ನೀಲಕಂಠನ ಮಹಿಮೆ

ನೀಲಕಂಠನ ಮಹಿಮೆ

ಕವನ

ಕಾರ್ಕೋಟಕ ವಿಷವನ್ನು ನುಂಗಿ ಕಷ್ಟದಲ್ಲೂ

ನಗುತಿಹನು ಪರಮಾತ್ಮ||

ಹಿಮದಲ್ಲಿ ಹುಲಿಯ ಚರ್ಮವನು ಧರಿಸಿ

ಕುಳಿತಿಹನು ಪರಮಾತ್ಮ||

 

ಮುದಿಯೆತ್ತನು ವಾಹನ ಮಾಡಿಕೊಂಡು

ಇರುವವನು ಗಂಗಾಧರ|

ಬ್ರಹ್ಮ ಕಪಾಲವ ಹಿಡಿದು ಭಿಕ್ಷೆಯ

ಬೇಡುತಿಹನು ಪರಮಾತ್ಮ||

 

ಮೂಲೋಕವ ಪೊರೆದು ತಾರಕಾಸುರನ

ಕೊಂದವನು ನೀಲಕಂಠ|

ಜಗದ ಆಗುಹೋಗುಗಳ ಅಹರ್ನಿಶಿ

ನೋಡುತಿಹನು ಪರಮಾತ್ಮ||

 

ಫಾಲದಿ ನೇತ್ರದಿ ಕಾಮನನ್ನು ಸುಟ್ಟಿರುವ

ಉರಿಗಣ್ಣ ನಟಭಯಂಕರ|

ದುಷ್ಟರ ಸಂಹರಿಸಿ ರುಂಡಮಾಲೆ ಕೊರಳಲ್ಲಿ

ಹಾಕುತಿಹನು ಪರಮಾತ್ಮ||

 

ಕಂಕರಿಯ ವಾದ್ಯದ ನಾದ ಮೊಳಗುತಿದೆ

ಅಭಿನವನ ಕಾವ್ಯದಲಿ||

ಆದಿಅಂತ್ಯಗಳ ತಿಳಿದು ಮನುಕುಲೋದ್ದಾರ

ಮಾಡುತಿಹನು ಪರಮಾತ್ಮ||

 

*ಶಂಕರಾನಂದ ಹೆಬ್ಬಾಳ* 

 

ಚಿತ್ರ್