ಒಂದು ಒಳ್ಳೆಯ ನುಡಿ - 5

ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಶಿರಾ/

ಅನುಗ್ರಹಶ್ಚ ದಾನಂತ ಶೀಲವೇತದ್ವಿದುರ್ಬುದಃ//

ಯಾರಿಗೂ ನೋವಾಗದಂತೆ ಬದುಕಿರಿ ಮಕ್ಕಳೇ --ಇದು ಹೆತ್ತಮ್ಮನ ಮಾತು. ಈ ಮಾತಿನಲ್ಲಿ ಎಷ್ಟು ಶಕ್ತಿ ಅಡಕವಾಗಿದೆ ಎಂದು ಅಳೆಯಲು ಸಾಧ್ಯವಿಲ್ಲ. ಹೆತ್ತವರ ಮಾತನ್ನು ಕಡೆಗಣಿಸಿ ಉದ್ದಾರವಾದವರನ್ನು ನಾವು ಕಂಡದ್ದಿಲ್ಲ.

Image

ಕೊರೊನಾ ಕಾಲದಲ್ಲಿ ಕಾಡಿನ ಬುಡಕಟ್ಟು ಜನರ ಸಂರಕ್ಷಣೆ

ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮೀಟರುಗಳ ದೂರದಲ್ಲಿ, ದಟ್ಟ ಕಾಡುಗಳ ಒಳಗೆ ಶತಮಾನಗಳಿಂದ ವಾಸ ಮಾಡುತ್ತಿರುವ ಆದಿ ಬುಡಕಟ್ಟುಗಳಿಗೆ ದೊಡ್ಡ ಅಪಾಯವಿದೆ. ಯಾಕೆಂದರೆ, ನಗರವಾಸಿಗಳನ್ನು ಬಾಧಿಸುವ ಯಾವುದೇ ರೋಗಗಳಿಂದ ಅವರು ಈ ವರೆಗೆ ಮುಕ್ತರಾಗಿದ್ದರು. ಹಾಗಾಗಿ, ಇಂತಹ ಯಾವುದೇ ರೋಗಗಳ ನಿರೋಧ ಶಕ್ತಿ ಬುಡಕಟ್ಟಿನವರಲ್ಲಿ ಇಲ್ಲವೆಂದೇ ಹೇಳಬಹುದು.

Image

ಅಜ್ಜಿ ಹೇಳಿದ ಕಥೆಗಳು

ಪುಸ್ತಕದ ಲೇಖಕ/ಕವಿಯ ಹೆಸರು
ರೋಹಿತ್ ಚಕ್ರತೀರ್ಥ
ಪ್ರಕಾಶಕರು
ಅಯೋಧ್ಯಾ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೮೦-೦೦ ಮೊದಲ ಮುದ್ರಣ: ಸೆಪ್ಟೆಂಬರ್ ೨೦೨೦

ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ್ಜಿ ಹೇಳಿದ ಕಥೆಗಳು ಎಂಬ ಹೆಸರಿನಲ್ಲಿ ದೇಶ, ವಿದೇಶಗಳ ಮಕ್ಕಳ ಕಥೆಗಳನ್ನು ಹುಡುಕಿ ತಂದು ಪ್ರಕಟಿಸಿದ್ದಾರೆ. ಈಗಿನ ಮಕ್ಕಳು ಕಥೆ ಪುಸ್ತಕ ಓದುವುದೇ ಇಲ್ಲ ಎಂಬ ಅಪವಾದವಿದೆ. ಆದರೆ ರೋಹಿತ್ ಅವರ ಈ ಪುಸ್ತಕವನ್ನು ಮಕ್ಕಳು ಸರಾಗವಾಗಿ ಓದಿ ಮುಗಿಸಬಹುದು ಏಕೆಂದರೆ ಬಹುತೇಕ ಕಥೆಗಳು ಒಂದೆರಡು ಪುಟಗಳಲ್ಲೇ ಮುಗಿದು ಹೋಗುವಷ್ಟು ಚಿಕ್ಕದಾಗಿವೆ ಮತ್ತು ಚೊಕ್ಕದಾಗಿಯೂ ಇವೆ.

ಒಂದು ಒಳ್ಳೆಯ ನುಡಿ - 4

ಅಹಂ

ಅಹಂ ಎಂಬುದು ನಮ್ಮಿಂದ ಏನನ್ನೆಲ್ಲ ಮಾಡಿಸುವುದಕ್ಕು, ಮಾಡುವುದಕ್ಕೂ ಹೇಸುವುದಿಲ್ಲ. ಓರ್ವ ಎಷ್ಟು ಒಳ್ಳೆಯ ವ್ಯಕ್ತಿಯಾಗಿದ್ದರೂ ಅಹಂಕಾರ  ಅವನ ಶರೀರಕ್ಕೆ ಆವರಿಸಿತು ಎಂದಾದರೆ, ಅವ ಪಾತಾಳಕ್ಕೆ ಕುಸಿದ ಅಂತಲೇ ಲೆಕ್ಕ. ಎದುರಿನಿಂದ ಯಾರೂ ತೋರ್ಪಡಿಸಲಾರರು. ಆದರೆ ಬೆನ್ನ ಹಿಂದೆ ಆಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಬಿಡುತ್ತದೆ. ಹಣವಂತನಿಗಾದರೂ ಸಮಾಜದಲ್ಲಿ ಮನಸಿಲ್ಲದಿದ್ದರೂ, ಒಂದು ಸ್ಥಾನಮಾನ ಸಿಗಬಹುದು. ಬಡವನಿಗೆ, ಕಷ್ಟದಲ್ಲಿದ್ದವಗೆ ಅಹಂ ಪ್ರವೇಶ ಆದರೆ ಅಧೋಗತಿಯೇ ಸರಿ.

Image

ಹಾ ಮ ಸತೀಶ್ ಅವರ ಕವನ ಮತ್ತು ಹನಿಗಳು

ಕಲಿತು ಕಲಿತಿಲ್ಲದವರ ನಡುವೆ

ಕಲಿತವರ ನಡುವೆ 

ಕಲಿತವರು ಇರಬಾರದು

ಕಲಿತವರು ಕಳೆಯಬಾರದು

ಕಲಿತವರ ನಡು ನಡುವೆಯೆ

ಕರಡಿ ಮರಿ ಕಾಡಿಗೆ ಹೋಗಲೇ ಬೇಕು

ಕುಮುದ ಮರದ ನೆರಳಿನಲ್ಲಿ ಮಲಗಿದ್ದಾಗ ಅವಳ ಗೊಂಬೆ ಕಾಳು ಕರಡಿ ಕಾಡಿನೊಳಗೆ ಸುತ್ತಾಟಕ್ಕೆ ಹೋಗಿ ದಾರಿ ತಪ್ಪಿತು. ಅದಕ್ಕೆ ವಾಪಾಸು ಬರುವ ದಾರಿ ಗೊತ್ತಾಗಲೇ ಇಲ್ಲ. ಹಾಗಾಗಿ ಅದು ಒಂದು ಮರದ ಕೆಳಗೆ ಕುಳಿತು, “ಈಗ ಏನಪ್ಪಾ ಮಾಡೋದು" ಎಂದು ಯೋಚಿಸ ತೊಡಗಿತು.

ಕುಮುದ ನಿದ್ದೆಯಿಂದೆದ್ದು ನೋಡಿದಾಗ ಅವಳ ಕಾಳು ಕರಡಿ ಎಲ್ಲಿಯೂ ಕಾಣಿಸಲಿಲ್ಲ. ಅದನ್ನು ಯಾರೋ ಎತ್ತಿಕೊಂಡು ಹೋಗಿರಬೇಕು ಎಂದು ಅವಳು ಯೋಚಿಸಿದಳು. ಯಾಕೆಂದರೆ, ಮನುಷ್ಯರು ಮಲಗಿದಾಗ ಅವರ ಆಟದ ಗೊಂಬೆ ಕರಡಿಗಳು ಸುತ್ತಾಟಕ್ಕೆ ಹೋಗುತ್ತವೆ ಎಂಬುದು ಅವಳಿಗೆ ಗೊತ್ತಿರಲಿಲ್ಲ.

Image

ತಿಳಿಮುಗಿಲ ತೊಟ್ಟಿಲಲಿ ಚಂದಿರ

ಬಾನಿನ ಅಂಗಳ ಇರುಳಲಿ ಹೊಳೆದಿದೆ

ಮೇನೆಯು ಹೊರಟಿದೆ ಮೆರವಣಿಗೆ

ಸೋನೆಯ ಹನಿಯದು ಅಕ್ಷತೆ ಹಾಕಿದೆ

ಯಾನದಿ ಸುಂದರ ಬರವಣಿಗೆ..

 

ಚಂದಿರ ತೊಟ್ಟಿಲು ಮಿಂಚಿದೆ ಬಾನಲಿ

ಆಟದೊಂದಿಗೆ ಮಾತು ಮುಗಿಸಿದ ಕ್ರಿಕೆಟ್ ಆಟಗಾರ- ಡೀನ್ ಜೋನ್ಸ್

ಅಂದು ಆಗಸ್ಟ್ ೭, ೨೦೦೬ರಂದು ಕೊಲಂಬೋದಲ್ಲಿ ಶ್ರೀಲಂಕಾ ಹಾಗೂ ಪ್ರವಾಸೀ ದಕ್ಷಿಣ ಆಫ್ರಿಕಾ ನಡುವೆ ಆಡಲಾಗುತ್ತಿದ್ದ ಟೆಸ್ಟ್ ಪಂದ್ಯದ ನಾಲ್ಕನೇ ದಿನ. ಫೀಲ್ಡಿಂಗ್ ಮಾಡುತ್ತಿದ್ದ ದಕ್ಷಿಣ ಆಫ್ರಿಕಾದ ಆಟಗಾರ ಹಾಶಿಂ ಆಮ್ಲಾ ಒಂದು ಕ್ಯಾಚ್ ಪಡೆದುಕೊಳ್ಳುತ್ತಾರೆ. ಆಗ ಅವರನ್ನು ವೀಕ್ಷಕ ವಿವರಣೆ ನೀಡುತ್ತಿದ್ದ ವ್ಯಕ್ತಿ ‘ಭಯೋತ್ಪಾದಕ ಇನ್ನೊಂದು ವಿಕೆಟ್ ಪಡೆದುಕೊಂಡ' ( the Terrorist gets another wicket) ಎಂದು ವಿವರಿಸುತ್ತಾರೆ. ಹಾಶಿಂ ಆಮ್ಲಾ ಮುಸಲ್ಮಾನನಾಗಿದ್ದು, ಉದ್ದನೆಯ ಗಡ್ಡ ಬಿಟ್ಟಿರುತ್ತಾರೆ. ಆ ಕಾರಣದಿಂದ ಈ ‘ಭಯೋತ್ಪಾದಕ' ಎಂಬ ಮಾತು ದೊಡ್ಡ ಸುದ್ದಿಯಾಗಿ ಬಿಡುತ್ತದೆ. ವೀಕ್ಷಕ ವಿವರಣೆ ನೀಡಿದ ವ್ಯಕ್ತಿ ತನ್ನ ಕೆಲಸ ಕಳೆದುಕೊಳ್ಳುತ್ತಾನೆ. ಆ ವ್ಯಕ್ತಿ ಯಾರು ಗೊತ್ತಾ?

Image

ಬಾಳಿಗೊಂದು ಕಿವಿಮಾತು

ಮಾ(ದಾ)ನವ

ಮಾನವ ಮತ್ತು ದಾನವ ಇಲ್ಲಿ 'ಮಾ'ಮತ್ತು 'ದಾ'ಮಾತ್ರ ಅಕ್ಷರ ವ್ಯತ್ಯಾಸಗಳನ್ನು ನಾವು ಕಾಣಬಹುದು.

ಮಾ--ಮಾರ್ದವತೆ, ಮಧುರತೆ, ಒಳ್ಳೆಯ ಗುಣಗಳು, ಅಮರತ್ವದ ಸಂಕೇತ.

ದ ಅಥವಾ ದಾ--ದಯಾಹೀನತೆ, ಧರ್ಮಭೃಷ್ಟತೆ, ದೌರ್ಜನ್ಯ, ಕೆಟ್ಟ ಕೆಲಸಗಳ ಸಂಕೇತ.

Image

ಬದುಕು ಬದಲಿಸಬಲ್ಲ ಅಮೃತವಾಣಿಗಳು

ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ - ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

Image