ಇನಿಯನ ಮೌನ

ನನ್ನ ಒಲವಿನ ಇನಿಯನೆ 
ನಿನ್ನ ಸಭ್ಯತೆ, ಸದ್ಗುಣಗಳ 
ಎಷ್ಟು ವರ್ಣಿಸಿದರೂ ಸಾಲದು 
ನನ್ನ ಪದಗಳ ಅಕ್ಷರ ಮಾಲೆ. 😊

ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ 
ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ 
ನೂರಾರು ಸ್ನೇಹಿತರ ನಡುವೆ 
ನೀನೆ ಅತಿಯಾಗಿ ಆಕರ್ಷಿಸಿದೆ. 😍

ನಿನ್ನ  ಹೃದಯದ ಸರೋವರದ ಜೊತೆ 
ನನ್ನ ಭಾವನೆಗಳ ಚಿನುಮೆ  ಹರಿಸಲು  ಬಂದಾಗ 
ಶಾಂತಸಾಗರದಷ್ಟೇ ನಿಮ್ಮ ಮನ ಮೌನವಾಗಿರುದೇಕೆ !?  😌

    

ಮಜಾ ಇರೋದು ಕಾಲೆಳೆಯುವುದರಲ್ಲಲ್ಲ, ಕೈ ಹಿಡಿದು ನಡೆಸುವುದರಲ್ಲಿ...

ನನ್ನ ಲೇಖನವನ್ನು ಒಂದು ಸಣ್ಣ ಕಥೆಯ ಮೂಲಕವೇ ಆರಂಭಿಸಬೇಕೆಂದಿರುವೆ. ಏನಂತೀರಾ ಫ್ರೆಂಡ್ಸ್? ಸರಿ ಈಗ ಕಥೆ ಕೇಳಿ. ಹಲವಾರು ವರ್ಷಗಳ ಹಿಂದೆ ವಿದೇಶವೊಂದರಲ್ಲಿ ಪ್ರಪಂಚದಲ್ಲಿರುವ ಎಲ್ಲ ಅಪರೂಪದ ಜೀವಿಗಳ ಪ್ರದರ್ಶನ ನಡೆಯಿತಂತೆ. ಭೂಮಿಯ ಮೇಲೆ ಜೀವಿಸುವ, ಸಾಗರದ ತಳದಲ್ಲಿ ಬದುಕುವ ಹೀಗೆ ಸಾವಿರಾರು ಜೀವ ಜಂತುಗಳ ಪ್ರದರ್ಶನ ನಡೆಯಿತು. ಪ್ರತೀ ದಿನ ಹಲವಾರು ಮಂದಿ ಈ ಅಪರೂಪದ ಪ್ರದರ್ಶನಕ್ಕೆ ಭೇಟಿ ನೀಡಿ ತಾವು ಜೀವಮಾನದಲ್ಲಿ ನೋಡದ ಜೀವ ಜಂತುಗಳನ್ನು ವೀಕ್ಷಿಸಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅಲ್ಲೇ ಇರುತ್ತಿದ್ದ ಗೈಡ್ ಅಥವಾ ಮಾಹಿತಿದಾರನ ಬಳಿ ಕೇಳುತ್ತಿದ್ದರು. ಎಲ್ಲಾ ಪ್ರಾಣಿ-ಜೀವಿಗಳನ್ನು ಪಂಜರದಲ್ಲೋ, ಮುಚ್ಚಿದ ಗಾಜಿನ ಜಾಡಿಯಲ್ಲೋ ಅಥವಾ ರಟ್ಟಿನ ಪೆಟ್ಟಿಗೆಯಲ್ಲೋ ಇರಿಸಿದ್ದರು.

Image

ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ

 

ಒಂದು ಚಾಳಿನಲ್ಲಿ ಅನೇಕ ಸಂಸಾರಗಳಿವೆ. ಅವುಗಳಲ್ಲಿ ಒಂದರಲ್ಲಿ ವಾಸವಾಗಿರುವ ದಂಪತಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಒಂದು ಸಾಮಾಜಿಕ ಕಾರ್ಯಕ್ಕೆಂದು ವಂತಿಗೆ ಸಂಗ್ರಹಿಸಲು ಹೊರಟಾಗ ಇತರರು ನೆರವಾಗುವುದಿಲ್ಲ. ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇದ್ದರೂ ಕೂಡ   ಬಗೆಬಗೆಯ ಆಕ್ಷೇಪಗಳನ್ನು ಒಡ್ಡುತ್ತಾರೆ, ವಾದಗಳನ್ನು ಹೂಡುತ್ತಾರೆ.  ಆಗ ಈ ದಂಪತಿ ಒಂದು ಉಪಾಯ ಮಾಡುತ್ತಾರೆ; ಪರಿಚಯದ ಒಬ್ಬ ವ್ಯಕ್ತಿ ಇದ್ದಾನೆ - ನೋಡಲು ಒರಟಾಗಿ ಕ್ರೂರವಾಗಿ ಕಾಣುತ್ತಾನೆ. ಆತ ಒಳ್ಳೆಯವನೇ, ಸಭ್ಯಸ್ಥನೇ.  ಆತನಿಗೆ ಇವರೆಲ್ಲರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ, ಗೂಂಡಾ ತರಹ ಮಾತನಾಡಿ ಬೆದರಿಸಲು ಮತ್ತು ಹಣಕ್ಕೆ ಒತ್ತಾಯಿಸಲು ಒಪ್ಪಿಸುತ್ತಾರೆ, ಅದರಂತೆ ಅವನು ಮಾಡುತ್ತಾನೆ. ಈಗ ಅದೇ ಜನ ತೆಪ್ಪಗೆ ಹಣ ಕೊಡುತ್ತಾರೆ!

ಚಾಕಲೇಟ್ ಮೂಲಕ ಶುಭ ಕೋರೋಣ ಬನ್ನಿ!!

ನೀವು ನಿಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಬಯಸುತ್ತೀರಾ ಮತ್ತು ಅದು ವಿಭಿನ್ನ ರೀತಿಯಾಗಿದ್ದರೆ ಚೆನ್ನಎಂದು ಭಾವಿಸುತ್ತಿರಾ? ನೀವು ನಿಮ್ಮ ಹೊಸ ಸಂಸ್ಥೆಯ ಉದ್ಘಾಟನೆ ಮಾಡಲು ಯೋಜನೆ ಹಾಕಿ ಕೊಂಡಿರುತ್ತೀರಿ ಮತ್ತು ನಿಮ್ಮ ಅತಿಥಿಗಳನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸ ಬಯಸುತ್ತೀರಾ? ನೀವೊಂದು ಮಗುವಿನ ಹುಟ್ಟು ಹಬ್ಬಕ್ಕೆ ಹೋಗ ಬಯಸಿದ್ದೀರಿ ಆದರೆ ಅವರಿಗೆ ಕೊಡಲು ಅಪರೂಪದ ಉಡುಗೊರೆಯ ಬಗ್ಗೆ ಯೋಚನೆ ಮಾಡುತ್ತೀರಾ? ಮಹಿಳಾ ದಿನ, ಹೊಸ ವರ್ಷ, ಕ್ರಿಸ್‌ಮಸ್, ಪ್ರೇಮಿಗಳ ದಿನ, ರಕ್ಷಾ ಬಂಧನ ಹೀಗೆ ಹತ್ತು ಹಲವಾರು ಶುಭ ದಿನಗಳಂದು ನಿಮ್ಮ ಆತ್ಮೀಯರಿಗೆ ನಿಮ್ಮದೇ ಆದ ಮಾತುಗಳಲ್ಲಿ ಶುಭ ಕೋರಲು ಬಯಸಿದ್ದೀರಾ? ನೀವು ಬಯಸಿದ ಯೋಜನೆಯಂತೆಯೇ ನಿಮ್ಮ ಉಡುಗೊರೆ ಆಗಿರುತ್ತದೆ. 

Image

ಜಗತ್ತಿಗೆ ಶಾಂತಿಯ ಸಂದೇಶ ಸಾರಿದ ಬುದ್ಧ

"ಬುದ್ಧ, ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ" ಎಂದು ಆರಂಭವಾಗುವ ಕವನ ಕನ್ನಡದ ಪ್ರಸಿದ್ಧ ಕವನ. ಬುದ್ಧನ ಜನ್ಮ ದಿನವೇ ಬುದ್ಧ ಪೂರ್ಣಿಮೆ ಅಥವಾ ಬೈಸಾಕಿ (ಮೇ ೭). ಬೈಸಾಕಿಯಂದೇ ಬುದ್ಧನಿಗೆ ಜ್ನಾನೋದಯವಾಯಿತು ಮತ್ತು ಬೈಸಾಕಿಯಂದೇ ಆತ ನಿರ್ವಾಣ ಹೊಂದಿದ ಎಂದು ಪ್ರತೀತಿ.

ಕ್ರಿಪೂ ೬೨೩ರಲ್ಲಿ ಕಪಿಲವಸ್ತುವಿನ ರಾಜ ಶುದ್ಧೋದನನ ರಾಣಿ ಮಾಯಾದೇವಿ ಜನ್ಮವಿತ್ತ ಗಂಡುಮಗು ಸಿದ್ಧಾರ್ಥ. ಅದಾಗಿ ಏಳನೇ ದಿನಕ್ಕೆ ಮಾಯಾದೇವಿ ತೀರಿಕೊಂಡಳು. ಅನಂತರ ಸಿದ್ಧಾರ್ಥನನ್ನು ಸಲಹಿದಾಕೆ ಮಲತಾಯಿ ಗೌತಮಿ ದೇವಿ. ಆದ್ದರಿಂದ ಗೌತಮನೆಂಬ ಹೆಸರು ಬಂತು.

Image

ನಿಮ್ಮ ನಾಣ್ಯದ ಹುಟ್ಟೂರು ಯಾವುದು ಗೊತ್ತಾ?

ಇದೇನಪ್ಪಾ ಹೀಗೆ ಕೇಳ್ತೀರಾ ಅಂತ ಅಂದ್ಕೋತೀರಾ? ಹಾಗಾದ್ರೆ ಕೇಳಿ. ಈಗೀಗ ಭಾರತೀಯ ನಾಣ್ಯಗಳು ಅನೇಕ ಇತಿಹಾಸದ ಪುಟ ಸೇರಿವೆ. ಮೊದಲಾದರೆ ಆಣೆಗಳಿದ್ದವು. ನಂತರ ಪೈಸೆಗಳು, ರೂಪಾಯಿಗಳು ಬಂದವು. ಒಂದು ಪೈಸೆ ನಾಣ್ಯದಿಂದ ಹಿಡಿದು ಹತ್ತು ರೂಪಾಯಿ ನಾಣ್ಯಗಳವರೆಗೂ ವ್ಯವಹಾರದಲ್ಲಿ ಬಳಕೆಯಿತ್ತು. ಅಪರೂಪದ ಸಂದರ್ಭದಲ್ಲಿ ಭಾರತೀಯ ರಿಜರ್ವ್ ಬ್ಯಾಂಕ್ ೨೦, ೫೦, ೬೦, ೭೫, ೧೦೦, ೧೫೦ ...ಹೀಗೆ ಹತ್ತು ಹಲವಾರು ಸಂಗ್ರಹ ಪ್ರಿಯರಿಗೆ ಅನುಕೂಲವಾಗುವಂತಹ ಸಂದರ್ಭೋಚಿತ (ಗಣ್ಯರ ಜನ್ಮದಿನ, ಖ್ಯಾತ ಸಂಸ್ಥೆಯ ವಾರ್ಷಿಕೋತ್ಸವ ಹೀಗೆ..) ನಾಣ್ಯಗಳ ಬಿಡುಗಡೆಯೂ ನಡೆಯುತ್ತಿತ್ತು. ವರ್ಷಗಳು ಕಳೆದಂತೆ ನಾಣ್ಯಗಳು ನಗಣ್ಯವಾಗತೊಡಗಿದವು.

Image

ವಿಶ್ವಕವಿ ರವೀದ್ರನಾಥ ಟಾಗೋರ್

ಜಗತ್ತಿನ ಬಹುಪಾಲು ಜನಸಂಖ್ಯೆ ಹೊಂದಿರುವ ಏಷ್ಯಾ ಖಂಡದಲ್ಲಿ ಪ್ರಪ್ರಥಮವಾಗಿ ನೊಬೆಲ್ ಪ್ರಶಸ್ತಿಯಿಂದ ಪುರಸ್ಕೃತರಾದವರು ಎಂಬ ಹೆಗ್ಗಳಿಕೆ ವಿಶ್ವಕವಿ ರವೀಂದ್ರನಾಥ ಟಾಗೋರ್ ಅವರದು.

ಕೊಲ್ಕತಾದಲ್ಲಿ ೭ ಮೇ ೧೮೬೧ರಲ್ಲಿ ಜನಿಸಿದ ಟಾಗೋರರ ೧೫೯ನೇ ಜನ್ಮ ಜಯಂತಿ ಇವತ್ತು ನಮ್ಮ ದೇಶದಲ್ಲಿ ರವೀಂದ್ರ ಜಯಂತಿಯಾಗಿ ಆಚರಿಸಲ್ಪಡುತ್ತಿದೆ. ಪಶ್ಚಿಮ ಬಂಗಾಳದ ಜನರಿಗಂತೂ ಬೈಸಾಕಿಯ ಇಂದಿನ ದಿನ ಸಂಭ್ರಮದ ದಿನ.

Image

ಪುಕ್ಕಲು ಸಿಂಹ ಮತ್ತು ಜಾಣ ಆಡು

ಹಿಂದೊಮ್ಮೆ ಮುದಿ ಆಡೊಂದು ತನ್ನ ಹಿಂಡಿನಿಂದ ಬೇರೆಯಾಯಿತು. ಆಗಲೇ ಸಂಜೆ ದಾಟಿ ಕತ್ತಲಾಗುತ್ತಿತ್ತು. ತನ್ನ ಹಳ್ಳಿಗೆ ಹೇಗೆ ಹೋಗಿ ಸೇರುವುದೆಂದು ಆಡಿಗೆ ಚಿಂತೆಯಾಯಿತು.

ಆ ಕತ್ತಲಿನಲ್ಲಿ ನಡೆದು ತನ್ನ ಹಳ್ಳಿ ಸೇರಲು ಸಾಧ್ಯವಿಲ್ಲವೆಂದು ಮುದಿ ಆಡಿಗೆ ಅರ್ಥವಾಯಿತು. ಹಾಗಾಗಿ, ಅಲ್ಲೇ ಎಲ್ಲಾದರೂ ರಾತ್ರಿ ಕಳೆಯಲು ನಿರ್ಧರಿಸಿತು. ಅಲ್ಲಿ ಗುಡ್ಡದ ಬದಿಯಲ್ಲೊಂದು ಗವಿ ಕಂಡಿತು. ಅದರಲ್ಲಿ ರಾತ್ರಿ ಕಳೆಯಲು ನಿರ್ಧರಿಸಿದ ಮುದಿ ಆಡು ಗವಿಯೊಳಗೆ ಹೋಯಿತು. ಹಠಾತ್ತನೇ ಗವಿಯೊಳಗೆ ವಾಸ ಮಾಡುತ್ತಿದ್ದ ಭಯಾನಕ ಸಿಂಹದೊಂದಿಗೆ ಮುದಿ ಆಡು ಮುಖಾಮುಖಿಯಾಯಿತು.

ಮುದಿ ಆಡು ಈಗ ಓಡಿ ಹೋಗುವಂತಿರಲಿಲ್ಲ; ಸಿಂಹದೊಂದಿಗೆ ಕಾದಾಡಲೂ ಸಾಧ್ಯವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮುದಿ ಆಡಿಗೆ ಒಂದು ಉಪಾಯ ಹೊಳೆಯಿತು.

Image

ನಿಸ್ಸಾರ ಅಹಮದ್ದರಿಗೆ ಶ್ರದ್ಧಾಂಜಲಿ

ನಾವು ಶಾಲೆಯಲ್ಲಿ ಕನ್ನಡ ಕಲಿಯುವಾಗ ಓದಿದ ಕನ್ನಡ ಪದ್ಯಗಳನ್ನು  ಬಿಟ್ಟರೆ, ಇತರೆ ಕವಿಗಳು/ಕವನಗಳನ್ನು  ನಾನು ಬಲ್ಲವನಲ್ಲ. ಕಾರಣ ಇಷ್ಟೇ. ನನಗೆ ಕವನಗಳು/ಪದ್ಯಗಳು ಸುಲಭವಾಗಿ ಅರ್ಥವಾಗುವುದಿಲ್ಲ. ಮೇಲ್ನೋಟಕ್ಕೆ ಕಂಡದ್ದನ್ನು ಮಾತ್ರ ನಾನು ಓದಿ ತಿಳಿಯಬಲ್ಲೆ.

ಅನಂತದ ಸಿರಿಬೆಳಕಿನಲ್ಲಿ ಐಕ್ಯರಾದ ಕವಿ ನಿಸಾರ್ ಅಹಮದ್

“ಜೋಗದ ಸಿರಿಬೆಳಕಿನಲ್ಲಿ ….. ನಿತ್ಯೋತ್ಸವ ತಾಯಿ ನಿನಗೆ ನಿತ್ಯೋತ್ಸವ” - ೧೯೭೦ರ ದಶಕದಲ್ಲಿ, ನನ್ನ ತಲೆಮಾರಿನ ಯುವಕರಲ್ಲಿ ರೋಮಾಂಚನ ಮೂಡಿಸಿದ ಕವನ. ಈಗಲೂ ಕನ್ನಡ ನಾಡಿನ ಎಲ್ಲ ತಲೆಮಾರಿನವರಲ್ಲಿ ರೋಮಾಂಚನ ಚಿಮ್ಮಿಸುವ ಕವಿತೆ. ಅದನ್ನು ಬರೆದ ಕವಿ ಕೆ.ಎಸ್. ನಿಸಾರ್ ಅಹಮದ್ (೮೪) ಇಂದು ನಮ್ಮೊಂದಿಗಿಲ್ಲ. ನಿನ್ನೆ, ೩ ಮೇ ೨೦೨೦ರಂದು ನಮ್ಮನ್ನಗಲಿದರು. (ಜನನ: ೫ ಫೆಬ್ರವರಿ ೧೯೩೬, ದೇವನಹಳ್ಳಿ, ಬೆಂಗಳೂರು ಜಿಲ್ಲೆ)

ನಮ್ಮ “ಸಂಪದ"ದ "ಶ್ರಾವ್ಯ" ವಿಭಾಗದಲ್ಲಿ ಅವರ ಸಂದರ್ಶನ ಲಭ್ಯ (ಸಂಪುಟ ೭). ಆ ಸಂದರ್ಶನವನ್ನು (೪೮ ನಿಮಿಷ) ಇವತ್ತು ಪುನಃ ಕೇಳಿದೆ. ಜನಪ್ರಿಯ ಕವಿಯಾಗಿ, ಪ್ರಾಧ್ಯಾಪಕರಾಗಿ, ಚಿಂತಕರಾಗಿ, ಕನ್ನಡದ ಕಟ್ಟಾಳುವಾಗಿ, ಮಾನವತಾವಾದಿಯಾಗಿ ನಿಸಾರ್ ಅಹಮದರ ವ್ಯಕ್ತಿತ್ವ ಅದರಲ್ಲಿ ಮೂಡಿ ಬಂದಿದೆ.

Image