ಎರಡು ಮೋಹಕ ಗಝಲ್ ಗಳು

ಎರಡು ಮೋಹಕ ಗಝಲ್ ಗಳು

ಕವನ

ಗಝಲ್ ೧

ಮಾತಿರದ ಸಂಬಂಧ ಬದುಕಿನಲಿ ಬೇಕೇ ಸಖಿ

ಬತ್ತಿರುವ ಕನಸುಗಳು ನನಸಿನಲಿ ಬೇಕೇ ಸಖಿ

 

ಬಣ್ಣನೆಯ ಮಾತುಗಳಿಗೆ ಅರ್ಥವು ಇದೆಯೇನು

ಹೊತ್ತಿರುವ ಬಯಕೆಗಳು ಹಗಲಿನಲಿ ಬೇಕೇ ಸಖಿ

 

ಬತ್ತೇರಿಯ ಮೇಲ್ಗಡೆ ನಿಂತಿರುವ ಅನುಭವವಿಂದು

ಮೋಹವೇರದ ಬತ್ತಳಿಕೆ ಚೆಲುವಿನಲಿ ಬೇಕೇ ಸಖಿ

 

ಸುಂದರವಾದ ವಸ್ತುವಿನ ಒಳಗೋಡೆ ಹೊಲಸಾಗಿದೆ

ಫಲವಿರದ ಬೀಳುಒಡಲು ಅಸಲಿನಲಿ ಬೇಕೇ ಸಖಿ

 

ಈಶನ ಪೀಕಲಾಟದ ನಡುವೆಯೂ ಸವಾರಿಯೇನು

ಫಸಲಿರದ ಮಾಧೂರ್ಯಗಳು ಸೇವಕನಲಿ ಬೇಕೆ ಸಖಿ

-ಹಾ ಮ ಸತೀಶ

********

ಗಝಲ್ ೨

ಮಧುಬಟ್ಟಲು ಒಡೆದು

ಹಾಳಾಗಿದೆ ಕೇಳೊರಿಲ್ಲ

ಅಧರದಲಿ ನಗುವಿಂದು

ದೂರಾಗಿದೆ ಕೇಳೊರಿಲ್ಲ

 

ಹೃದಯ ವೀಣೆಯ ತಂತಿ

ಹರಿದು ಹೋಗಿದೆ

ಮದದಲ್ಲಿ ನಶಾಲೋಕ

ಮುಳುಗಿದೆ ಕೇಳೊರಿಲ್ಲ

 

ಮೋಹಕ ನೃತ್ಯದ ಮಾದಕತೆ

ಭಾಸವಾಗುತ್ತಿದೆ

ದಾಹದ ಶರಾಬಿನ ಸೀಸೆ

ಚೂರಾಗಿದೆ ಕೇಳೊರಿಲ್ಲ

 

ಛಿದ್ರವಾದ ಹೃದಯವು ತಾನು

ಒಂದೆಸಮ ಗೋಳಿಡುತಿದೆ

ಭದ್ರವಾದ ಕೌದಿಯಲಿ ಕನಸು

ಮಲಗಿದೆ ಕೇಳೊರಿಲ್ಲ

 

ಹಸ್ತವ ಸ್ಪರ್ಶಿಸಿ ಚುಂಬಿಸಿ

ಹೊರಟಳು ಚೆಲುವೆ

ಉಸ್ತಾದ ಅಭಿನವನ ಗಜಲ್

ಮರುಗಿದೆ ಕೇಳೊರಿಲ್ಲ

-ಶಂಕರಾನಂದ ಹೆಬ್ಬಾಳ 

ಚಿತ್ರ ಕೃಪೆ; ಕಾರ್ತಿಕ್ ನಾಯರ್

 

ಚಿತ್ರ್