋಟೋಗ್ರಾಫರ್ ಮನಸ್ಸಿನಲ್ಲಿಯೇ ಹೇಳುತ್ತಾನೆ 'ಇವರು ಇರುವುದೇ ಹೀಗೆ, ಇದ್ದ ಹಾಗೆ ಅಲ್ವಾ ಬರುವುದು?' ಅಂತ.

Image

ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು?

‘ಪೆನ್-ಪೆನ್ಸಿಲ್’ ನಾವು ಶಾಲೆಯಲ್ಲಿ ಕಲಿಯುವಾಗ ಅವಳಿ ಜವಳಿ ಪದಗಳಂತೆಯೇ ಬಳಕೆಯಾಗುತ್ತಿದ್ದುವು. ಪರೀಕ್ಷೆಗೆ ಹೊರಡುವಾಗ ಮನೆಯಲ್ಲಿ ‘ಪೆನ್-ಪೆನ್ಸಿಲ್' ತಕೊಂಡಿದ್ದೀಯಾ? ‘ ಎಂದು ಕೇಳುವುದು ಒಂದು ಸಹಜ ಮಾತಾಗಿತ್ತು. ನಾವು ಬರೆಯಲು ಅಧಿಕವಾಗಿ ಬಳಸುವ ವಸ್ತುಗಳೆಂದರೆ ಪೆನ್ ಮತ್ತು ಪೆನ್ಸಿಲ್. ಪೆನ್ ಮೂಲಕ ಬರೆಯುವುದು ಸುಲಭ. ಶಾಯಿ ಹಾಕಿ ಅಥವಾ ಶಾಯಿ ತುಂಬಿದ ರಿಫಿಲ್ ಹಾಕಿ ಎಷ್ಟು ಸಮಯವಾದರೂ ಬರೆಯಬಹುದು. ಆದರೆ ಪೆನ್ಸಿಲ್ ಮೂಲಕ ಬರೆಯಲು ಅದರ ಮೇಲಿರುವ ಮರದ ಕವಚವನ್ನು ಕಟ್ಟರ್ ಅಥವಾ ಶಾರ್ಪ್ ನರ್ ಎಂಬ ಯಂತ್ರ (?!)ದ ಮೂಲಕ ಕತ್ತರಿಸಿ ತೆಗೆದು ಮೊನಚುಗೊಳಿಸಿ ಒಳಗಿನ ಕಪ್ಪಗಿನ ಮೊನೆ ಹೊರಗೆ ಕಾಣುವಂತೆ ಮಾಡಬೇಕು. ಆದರೆ ಇಂದಿನ ಆಧುನಿಕ ಯುಗದಲ್ಲಿ ಆ ಕೆಲಸವೂ ಕಮ್ಮಿ ಆಗಿದೆ. ಏಕೆ ಗೊತ್ತಾ?

Image

ನಮ್ಮ ಹೆಮ್ಮೆಯ ಭಾರತ (13 - 14)

೧೩.ಭಾರತದ ಪಾರಂಪರಿಕ ಸ್ಥಳಗಳು ವಿಶ್ವವಿಖ್ಯಾತ
ಭಾರತದ ಸಂಪನ್ನ ಸಾಂಸ್ಕೃತಿಕ ಪರಂಪರೆ ಮತ್ತು ಪಾರಂಪರಿಕ ಸ್ಥಳಗಳು ನಮ್ಮ ಹೆಮ್ಮೆ. ಯುನೆಸ್ಕೋ ಸಂಸ್ಥೆಯ ೧೯೭೨ರ ಜಾಗತಿಕ ಪಾರಂಪರಿಕ ನಡಾವಳಿ ಅನುಸಾರ ಗುರುತಿಸಲಾದ ಸಾಂಸ್ಕೃತಿಕವಾಗಿ ಅಥವಾ ಪ್ರಾಕೃತಿಕವಾಗಿ ಪ್ರಾಮುಖ್ಯವಾದ ಸ್ಥಳಗಳೇ “ಪಾರಂಪರಿಕ ಸ್ಥಳಗಳು.”

ಭಾರತದಲ್ಲಿ ೩೦ ಜಾಗತಿಕ ಪಾರಂಪರಿಕ ಸ್ಥಳಗಳಿವೆ; ಇವುಗಳಲ್ಲಿ ೨೪ ಸಾಂಸ್ಕೃತಿಕ ಸ್ಥಳಗಳು, ಉಳಿದವು ಪಾಕೃತಿಕ ಸ್ಥಳಗಳು. ಅಜಂತಾ ಮತ್ತು ಎಲ್ಲೋರಾ ಗುಹೆಗಳು, ತಾಜಮಹಲ್, ಕೊನಾರ್ಕದ ಸೂರ್ಯ ದೇವಾಲಯ, ಎಲಿಫೆಂಟಾ ಗವಿಗಳು, ಬಿಹಾರದ ಬೋಧಗಯಾದ ಮಹಾಬೋಧಿ ದೇವಾಲಯ ಇವುಗಳಲ್ಲಿ ಕೆಲವು ಪ್ರಮುಖ ಸ್ಥಳಗಳು.

ಇವುಗಳಲ್ಲಿ ಕೆಲವು ಸ್ಥಳಗಳಿಗಾದರೂ ಭೇಟಿ ನೀಡಿದರೆ “ಭಾರತವೆಂಬ ಅದ್ಭುತ”ದ ಕಿರು ಪರಿಚಯ ನಮಗಾಗುತ್ತದೆ.

Image

ಗೀತಾಮೃತ

ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್/

ಉಭೌ ತೌ ನ ವಿಜಾನಿಂತೋ ನಾಯಂ ಹಂತಿ ನ ಹನ್ಯತೇ//೧೯//

     ಯಾರು ಈ ಆತ್ಮವನ್ನು ಕೊಲ್ಲುವವನೆಂದು ತಿಳಿಯುತ್ತಾನೋ , ಹಾಗೂ ಯಾರು ಇವನು ಸತ್ತವನೆಂದು ತಿಳಿಯುತ್ತಾನೋ ಅವರಿಬ್ಬರೂ ತಿಳಿದವರಲ್ಲ , ಏಕೆಂದರೆ ಈ ಆತ್ಮನು ವಾಸ್ತವವಾಗಿ ಯಾರನ್ನೂ  ಕೊಲ್ಲುವುದೂ ಇಲ್ಲ ಮತ್ತು ಯಾರಿಂದಲೂ ಕೊಲ್ಲಲ್ಪಡುವುದೂ ಇಲ್ಲ.

Image

“ನಮ್ಮ ಶಬ್ದಗಳು ಸಹ ನಮ್ಮ ಕರ್ಮಗಳಾಗಿರುತ್ತವೆ”

ಅದೇ ತಾನೇ ಮಹಾಭಾರತ ಯುದ್ಧ ಮುಗಿದಿತ್ತು. 18 ದಿನಗಳ ಯುದ್ಧ ದ್ರೌಪದಿಯನ್ನು 80 ನೇ ವಯಸ್ಸಿನ ಪ್ರಾಯದವರೆಗೂ ಕೊಂಡೊಯ್ದಿತ್ತು. ಮಾನಸಿಕ ಮತ್ತು ದೈಹಿಕ ರೂಪದಲ್ಲಿ. 

ಊರಲ್ಲಿ ಎಲ್ಲಿ ನೋಡಿದರಲ್ಲಿ ವಿಧವೆಯರೇ ಕಾಣಿಸುತ್ತಿದ್ದರು. ಕೈ ಕಾಲು ಮುರಿದುಕೊಂಡು ಅಂಗವೈಕಲ್ಯಗೊಂಡ ಪುರುಷರು. ಅನಾಥ ಮಕ್ಕಳು ಓಡಾಡುತ್ತಿದ್ದರು. ಸ್ಮಶಾನ ಮೌನಗೊಂಡಿತ್ತು ನಂದನವನದಂತಿದ್ದ ಹಸ್ತಿನಾಪುರ. 

Image

ಬಿಜೆಪಿ 25 + 1 ಕರ್ನಾಟಕದಲ್ಲಿ ಕಮಲ ಅರಳಿದ ಕತೆ

ಪುಸ್ತಕದ ಲೇಖಕ/ಕವಿಯ ಹೆಸರು
ರಮೇಶ್ ದೊಡ್ಡಪುರ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೯೯.೦೦ ಮೊದಲ ಮುದ್ರಣ : ಸೆಪ್ಟೆಂಬರ್ ೨೦೨೦

ಪತ್ರಕರ್ತ ರಮೇಶ್ ದೊಡ್ಡಪುರ ಇವರು ೨೦೧೯ರ ಲೋಕಸಭಾ ಚುನಾವಣೆಯನ್ನು ಹತ್ತಿರದಿಂದ ಕಂಡು ವರದಿ ಮಾಡಿದವರು. ಅವರು ಕಂಡ ಚುನಾವಣೆಯ ಸಾರ ಸಂಗ್ರಹವೇ ಬಿಜೆಪಿ ೨೫ + ೧ ಕರ್ನಾಟಕದಲ್ಲಿ ಕಮಲ ಅರಳಿದ ಕತೆ ಎಂಬ ಪುಸ್ತಕ. ಈ ಪುಸ್ತಕದ ಬೆನ್ನುಡಿಯಲ್ಲಿ ಬರೆದಂತೆ ‘೨೦೧೮ರ ವಿಧಾನ ಸಭೆ ಚುನಾವಣೆ ಹಾಗೂ ೨೦೧೯ ರ ಲೋಕಸಭಾ ಚುನಾವಣೆ ಅವಧಿಯೇ ದಾಖಲೆಗಳ ಕಾಲಮಾನ. ದೇಶದ ಇತಿಹಾಸದಲ್ಲೇ ಒಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರವಾಸ ಮಾಡಿದ ದಾಖಲೆ ನಿರ್ಮಾಣವಾದದ್ದು (ಬಿ.ಎಸ್. ಯಡಿಯೂರಪ್ಪ) ಇದೇ ಅವಧಿಯಲ್ಲಿ.

ನ್ಯಾನೋ ಕಥೆ - ತೊರೆದು ಹೋದವಳು

ಅಮ್ಮ, ಮಗ, ಸೊಸೆ, ಮೊಮ್ಮಗನಿದ್ದ ಚಿಕ್ಕ ಚೊಕ್ಕ ಕುಟುಂಬ. ತನ್ನ ಕಛೇರಿಯಲ್ಲಿ ಕೆಲಸ  ಮಾಡುತ್ತಿದ್ದ ಗೆಳತಿಯ ಮಾತುಕೇಳಿ, ನಿತ್ಯವೂ ಸೊಸೆ ಬೇರೆ ಮನೆ ಮಾಡೋಣ ಎಂದು ಗಂಡನಲ್ಲಿ ಹೇಳುತ್ತಿದ್ದಳು. ಅತ್ತೆಯನ್ನು ಯಾವಾಗಲೂ ಕೂಲಿಯಾಳಿನಂತೆ ನೋಡುತ್ತಿದ್ದಳು. ಅತ್ತೆ ಸಾವಿತ್ರಮ್ಮ ಸೊಸೆ ರಮಾಳ ಎಲ್ಲಾ ದಿನನಿತ್ಯದ ಆಗುಹೋಗುಗಳನ್ನು ಗಮನಿಸುತ್ತಿದ್ದರು. ಅಗಲಿದ ತನ್ನ ಪತಿಯನ್ನು ನೆನೆದು ಕಣ್ಣೀರು ಹಾಕುತ್ತಿದ್ದರು.

Image