ಸಂದರ್ಶನ ಮತ್ತು ಅದರ ರೀತಿ

Submitted by shreekant.mishrikoti on Wed, 09/16/2020 - 22:33

 ಗಿರಿಧರ ಕಜೆ ಅವರ ಸಂದರ್ಶನವು ಚಂದನ ದೂರದರ್ಶನದಲ್ಲಿ ಬರುತ್ತಿತ್ತು. 

ಆರೋಗ್ಯ ಎಂದರೇನು ? ಪ್ರಸನ್ನ ಆತ್ಮ, ಮನ,  ಇಂದ್ರಿಯ ಅಂತೆ. ಕೇವಲ ರೋಗದ ಇಲ್ಲದಿರುವಿಕೆ ಅಲ್ಲ, ಜತೆಗೆ ಆತ್ಮ, ಮನಸ್ಸು ಮತ್ತು ಇಂದ್ರಿಯಗಳು ಪ್ರಸನ್ನವಾಗಿರಬೇಕಂತೆ. 

ಆರೋಗ್ಯ - ಆರೂ ಇಂದ್ರಿಯಗಳು ಯೋಗ್ಯ ಇರಬೇಕಂತೆ. 

ಐದು ಇಂದ್ರಿಯ ಗೊತ್ತು. ಆರನೆಯದು ಏನು? ಕೇಳುವಾಗ ತಪ್ಪಿಸಿಕೊಂಡೆ. 

ಸಂದರ್ಶನಗಳನ್ನು ಚರ್ಚೆಗಳನ್ನು ದೂರದರ್ಶನ, ರೇಡಿಯೋದಲ್ಲಿ ನೋಡುವಾಗ ಕೇಳುವಾಗ ಅನೇಕ ವಿಷಯಗಳನ್ನು ಗಮನಿಸಬಹುದು. 

ಸಂದರ್ಶನ ಕಲೆ: ಸಂದರ್ಶಕರು ಸರಿಯಾದ ಪ್ರಶ್ನೆಗಳನ್ನು ಕೇಳಬೇಕು. ಸಂದರ್ಶಿತರ (ಯಾರನ್ನು ಸಂದರ್ಶನ ಮಾಡುತ್ತಿದ್ದಾರೆಯೋ ಅವರ ) ಮಾತಿಗೆ ಹೂಂಗುಡುತ್ತಿರಬೇಕು. ಅಗತ್ಯವಿದ್ದಲ್ಲಿ ವಿವರಣೆ ಸೇರಿಸಬೇಕು , ಅಸ್ಪಷ್ಟವಿದ್ದದ್ದನ್ನು ಕೇಳುಗರ ನೋಡುಗರನ್ನು ಗಮನದಲ್ಲಿಟ್ಟುಕೊಂಡು ಸ್ಪಷ್ಟಪಡಿಸಿಕೊಳ್ಳಬೇಕು. ಇಂಗ್ಲೀಷ್ ಅಥವಾ ಪರಭಾಷೆಯ ಶಬ್ದಗಳನ್ನು ಆ ವ್ಯಕ್ತಿ ಬಳಸಿದಾಗ ಅದನ್ನು ಕನ್ನಡದಲ್ಲಿ ಮತ್ತೆ ಹೇಳಬೇಕು. 

 

ಸಂದರ್ಶಿತ (ಯಾರ ಸಂದರ್ಶನವೋ ಅವರು ) ರ ಸಾಧನೆ / ವಿಶೇಷಗಳನ್ನು ತಿಳಿದಿರಬೇಕು.  

ಅಂದರೆ ಸರಿಯಾದ ಪ್ರಶ್ನೆಗಳನ್ನು ಕೇಳಿ ಕಾರ್ಯಕ್ರಮವನ್ನು ಉಪಯುಕ್ತಗೊಳಿಸಬಹುದು. 

ಮತ್ತು ಸರಿಯಾದ ಶಬ್ದಗಳ ಬಳಕೆಗಳನ್ನು ಗಮನದಲ್ಲಿಡಬೇಕು.

(ಸರಿಯಾದ ಶಬ್ದಗಳ ಕುರಿತು ನಾಳೆ ಒಂದು ಬರಹವನ್ನು ಇದಿರು ನೋಡಿ.)

 

Rating
Average: 4 (2 votes)