ಶಿಶು ಗೀತೆಗಳ ಸಂಭ್ರಮ
ಕವನ
ಕಾಗೆ
ಕಾವ್ ಕಾವ್ ಕಾಗೆ
ಹಾರಿ ಬಂದಿತು/
ಮನೆಯ ಸುತ್ತಮುತ್ತ ನೋಡಿ
ಸ್ವಚ್ಛ ಮಾಡಿತು//
ಅನ್ನದಗುಳ ಕಂಡರೆ
ಬಳಗ ಕೂಗಿ ಕರೆವುದು/
ಎಲ್ಲರೊಂದೆ ಎನುವ ತತ್ವ
ನಿತ್ಯ ನಮಗೆ ತಿಳಿವುದು//
ದಿನದ ಬೆಳಗು ಕಾಗೆಯಿಂದ
ಎಚ್ಚರವ ಗೊಳಿಸುವುದು/
ಸದಾ ತನ್ನ ಕಾಯಕವ
ಜತನದಿಂದ ಮಾಡುವುದು//
ಕಪ್ಪು ಬಣ್ಣ ಆದರೇನು
ಮನಸು ಬಿಳಿಯು ಅಲ್ಲವೇನು/
ಕಾಗೆ ಗುಂಪು ನಾಡಲಿರೆ
ಊರು ಕೇರಿ ಸ್ವಚ್ಛವು//
- ರತ್ನಾ ಭಟ್ ತಲಂಜೇರಿ
******
ಕುಣಿದು ಬಂದ
ಕುಣಿದು ಬಂದ
ನಲಿದು ಬಂದ
ನಮ್ಮ ಮುದ್ದು ಕಂದ
ಅತ್ತ ಇತ್ತ
ಸುತ್ತ ಮುತ್ತ
ಕುಣಿದು ಕೂತ ಕಂದ
ಬಾಲ ಭಾಷೆ
ಹೇಳಿ ನಮ್ಮ
ಮೊಗದಿ ನಗುವ ತಂದ
ಕುಡಿವ ಹಾಲ
ಅರ್ಧ ಚೆಲ್ಲಿ
ನೆಲದಿ ಜಾರಿ ಕಂದ
ತಾಯಿ ಬಂದು
ಎತ್ತಿ ಕೊಳಲು
ಮುಖದಿ ನಗುವು ಚಂದ
ಊಟ ಉಣಿಸೆ
ಬೊಚ್ಚು ಬಾಯಿ
ನೋಡಲದುವೆ ಅಂದ
-ಹಾ ಮ ಸತೀಶ್
ರೂಪದರ್ಶಿ ಮಗು: ಅಂಶ್ ಗಿರೀಶ್, ಕುತ್ತಾರ್, ಮಂಗಳೂರು
ಚಿತ್ರ್
