ಬದುಕು ಬದಲಿಸಬಲ್ಲ ಅಮೃತವಾಣಿಗಳು

ಬದುಕು ಬದಲಿಸಬಲ್ಲ ಅಮೃತವಾಣಿಗಳು

ಯಾರೋ ಸಂಗ್ರಹಿಸಿದ ಅಮೃತವಾಣಿಗಳ ಗುಚ್ಛ ಇಲ್ಲಿದೆ. ಓದಿರಿ - ಆನಂದಿಸಿರಿ. ಅರ್ಥ ತಿಳಿಯಿರಿ, ಬದುಕಿನುದ್ದಕ್ಕೂ ಅನ್ವಯಿಸುವುದನ್ನು ಅಳವಡಿಸಿಕೊಳ್ಳಿರಿ.

 • "ರಸ್ತೆ ಮೇಲೆ ಕಲ್ಲಿನ ಹರಳುಗಳಿದ್ದರೆ ಒಳ್ಳೆಯ ಬೂಟು ಹಾಕಿಕೊಂಡು ನಡೆಯಬಹುದು..!!" ಆದರೆ...."ಒಳ್ಳೆಯ ಬೂಟಿನೊಳಗೆ ಒಂದೇ ಒಂದು ಕಲ್ಲಿನ ಹರಳು ಇದ್ದಲ್ಲಿ ಅತ್ಯುತ್ತಮ ರಸ್ತೆಯ ಮೇಲೂ‌ ನಾಲ್ಕು ಹೆಜ್ಜೆ ನಡೆಯಲು ಸಾಧ್ಯವಿಲ್ಲ...!!""ಹೊರಗಿನ ಸವಾಲುಗಳಿಗಿಂತಲೂ ನಾವು ಒಳಗಿನ ದುರ್ಬಲತೆಯಿಂದಲೇ ಸೋಲುವುದು ಹೆಚ್ಚು.!"
 • ತುಳಿಯುವವರ ಮಧ್ಯೆ ಬೆಳೆದು ನಿಲ್ಲಬೇಕು ಅವಾಗಲೇ ವ್ಯಕ್ತಿತ್ವಕ್ಕೆ ಬೆಲೆ ಸಿಗುವುದು.
 • ಪ್ರಯತ್ನ ಎಂಬುದು ಬೀಜದ ಹಾಗೆ. ಬಿತ್ತುತ್ತಲೇ ಇರಿ. ಒಂದಲ್ಲ ಒಂದು ದಿನ ಮರವಾಗಿ ಫಲ ಕೊಟ್ಟೇ ಕೊಡುತ್ತದೆ....
 • ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಏಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ.
 • ಒಂದು ಕಾಲು ಮುಂದೆ ಒಂದು ಕಾಲು ಹಿಂದೆ. ಆದರೆ ಮುಂದಿನದಕ್ಕೆ ಗರ್ವವಿಲ್ಲ, ಹಿಂದಿನ ಅದಕ್ಕೆ ಬೇಸರವಿಲ್ಲ, ಏಕೆಂದರೆ ಇದು ಕ್ಷಣಿಕ.
 • ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗೇ ನೀರು ಅಲ್ಲಿಗೆ ಹರಿದುಬರುತ್ತದೆ. ಯಶಸ್ಸು ಮತ್ತು ಕೀರ್ತಿಗಳೂ ಹಾಗೆಯೇ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ.
 • ಪ್ರಭಾವ ನೋಡಿ ಹತ್ತಿರ ಬರುವುದಕ್ಕಿಂತ, ಸ್ವಭಾವ ನೋಡಿ ಬರುವವರು ನಿಜವಾದ ಹಿತೈಷಿಗಳು.
 • ಕತ್ತಲೆಯಿಲ್ಲದೆ ದೀಪದ ಮಹತ್ವ ತಿಳಿಯಲಾರದು.. ದುಃಖದ ಅನುಭವವಿಲ್ಲದೆ ಸುಖದ ಮಹತ್ವ ತಿಳಿಯಲಾರದು.
 • ಸೈಕಲ್ ತುಳಿದು ಕಾಲು ನೋವಾಗಿ ಬೈಕ್ ಬಂತು ಬೈಕ್ ಓಡಿಸಿ ಬೆನ್ನು ನೋವಾಗಿ ಕಾರು ಬಂತು ಕಾರು ಚಾಲನೆ ರೂಢಿಯಾಗಿ ಹೊಟ್ಟೆ ಬಂತು ಹೊಟ್ಟೆ ಇಳಿಸಲು ಜಿಮ್ ಸೇರಿ ಸೈಕಲ್ ತುಳಿವ ಕಾಲ " ಮತ್ತೆ " ಬಂತು ಇದೇ  - Recycling ??
 • ಮೀನು ಇಡೀ ಸಮುದ್ರವನ್ನು ತನ್ನದು ಎಂದು ಭಾವಿಸಿ ಜೀವಿಸುವಂತೆ, ನೀನು ಕೂಡಾ ಇಡೀ ಜಗತ್ತನ್ನು ನಿನ್ನ ದೇಶ ಎಂದು ಭಾವಿಸಿ ಜೀವಿಸು.
 • ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.
 • ಜೀವನದಲ್ಲಿ ಹಣದ ಕೊರತೆ ಇದ್ದರೂ ಗುಣದ ಕೊರತೆ ಇರಬಾರದು ಏಕೆಂದರೆ ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಗುಣವನ್ನು ಕೇಳಿ ಪಡೆಯಲು ಸಾಧ್ಯವಿಲ್ಲ.
 • ಎಲ್ಲಿಯವರೆಗೆ ನಮಗೆ ನಾವು ಪ್ರಾಮಾಣಿಕರಾಗಿರುತ್ತೇವೆಯೋ ಅಲ್ಲಿಯವರೆಗೂ ಖಂಡಿತವಾಗಿ, ನಾವು ಸಂತೋಷದಿಂದಿರುತ್ತೇವೆ....
 • ನಿಮ್ಮ ಮನಸ್ಸು ಮತ್ತು ಹೃದಯ ಸರಿಯಾದ ದಿಕ್ಕಿನಲ್ಲಿದ್ದರೆ ಬದುಕು ಎತ್ತ ಹೋಗುತ್ತದೆ ಎಂದು  ಚಿಂತಿಸಬೇಕಿಲ್ಲ.
 • ವಂಚಕರಿಗೆ ಕಿರೀಟವಾಗುವುಕ್ಕಿಂತ ಉತ್ತಮರಿಗೆ ಪಾದುಕೆಯಾಗುವುದು ಶ್ರೇಷ್ಠ...! ಕಾಲೆಳೆವವರ ನಾಯಕನಾಗುವುದಕ್ಕಿಂತ ಕೈಹಿಡಿವವರ ಸೇವಕನಾಗುವುದು ಉತ್ಕೃಷ್ಟ..!
 • ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ, ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ. ಏಕೆಂದರೆ ಸಮಯ ಎಂದೂ ಭೇದ ತೋರುವುದಿಲ್ಲ.
 • ಚಿಂತೆಗೂ, ಚಿತೆಗೊ ಇರುವ ವ್ಯತ್ಯಾಸ ಒಂದು "o" ಮಾತ್ರ... ಚಿತೆ ಸತ್ತ ದೇಹವನ್ನು ಸುಡುತ್ತದೆ, ಚಿಂತೆ ಬದುಕಿರುವ ದೇಹವನ್ನೇ ಸುಡುತ್ತದೆ.!!
 • ಸಹನೆ ನಿನ್ನದಾದರೆ ಸಕಲ ನಿನ್ನದೇ ವಿನಯ ನಿನ್ನದಾದರೆ ವಿಜಯ ನಿನ್ನದೇ.
 • ಕತ್ತಲೆ ಆವರಿಸಿಕೊಳ್ಳದೆ ನಕ್ಷತ್ರಗಳು ಮಿನುಗುವುದಿಲ್ಲ ಹಾಗೆಯೇ ಕಷ್ಟಗಳು ಬಾರದೆ ವ್ಯಕ್ತಿಯ ಸಾಮರ್ಥ್ಯ ಅನಾವರಣಗೊಳ್ಳಲು ಸಾಧ್ಯವಿಲ್ಲ.
 • ನಡೆದಷ್ಟು ದಾರಿ ಇದೆ ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.
 • ಬದುಕುವ ಆಸೆ ಇದ್ದರೆ ನಿನ್ನ ಶತ್ರುಗಳ ಕಣ್ಣೆದುರಲ್ಲೇ ಬದುಕು ಅವರು ನಿನ್ನ ಮುಂದೆ ಸುಳಿದಾಗಲೆಲ್ಲ ನಿನ್ನಲ್ಲಿ ಬದುಕುವ ಛಲ ಎಚ್ಚೆತ್ತುಕೊಳ್ಳುತ್ತದೆ.
 • ನಿಮ್ಮ ನಗು ಜಗತ್ತನ್ನು ಬದಲಿಸಲಿ. ಆದರೆ ನಿಮ್ಮ ನಗುವನ್ನು ಬದಲಿಸಲು ಜಗತ್ತಿಗೆ ಅವಕಾಶ ಕೊಡಬೇಡಿ.
 • "ಸಮಯಕ್ಕೆ ರಜೆ ಇಲ್ಲ  ಸ್ವಪ್ನಕ್ಕೆ  ಅಂತಿಮ ತಾರೀಖು ಇಲ್ಲ ಜೀವನದಲ್ಲಿ ತಾತ್ಕಾಲಿಕ ವಿರಾಮ ಕೀಲಿ ಇಲ್ಲ ...ಜೀವಿಸಿ....ಪ್ರೀತಿಸಿ... ಜೀವನದಲ್ಲಿನ ಪ್ರತೀ ಕ್ಷಣ ಅನುಭವಿಸಿ ಆನಂದಿಸಿ "
 • ತಾಯಿ ಇರುವವರೆಗೂ ಹಸಿವು ಗೊತ್ತಾಗಲ್ಲ. ತಂದೆ ಇರುವವರೆಗೂ ಜವಾಬ್ದಾರಿ ಗೊತ್ತಾಗಲ್ಲ.
 • ಇಲ್ಲಿ ಎಲ್ಲರೂ ಹುಟ್ಟಿದ್ದು ಅಳುವಿನಿಂದ ನಗುವಿಗಾಗಿ ಜೀವನಪರ್ಯಂತ ಶ್ರಮಪಡಲೇ ಬೇಕು.
 • ನಿಮಗೆ ಶತ್ರುಗಳು ಹುಟ್ಟಬೇಕೆಂದರೆ  ನೀವು ಅನ್ಯಾಯ ಮಾಡಬೇಕೆಂದಿಲ್ಲ, ಕೆಲವೊಮ್ಮೆ ಜೀವನದಲ್ಲಿ ನೀವು ಸಾಧಿಸುವ ಯಶಸ್ಸುಗಳೇ ನಿಮಗೆ ಶತ್ರುಗಳನ್ನು ಸೃಷ್ಟಿ ಮಾಡುತ್ತವೆ.
 • ಬೈಯ್ಯೋರು ಬದುಕೋಕೆ ಹೇಳಿದರು...ಹೋಗಳೋರು ಹಾಳಾಗೋಕೆ ಹೇಳಿದರು... ಬೈಯೋರು ಬಾಗಿಲೊಳಗಿರಬೇಕು, ಹೋಗಳೋರು ಬಾಗಿಲಾಚೆ ಇರಬೇಕು.
 • ಶ್ರೀಮಂತರ ಜೊತೆ ಸ್ನೇಹ ಮಾಡಿ ತಪ್ಪೇನಿಲ್ಲ, ಆದರೆ ಬಡವರ ಜೊತೆಗೆ ಪ್ರೀತಿಯಿಂದ ಮಾತನಾಡಿ ಏಕೆಂದರೆ ಸತ್ತ ಮೇಲೆ ಹೆಗಲು ಕೊಡುವವರು ಅವರೇ, ಶ್ರೀಮಂತರು ನೇರವಾಗಿ ಕಾರಿನಲ್ಲಿ ಸ್ಮಶಾನಕ್ಕೆ ಬರುತ್ತಾರೆ ಅಷ್ಟೇ"
 • ದಾನ ಧರ್ಮಕ್ಕೇ ಕಣ್ಣಿಲ್ಲ ನ್ಯಾಯ ನೀತಿಗೆ ಸಾವಿಲ್ಲ..., ಜೀವ ಚಿಕ್ಕದು ಜೀವನ ದೊಡ್ಡದು..., ಸತ್ತವನಿಗೆ ಒಂದು ದಾರಿ, ಸಾಧಿಸಿದವನಿಗೆ ಸಾವಿರ ದಾರಿ.
 • ಹಣತೆ ಮಣ್ಣಿನದಾಗಿರಲಿ, ಬಂಗಾರದ್ದಾಗಿರಲಿ ಅದು ಮುಖ್ಯವಲ್ಲ. ಕತ್ತಲಾದಾಗ ಅದು ಎಷ್ಟು ಬೆಳಗುತ್ತದೆ ಎಂಬುದು ಮುಖ್ಯ .ಹಾಗೆಯೇ ಗೆಳೆಯ ಬಡವನಾಗಿರಲಿ ಶ್ರೀಮಂತನಾಗಿರಲಿ ಅದು ಮುಖ್ಯವಲ್ಲ, ಕಷ್ಟದ ಸಮಯದಲ್ಲಿ ಅವರು ನಮಗೆಷ್ಟು ಜೊತೆಯಾಗುತ್ತಾರೆ ಎಂಬುದು ಮುಖ್ಯ
 • ಗಡಿಯಾರವನ್ನು ನೋಡಿ ಕೆಲಸ ಮಾಡುವವರು ಕೊನೆಯವರೆಗೂ ಕಾರ್ಮಿಕರಾಗಿಯೇ ಉಳಿಯುತ್ತಾರೆ. ಗಡಿಯಾರವನ್ನು ನೋಡದೆ ದುಡಿಯುವವರು ಮಾಲಿಕರಾಗಿ ಬೆಳೆಯುತ್ತಾರೆ.

ವಾಟ್ಸಾಪ್ ನಿಂದ ಸಂಗ್ರಹಿತ