ಕವನಗಳ ಲೋಕದಲ್ಲಿ...

ಕವನಗಳ ಲೋಕದಲ್ಲಿ...

ಕವನ

ಮಕಮಲ್ಲಿನ ಹಿತ್ತಲು 

ಶಬ್ಧಗಳಿಗಂಜಿ ಚೌಕಟ್ಟಿನೊಳಗೆ

ಪದಕಂಜಿತೆರೆಯೊಳಗೆ

ಮರೆಯಾದೆಯೇನೆ

 ನನ್ನ ಹುಡುಗಿ...

 

ಅಮೂರ್ತದ ನೆರಳೊಳಗೆ 

ನೀನು ನಿಂತಿರಬೇಡ

ಮಕಮಲ್ಲಿನ ಹಿತ್ತಲಲಿ

ಸಮದೂರ ಸರಿಸಿ ಬಿಡು

 

ಮನಸ್ವೀ ನಡೆದು ಬಾನಲ್ಲೆ

ಸಾಗರದ ನೆಲೆ ಪ್ರತಿ ಹನಿಯು

ನಿನ್ನ ಸೆಲೆ ನನ್ನೊಳಗೆ

 ಮಲ್ಲಿಗೆಯು

 

ಕಿಟಕಿ ಜಾಲರಿಯಲ್ಲೆ ಎಲ್ಲೆ

ಹರಿದಿಹೆ ಮೊಲ್ಲೆ

ನಾನು ಮರವಾಗಿ ನೀ

 ಜಾಲರಿಯ ಲತೆಯಾಗಿ ಬಾ

 

ಕಣ್ಣ ಕಾಡಿಗೆ ಹರಡಿ 

ಬಣ್ಣಗಳ ಮೊತ್ತವನೆ

ಕಾಣಿಸದೆ ಹೋದೀತೆ

ಹೇಳು ಗೆಳತಿ..

 

ಮಳೆಗೆ ಮಳೆ ಇಳೆಗೆ ಇಳೆ

ನಿನಗೆ ನೀ ಸಾಟಿ ಎಳೆ ಚಿಗರೆ

ಗೋಡೆಮರೆಯೊಳಗೆ 

ಪಿಸು ಮಾತ ಆಲಿಸಿದೆಯಾ

 

ಕೇಳಿಸದಿರಲೂ ಬಹುದು

ನಿನ್ನ ತಲೆ ಮೇಲೆ ಹರಡಿದ್ದ

ಮೋಡಗಳು ಅನತಿ ದೂರಕೆ

ಸರಿದು ಸಾಗಿರಲು ಸಾಕು..

 

ಎಲ್ಲ ಅರಿತೂ 

ಅರಿಯದಂತಿಹೆ

ಮುಗ್ಧ ನಗುವೊಳು 

ಕೊಲುತಿರುವೆ..

 

ಆಷಾಢದ ಗಾಳಿ

ಪುನರ್ವಸುವಿನ

 ಧಾರೆಯೋಪಾದಿಯೊಳು

ಬೀಸಿ ರಭಸದೊಳು ಬಾ..

 

ಇಲ್ಲೆ ಇರುವುದ ಕಾಣು

 ಸಾರೋಟಿನೊಳು ಎದೆಬಾನು

ಕಾದುಕುಳಿತಿಹೆ ಬೇಗ

ಮನೆಸೇರಬೇಕು..

 -ವಿಜಯಾ ಶೆಟ್ಟಿ ಸಾಲೆತ್ತೂರು

*******

ಬದುಕು ಬಾಡದಿರಲಿ

ಬದುಕು ಬಾಡದೆ ಇರಲಿ

ಬದುಕಿನಾಳದಿ ಬಳಲಿ

ಬದುಕಿನೊಳಗಿನ ಬದುಕು ಸುಖವಾಗಲಿ

ಬದುಕು ಕಾವ್ಯದ ಸವಿಲಿ

ಬದುಕಾಗಿ ಬೆಳಗುತಲಿ

ಬದುಕೆನುವ ಭಾಗ್ಯವು ಚೆಲುವಾಗಲಿ

 

ಕನಸುಗಳ ಕನಸೊಳಗೆ

ನನಸು ಮೂಡುತ ಸಲುಗೆ

ಮನಸಿನಲಿ ಕಾಣುತಲಿ ಪ್ರೀತಿ ಒಸಗೆ

ತನುವೆನುವ ಭಾವನೆಗೆ

ಕೊನರುತಿಹ ಕೆತ್ತನೆಗೆ

ಕನಲಿರದ ಪ್ರೇಮದೊಳು ತೃಪ್ತಿ ಬೆಸುಗೆ

 

ಸಂತಸದ ಹುಸಿ ನಗೆಗೆ

ಸಂತಸವು ಬಹು ಬಗೆಗೆ

ಸಂತತದ ಉಡುಗೊರೆಯ ಸಪ್ನ ನಡಿಗೆ

ಸಂತಾನ ಪಡೆಯುವವಗೆ

ಸಂತೋಷ ಹಲವು ಬಗೆ

ಸಂತತಿಯು ಒಡಲೊಳಗೆ ಕೂತು ಧರೆಗೆ 

 

-ಹಾ ಮ ಸತೀಶ

 

ಚಿತ್ರ್