ಮರುಭೂಮಿಯ ಹೂ (ವಾರಿಸ್ ಡಿರಿ ಅವರ ‘ಡೆಸರ್ಟ್ ಪ್ಲವರ್’ ಆತ್ಮಕತೆ)
ಸೋಮಾಲಿಯಾದ ಹೆಣ್ಣು ಮಗಳು ವಾರಿಸ್ ಡಿರಿಳ ಆತ್ಮಕಥೆ “ಮರುಭೂಮಿಯ ಹೂ”. ವಾರಿಸ್ ಡಿರಿ ಜಗತ್ತಿನ ಜಾಹಿರಾತು ಲೋಕದಲ್ಲಿ ಒಂದು ಅಚ್ಚಳಿಯದ ಹೆಸರು. ಆತ್ಮಕಥೆಯ ವಸ್ತು, ವಿವರ ಹಾಗೂ ಜಗತ್ ಪ್ರಸಿದ್ಧ ರೂಪದರ್ಶಿಯಾಗಿದ್ದುಕೊಂಡು ವಾರಿಸ್ ಡಿರಿ ತೆರೆದಿಟ್ಟ ತನ್ನ ಬದುಕಿನ ಬಡತನ, ಅಪಮಾನ, ಅತ್ಯಾಚಾರದಂತಹ ಸಂಗತಿಗಳು ಹಾಗೂ ಆಫ್ರಿಕಾದ ಬುಡಕಟ್ಟು ಜನಾಂಗಗಳಲ್ಲಿ ಆಚರಣೆಯಲ್ಲಿರುವ ಯೋನಿ ಛೇದನ ಎಂಬ ಕ್ರೂರ ಪದ್ಧತಿ ಇವೆಲ್ಲವುಗಳಿಂದಾಗಿ ಈ ಕೃತಿಯು ಓದುಗರನ್ನು ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಗುಣವನ್ನು ಪಡೆದಿದೆ. ಆಕೆ ಅನುಭವಗಳನ್ನು ದಾಖಲಿಸುವ ರೀತಿ ಅನನ್ಯವಾದುದು.
- Read more about ಮರುಭೂಮಿಯ ಹೂ (ವಾರಿಸ್ ಡಿರಿ ಅವರ ‘ಡೆಸರ್ಟ್ ಪ್ಲವರ್’ ಆತ್ಮಕತೆ)
- Log in or register to post comments