ಶ್ರೀ ತುಳಸಿ ನಮೋಸ್ತುತೇ
ಧ್ಯಾಯೇಚ್ಛ ತುಳಸೀಂ ದೇವೀಂ ಶ್ಯಾಮಾಂ ಕಮಲಲೋಚನಾಂ/
ಪ್ರಸನ್ನಾಂ ಪದ್ಮ ಕಲ್ಹಾರ ವರಾಭಯ ಚತುರ್ಭುಜಾಂ//ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಷಿತಾಂ/
ಧವಲಾಂಕುಶ ಸಂಯುಕ್ತಾಂ ನಿಷೇದುಷೀಂ//
ಶ್ರೀ ತುಳಸಿ ಪ್ರಣಾಮ ಸ್ತೋತ್ರ
ವೃಂದಾಯೈ ತುಳಸಿ ದೇವ್ಯೈ
ಪ್ರಿಯಾಯೈ ಕೇಶವಸ್ಯಚ
ಕೃಷ್ಣ ಭಕ್ತಿ ಪರದೆ ದೇವಿ
ಸತ್ಯವತ್ಯೈ ನಮೋ ನಮಃ
ಶ್ರೀ ತುಳಸಿಯ ಅಷ್ಟ ನಾಮಗಳು
ವೃಂದಾವನಿ, ವೃಂದ, ವಿಶ್ವ ಪೂಜಿತಾ, ಪುಷ್ಪ ಸಾರ, ನಂದಿನಿ, ಕೃಷ್ಣ ಜೀವನಿ, ವಿಶ್ವ ಪಾವನಿ, ತುಳಸಿ.
ಈ *ಅಷ್ಟ ನಾಮಗಳಿಂದ ಶ್ರೀ ತುಳಸೀ ದೇವಿಯನ್ನು ಪೂಜಿಸಿದರೆ*ಅಶ್ವಮೇಧಯಾಗದ ಪುಣ್ಯ ಫಲ ಬರುತ್ತದೆ ಎಂದು ಹೇಳುತ್ತಾರೆ. ದೇವಿಯ ಜನ್ಮ ದಿನ ದಂದು ಪೂಜಿಸಿದರೆ ಸಕಲ ಪಾಪಗಳು ಪರಿಹಾರ ವಾಗುತ್ತವೆ.ಎಲ್ಲಾ ಬಂಧನಗಳಿಂದ ಮುಕ್ತಿ ದೊರಕುತ್ತದೆ. ವೃಂದಾವನದ ಸಾನಿಧ್ಯ ಪ್ರಾಪ್ತವಾಗಿ,ಶ್ರೀ ಕೃಷ್ಣನ ಕೃಪೆಗೆ ಪಾತ್ರರಾಗುತ್ತೇವೆ.
ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವ ದೇವತಾಃ/
ಯದಗ್ರೇ ಸರ್ವ ವೇದಾಶ್ಚ ತುಳಸೀ ತ್ವಾಂ ನಮಾಮ್ಯಹಮ್//
ತುಳಸಿಗಿಡದ ಬೇರಿನಲ್ಲಿ ಸಕಲ ಪುಣ್ಯ ತೀರ್ಥಗಳೂ, ಮಧ್ಯ ಭಾಗದಲ್ಲಿ ಮುಕ್ಕೋಟಿ ದೇವತೆಗಳೂ, ಮೇಲ್ಭಾಗದಲ್ಲಿ ಸಕಲ ವೇದಗಳು ಅಡಕವಾಗಿರುವ ,ಮಹಾಮಹಿಮಾನ್ವಿತಳಾದ ತುಳಸೀದೇವಿಗೆ ನಮಸ್ಕರಿಸುತ್ತೇನೆ.
ಪ್ರಸೀದ ತುಳಸೀದೇವಿ ಪ್ರಸೀದ ಹರಿವಲ್ಲಭೆ/
ಕ್ಷೀರೋದ ಮಥನೋದ್ಭೂತೇ ತುಳಸಿ ತ್ವಾಂ ನಮಾಮ್ಯಹಮ್//
ಹೇ ಮಾತೇ,ಶ್ರೀ ಹರಿಯ ಮನೋ ವಲ್ಲಭೆಯೇ,ಶ್ರೀ ಹರಿಗೆ ಪ್ರಿಯಳಾದವಳೇ,ಸಮುದ್ರಮಥನಕಾಲದಲ್ಲಿ ಉದ್ಭವಿಸಿದವಳೇ,ನಿನಗೆ ನಮಸ್ಕರಿಸುತ್ತೇನೆ.
*ಶ್ರೀ ತುಳಸ್ಯಷ್ಟೋತ್ತರ ಶತನಾಮಾವಳಿ*ಯನ್ನು ಓದುವುದರಿಂದ ನಮಗೆ ಶಾಂತಿ,ನೆಮ್ಮದಿ ಸಿಗುತ್ತದೆ.
ಸಂಗ್ರಹ:ರತ್ನಾ ಭಟ್ ತಲಂಜೇರಿ
ಆಧಾರ:ಪದ್ಮ ಪುರಾಣ
ಚಿತ್ರ ಕೃಪೆ : ಇಂಟರ್ನೆಟ್