ಎರಡು ಮೋಹಕ ಗಝಲ್ ಗಳು
ಗಝಲ್ ೧
ಮಾತಿರದ ಸಂಬಂಧ ಬದುಕಿನಲಿ ಬೇಕೇ ಸಖಿ
ಬತ್ತಿರುವ ಕನಸುಗಳು ನನಸಿನಲಿ ಬೇಕೇ ಸಖಿ
ಬಣ್ಣನೆಯ ಮಾತುಗಳಿಗೆ ಅರ್ಥವು ಇದೆಯೇನು
ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಸಖಿ
- Read more about ಎರಡು ಮೋಹಕ ಗಝಲ್ ಗಳು
- Log in or register to post comments
ಗಝಲ್ ೧
ಮಾತಿರದ ಸಂಬಂಧ ಬದುಕಿನಲಿ ಬೇಕೇ ಸಖಿ
ಬತ್ತಿರುವ ಕನಸುಗಳು ನನಸಿನಲಿ ಬೇಕೇ ಸಖಿ
ಬಣ್ಣನೆಯ ಮಾತುಗಳಿಗೆ ಅರ್ಥವು ಇದೆಯೇನು
ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಸಖಿ
ಗುರು ಶಿಚಿರಿ ಸೂತ್ರಗಳನ್ನು ಪಠಿಸುತ್ತಿದ್ದಾಗ, ಕಳ್ಳನೊಬ್ಬ ಒಳ ಬಂದ. ಬಂದವನೇ ಚೂರಿ ತೋರುಸುತ್ತಾ ಹೆದರಿಸಿದ, “ನಿನ್ನಲ್ಲಿರುವ ಹಣವನ್ನೆಲ್ಲಾ ಕೊಡು. ಇಲ್ಲದಿದ್ದರೆ ನಿನ್ನ ಹೆಣ ಬೀಳುತ್ತದೆ.”
“ಅಷ್ಟೇ ತಾನೇ? ಹಣ ಆ ಪೆಟ್ಟಿಗೆಯಲ್ಲಿದೆ, ತೆಗೆದುಕೋ” ಎಂದು ಕೈಯೆತ್ತಿ ಪೆಟ್ಟಿಗೆ ತೋರಿಸಿದ ಶಿಚಿರಿ, ಸೂತ್ರಗಳ ಪಠಣ ಮುಂದುವರಿಸಿದ.
ಕೆಲವು ನಿಮಿಷಗಳು ಸರಿದವು. ಶಿಚಿರಿ ತಲೆಯೆತ್ತಿ ಕಳ್ಳನನ್ನು ಉದ್ದೇಶಿಸಿ ಹೇಳಿದ, “ಎಲ್ಲಾ ಹಣ ತೆಗೆದುಕೊಳ್ಳಬೇಡ. ನಾಳೆ ಕಂದಾಯ ಕಟ್ಟಲಿಕ್ಕಿದೆ. ಸ್ವಲ್ಪ ಹಣ ಇಟ್ಟು ಹೋಗು.”
ಬೆಳೆಯುವ ಸಿರಿ ಮೊಳಕೆಯಲ್ಲೇ.. ಇದು ಬಹಳ ಹಿಂದಿನಿಂದಲೂ ಹಿರಿಯರಾಡುವ ಹಿತ ಮಾತು. ಈ ಮಾತು ಯಾವಾಗಲೂ ಸರ್ವಕಾಲಿಕ ಸತ್ಯ. ಏಕೆಂದರೆ ನಮ್ಮ ಹಿರಿಯರು ತಮ್ಮ ಜೀವನದಲ್ಲಿ ಅನುಭವಿಸಿದ ಪ್ರತಿಯೊಂದು ವಿಷಯಗಳನ್ನು ಗಾದೆ ಮಾತುಗಳನ್ನಾಗಿ ಮಾಡಿರುವರು. ಬಾಲ್ಯದಲ್ಲೇ ಚುರುಕಾಗಿರುವ, ಅಪಾರ ಪ್ರತಿಭೆಯನ್ನು ಹೊಂದಿರುವ ಮಕ್ಕಳ ಬಗ್ಗೆಯೂ ನಾವು ಈ ಮಾತನ್ನು ಬಳಸುತ್ತೇವೆ. ಕೆಲವು ಮಕ್ಕಳು ಕಲಿಕೆಯಲ್ಲಿ, ಕೆಲವರು ಕ್ರೀಡೆಯಲ್ಲಿ ಮತ್ತು ಕೆಲವರು ವಿವಿಧ ಕಲಾ ಪ್ರಕಾರಗಳಲ್ಲಿ ಪರಿಣತಿಯನ್ನು ಪಡೆದಿರುತ್ತಾರೆ. ಬಾಲ್ಯದಲ್ಲೇ ತಮ್ಮ ಒಲವು ಯಾವ ಕಡೆಗೆ ಇದೆ ಎಂದು ನಿರೂಪಿಸುತ್ತಾ ಹೋಗುತ್ತಾರೆ. ಇಂತಹ ಒಂದು ಬಾಲ ಪ್ರತಿಭೆಯನ್ನು ನಾನು ನಿಮಗೆ ಪರಿಚಯ ಮಾಡಿ ಕೊಡಲಿದ್ದೇನೆ.
ಗುಣೇಷ್ವಪಿ ಹಿ ಕರ್ತವ್ಯಾಃ ಪ್ರಯತ್ನಾಃ ಪುರುಷೈಃ ಸದಾ/
ಗುಣಯುಕ್ತೋ ದರಿದ್ರೋಪಿ ನೈಶ್ಚರೈರಗುಣೈಃ ಸಮಃ//
ಮನುಷ್ಯನು ಯಾವಾಗಲೂ ಒಳ್ಳೆಯ ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕು. ಇದರಿಂದ ಅವನ ಘನತೆ ಹೆಚ್ಚುವುದು.
ಹೂ ಹಸಿರೆ ಸಿರಿಯು ಇಲ್ಲಿ
ನಿಲ್ಲು ನಿಲ್ಲೆಲೆ ಗೆಳೆಯ!
ಬಣ್ಣಬಣ್ಣದ ಕನಸ
ತುಂಬಿ ಬಗೆ ಬಾನೊಳಗೆ
ಧಾವಿಸುವ ಜೀವ ಗೆಳೆಯ!
(ಕೃಷಿಕರ ಪರವಾಗಿ ಮತ್ತು ಅಡಿಕೆ ಬೆಳೆಗಾರರ ಹಿತಾಸಕ್ತಿ ರಕ್ಷಣೆಗಾಗಿ ನೂರಾರು ಕೃಷಿಕ ಸಮಾವೇಶಗಳಲ್ಲಿ ಬಲವಾಗಿ ಧ್ವನಿಯೆತ್ತುತ್ತಿದ್ದ ಸಮರ್ಥ ಸಂಘಟಕ ಮಂಚಿ ಶ್ರೀನಿವಾಸ ಆಚಾರ್ (೭೩) ಅಲ್ಪ ಕಾಲದ ಅಸೌಖ್ಯದಿಂದ ೨೯ ಆಗಸ್ಟ್ ೨೦೨೦ರಂದು ನಮ್ಮನ್ನು ಅಗಲಿದರು. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಮತ್ತು ಕೃಷಿಕರೇ ರೂಪಿಸುವ ಅಪ್ಪಟ ಕೃಷಿಕಪರ ಮಾಸಪತ್ರಿಕೆ "ಅಡಿಕೆ ಪತ್ರಿಕೆ”ಯ ಸಂಪಾದಕ - ಪ್ರಕಾಶಕರಾಗಿ ಅವರು ಸಲ್ಲಿಸಿದ ಸೇವೆಗೆ ಬೆಲೆ ಕಟ್ಟಲಾಗದು. ಆತ್ಮೀಯ ಮಂಚಿ ಶ್ರೀನಿವಾಸ ಆಚಾರ್ ಬಗ್ಗೆ ನಾನು ಬರೆದಿದ್ದ ಬರಹವೊಂದು “ಉದಯವಾಣಿ"ಯ ನನ್ನ ಅಂಕಣ “ಬಹುಧಾನ್ಯ"ದಲ್ಲಿ ೧೫ ವರುಷಗಳ ಮುಂಚೆ, ೩ ಮೇ ೨೦೦೫ರಂದು ಪ್ರಕಟವಾಗಿತ್ತು. ಅದನ್ನೇ ಅವರಿಗೆ ನುಡಿನಮನವಾಗಿ ಪುನಃ ಪ್ರಕಟಿಸುತ್ತಿದ್ದೇನೆ.)
ಕಾಗೆ
ಕಾವ್ ಕಾವ್ ಕಾಗೆ
ಹಾರಿ ಬಂದಿತು/
ಮನೆಯ ಸುತ್ತಮುತ್ತ ನೋಡಿ
ಸ್ವಚ್ಛ ಮಾಡಿತು//
ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಹೋರಾಡಿದ ಸಹಸ್ರಾರು ಭಾರತಾಂಬೆಯ ವೀರ ಪುತ್ರರ ಬಗ್ಗೆ ನಮಗೆ ತಿಳಿದೇ ಇದೆ. ಅವರೆಲ್ಲರೂ ಭಾರತ ದೇಶದಲ್ಲಿ ಹುಟ್ಟಿ ತಮ್ಮದೇ ನಾಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಆದರೆ ಯಾರ ಆಕ್ರಮಣದಿಂದ ನಾವು ನಮ್ಮ ಸ್ವಾತಂತ್ರ್ಯವನ್ನು ಕಳೆದುಕೊಂಡು, ಪರತಂತ್ರರಾದೆವೋ ಅವರ ನಾಡಿನಲ್ಲೇ ಹುಟ್ಟಿದ ಓರ್ವ ವ್ಯಕ್ತಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದು ಅಚ್ಚರಿಯ ಸಂಗತಿಯೇ ಹೌದು. ಬ್ರಿಟೀಷರು ನಮ್ಮನ್ನು ಆಳುತ್ತಿರುವಾಗ ಅವರಲ್ಲಿ ಹಲವಾರು ಮಂದಿಗೆ ನಮ್ಮವರ ಕರುಣಾಜನಕ ಸ್ಥಿತಿಯ ಬಗ್ಗೆ ಕನಿಕರವಿತ್ತು.
ಈಶ್ವರನ ಪತ್ನಿಯಾದ ಪಾರ್ವತಿ ದೇವಿಗೆ ಒಮ್ಮೆ ಒಂದು ಯೋಚನೆ ಬಂತು. ‘ಬ್ರಹ್ಮನ ಪತ್ನಿ ಸರಸ್ವತಿ, ವಿಷ್ಣುವಿನ ಪತ್ನಿ ಲಕ್ಷ್ಮಿ ಈರ್ವರೂ ಮೈತುಂಬಾ ಬಂಗಾರ ಹಾಕಿಕೊಂಡಿದ್ದಾರೆ. ನಾನು ಮಾತ್ರ ನಿರಾಭರಣ ಸುಂದರಿಯಂತೆ ಬಂಗಾರವಿಲ್ಲದೇ ಇದ್ದೇನಲ್ಲಾ’. ತ್ರಿಮೂರ್ತಿಯಲ್ಲಿ ಒಬ್ಬರಾದ ಈಶ್ವರನ ಪತ್ನಿಯಾದ ತಾನು ಯಾಕೆ ಬಂಗಾರದ ಆಭರಣಗಳನ್ನು ಹಾಕಿಕೊಳ್ಳಬಾರದೆಂದು ಪಾರ್ವತಿ ಸ್ವತಃ ಈಶ್ವರನಲ್ಲಿ ‘ಸ್ವಾಮಿ ನನಗೆ ಬಂಗಾರ ಹಾಕಿಕೊಳ್ಳುವ ಬಯಕೆಯಾಗಿದೆ. ನನಗೆ ಅನುಗ್ರಹಿಸಿ' ಎಂದು ಕೇಳಿಕೊಂಡಾಗ ಈಶ್ವರ ಒಂದು ಚಿಟಿಕೆ ಭಸ್ಮ (ವಿಭೂತಿ) ವನ್ನು ತೆಗೆದು ಪಾರ್ವತಿ ಕೈಗೆ ಕೊಡುತ್ತಾನೆ.
ಡೋಲಣ್ಣ ಕರಡಿ ಗೊಂಬೆಯ ಚಟ ತನ್ನನ್ನೇ ತಾನು ಹೊಗಳುವುದು. "ನನ್ನ ಮೃದುವಾದ ರೋಮ ನೋಡಿದಿರಾ? ಹೇಗೆ ಹೊಳೆಯುತ್ತಿದೆ ನೋಡಿ” ಎಂದು ಇತರ ಗೊಂಬೆಗಳೊಂದಿಗೆ ಹೇಳುತ್ತಲೇ ಇರುತ್ತಿತ್ತು ಡೋಲಣ್ಣ ಕರಡಿ ಗೊಂಬೆ.
“ಈ ಮನೆಯಲ್ಲಿ ನಾನೇ ಅತಿ ಬುದ್ಧಿವಂತ ಗೊಂಬೆ. ಈ ಸತ್ಯ ಎಲ್ಲರಿಗೂ ಗೊತ್ತಿದೆ” ಎಂದು ತನ್ನ ಬಗ್ಗೆ ಮಾತನಾಡುವುದೆಂದರೆ ಡೋಲಣ್ಣ ಕರಡಿ ಗೊಂಬೆಗೆ ಖುಷಿಯೋ ಖುಷಿ. ಆಗೆಲ್ಲ ಇತರ ಗೊಂಬೆಗಳು ತನ್ನ ಬೆನ್ನ ಹಿಂದೆ ನಗುತ್ತಿವೆ ಎಂಬುದು ಡೋಲಣ್ಣ ಕರಡಿ ಗೊಂಬೆಗೆ ಗೊತ್ತಿರಲಿಲ್ಲ.