ಶಂಕರಾನಂದ ಹೆಬ್ಬಾಳರ ಗಝಲ್
ಕವನ
ಹೃದಯವ ಪ್ರೀತಿಸಿದವನ ಹೆಸರನ್ನು
ಮರೆವೆಯಾ ಗೆಳತಿ|
ಮನಸಿನಲ್ಲಿ ಪ್ರೇಮದ ಭಾವವನು
ತೊರೆವೆಯಾ ಗೆಳತಿ||
ಆಂತರ್ಯದ ನಾದವನು ವೀಣೆಯಲಿ
ನುಡಿಸದಿರು ನೀನು|
ಕಂಗಳಲಿ ಅಂತರಾಳದ ದುಃಖವನು
ಹೇಳುವೆಯಾ ಗೆಳತಿ||
ಚಂದದಲಿ ನಲ್ನುಡಿಯ ಅರುಹುವೆ
ಮೂಕಳಾಗಿ ನೋಡು|
ಮಂದಸ್ಮಿತ ಕನ್ನಿಕೆಯೆ ಶಾಂತಳಾಗಿ
ಕೇಳುವೆಯಾ ಗೆಳತಿ||
ಮಾನನಿಯಾಗಿ ಒಲವನ್ನು ಒಪ್ಪುತ
ಅಪ್ಪುತ ಸನಿಹಬಾರೆ|
ಕಾನನದ ಕೋಗಿಲೆಯಾಗಿ ಕುಹೂಕುಹೂ
ಹಾಡುವೆಯಾ ಗೆಳತಿ||
ಚಂದಿರನ ಕಳೆಯನ್ನು ಧರಿಸುತ್ತಲಿ
ಹೊಳೆವೆ ಗಗನದಲಿ|
ಅಭಿನವನ ಕಾವ್ಯವನು ಒದುತ್ತಲಿ
ನೋಡುವೆಯಾ ಗೆಳತಿ||
-ಶಂಕರಾನಂದ ಹೆಬ್ಬಾಳ
ಚಿತ್ರ್
