ಗೀತಾಮೃತ

ಗೀತಾಮೃತ

ಯ ಏನಂ ವೇತ್ತಿ ಹಂತಾರಂ ಯಶ್ಚೈನಂ ಮನ್ಯತೇ ಹತಮ್/

ಉಭೌ ತೌ ನ ವಿಜಾನಿಂತೋ ನಾಯಂ ಹಂತಿ ನ ಹನ್ಯತೇ//೧೯//

     ಯಾರು ಈ ಆತ್ಮವನ್ನು ಕೊಲ್ಲುವವನೆಂದು ತಿಳಿಯುತ್ತಾನೋ , ಹಾಗೂ ಯಾರು ಇವನು ಸತ್ತವನೆಂದು ತಿಳಿಯುತ್ತಾನೋ ಅವರಿಬ್ಬರೂ ತಿಳಿದವರಲ್ಲ , ಏಕೆಂದರೆ ಈ ಆತ್ಮನು ವಾಸ್ತವವಾಗಿ ಯಾರನ್ನೂ  ಕೊಲ್ಲುವುದೂ ಇಲ್ಲ ಮತ್ತು ಯಾರಿಂದಲೂ ಕೊಲ್ಲಲ್ಪಡುವುದೂ ಇಲ್ಲ.

     ನ ಜಾಯತೇ ಮ್ರಿಯತೇ ವಾ ಕದಾಚಿತ್

ನಾಯಂ ಭೂತ್ವಾ ಭವಿತಾ ವಾ ನ ಭೂಯ:/

ಅಜೋ ನಿತ್ಯ: ಶಾಶ್ವತೋಯಂ ಪುರಾಣೋ

ನ ಹನ್ಯತೇ ಹನ್ಯಮಾನೇ ಶರೀರೇ//೨೦//

      ಈ ಆತ್ಮನು ಯಾವುದೇ ಕಾಲದಲ್ಲಿಯೂ ಹುಟ್ಟುವುದಿಲ್ಲ,ಸಾಯುವುದೂ ಇಲ್ಲ ಹಾಗೂ ಉತ್ಪತ್ತಿಯಾಗಿ ಮತ್ತೆ ಇರುತ್ತಾನೆಂಬುದೂ ಇಲ್ಲ.ಏಕೆಂದರೆ ಇವನು ಜನ್ಮರಹಿತನೂ  ನಿತ್ಯನೂ ,ಸನಾತನನೂ ಮತ್ತು ಪುರಾತನನೂ  ಆಗಿದ್ದಾನೆ , ಶರೀರವು ಕೊಲ್ಲಲ್ಪಟ್ಟರೂ ಕೂಡ ಇವನು ಕೊಲ್ಲಲ್ಪಡುವುದಿಲ್ಲ.

****

ವೇದಾವಿನಾಶಿನಂ ನಿತ್ಯಂ ಯ ಏನ ಮಜಮವ್ಯಯಮ್/

ಕಥಂ ಸ ಪುರುಷ: ಪಾರ್ಥ ಕಂ ಘಾತಯತಿ ಹಂತಿಕಮ್//೨೧//

 ಹೇ ಪೃಥಾಪುತ್ರನಾದ ಅರ್ಜುನನೇ! ಯಾವ ಪುರುಷನು ಈ ಆತ್ಮವನ್ನು ನಾಶರಹಿತನೂ , ನಿತ್ಯನೂ ಅಜನ್ಮನೂ ಮತ್ತು ಅವ್ಯಯನೆಂದೂ ತಿಳಿಯುತ್ತಾನೋ, ಆ ಪುರುಷನು ಯಾರನ್ನು ಹೇಗೆ ಕೊಲ್ಲಿಸುತ್ತಾನೆ ಮತ್ತು ಯಾರನ್ನು ಕೊಲ್ಲುತ್ತಾನೆ?

      ವಾಸಾಂಸಿ ಜೀರ್ಣಾನಿ ಯಥಾ ವಿಹಾಯ

ನವಾನಿ ಗೃಹ್ಣಾತಿ ನರೋಪರಾಣಿ/ 

ತಥಾ ಶರೀರಾಣಿ ವಿಹಾಯ ಜೀರ್ಣಾನ್ಯನ್ಯಾನಿ ಸಂಯಾತಿ ನವಾನಿ ದೇಹೀ//೨೨//

   ಹೇಗೆ ಮನುಷ್ಯ ನು ಹಳೆಯದಾದ ವಸ್ತ್ರಗಳನ್ನು ತ್ಯಾಗ ಮಾಡಿ ಬೇರೆಯ,ಹೊಸದಾದ ವಸ್ತ್ರಗಳನ್ನು ಧರಿಸುತ್ತಾನೋ, ಹಾಗೆಯೇ ಜೀವಾತ್ಮನು ಹಳೆಯದಾದ ಶರೀರಗಳನ್ನು ತ್ಯಾಗಮಾಡಿ ಬೇರೆಯಾದ ಹೊಸ ಶರೀರಗಳನ್ನು ಪಡೆಯುತ್ತಾನೆ.

-ವಿಜಯಾ ಶೆಟ್ಟಿ ಸಾಲೆತ್ತೂರು (ಸಂಗ್ರಹ)