ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ

ಮರುಕಥನ - ರಾವಣನ ಪಾತ್ರ ಮತ್ತು ಲಕ್ಷ್ಮಣರೇಖೆ

 

ಒಂದು ಚಾಳಿನಲ್ಲಿ ಅನೇಕ ಸಂಸಾರಗಳಿವೆ. ಅವುಗಳಲ್ಲಿ ಒಂದರಲ್ಲಿ ವಾಸವಾಗಿರುವ ದಂಪತಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಒಂದು ಸಾಮಾಜಿಕ ಕಾರ್ಯಕ್ಕೆಂದು ವಂತಿಗೆ ಸಂಗ್ರಹಿಸಲು ಹೊರಟಾಗ ಇತರರು ನೆರವಾಗುವುದಿಲ್ಲ. ಒಳ್ಳೆಯ ಆರ್ಥಿಕ ಸ್ಥಿತಿಯಲ್ಲಿ ಇದ್ದರೂ ಕೂಡ   ಬಗೆಬಗೆಯ ಆಕ್ಷೇಪಗಳನ್ನು ಒಡ್ಡುತ್ತಾರೆ, ವಾದಗಳನ್ನು ಹೂಡುತ್ತಾರೆ.  ಆಗ ಈ ದಂಪತಿ ಒಂದು ಉಪಾಯ ಮಾಡುತ್ತಾರೆ; ಪರಿಚಯದ ಒಬ್ಬ ವ್ಯಕ್ತಿ ಇದ್ದಾನೆ - ನೋಡಲು ಒರಟಾಗಿ ಕ್ರೂರವಾಗಿ ಕಾಣುತ್ತಾನೆ. ಆತ ಒಳ್ಳೆಯವನೇ, ಸಭ್ಯಸ್ಥನೇ.  ಆತನಿಗೆ ಇವರೆಲ್ಲರ ದೂರವಾಣಿ ಸಂಖ್ಯೆಗಳನ್ನು ಒದಗಿಸಿ, ಗೂಂಡಾ ತರಹ ಮಾತನಾಡಿ ಬೆದರಿಸಲು ಮತ್ತು ಹಣಕ್ಕೆ ಒತ್ತಾಯಿಸಲು ಒಪ್ಪಿಸುತ್ತಾರೆ, ಅದರಂತೆ ಅವನು ಮಾಡುತ್ತಾನೆ. ಈಗ ಅದೇ ಜನ ತೆಪ್ಪಗೆ ಹಣ ಕೊಡುತ್ತಾರೆ!

  ಒಬ್ಬ ಶ್ರೀಮಂತನ ಮಗಳನ್ನು ತಡವಾಗಿ ಮನೆಗೆ ಬರುವಂತೆ ಮಾಡಿ ಆ ನಡುವಿನ ಸಮಯದಲ್ಲಿ ಅವಳನ್ನು ಅಪಹರಿಸಿರುವುದಾಗಿ ಮತ್ತು ಬಿಡುಗಡೆಗೆ ಹಣ ಕೇಳಿ ಫೋನ್ ಮಾಡಲು ಹೇಳುತ್ತಾರೆ.  ಅವನು ಫೋನ್ ನಲ್ಲಿ ಮಾತನಾಡುವಾಗ ಎಷ್ಟೇ ಒರಟಾಗಿ ಮಾತನಾಡಿದರೂ ಹುಡುಗಿಯ ಹೆಸರನ್ನು  ತೆಗೆದುಕೊಳ್ಳುವಾಗ  ಕೆಟ್ಟ ಶಬ್ದವನ್ನು ಉಪಯೋಗಿಸುವ ಬದಲಿಗೆ ಬೆಹನ್ ಜಿ (ಅಕ್ಕ)  ಎಂದು ಬಿಡುತ್ತಾನೆ! 

ಆ ಬಗ್ಗೆ ಇವರಿಗೆ ಹೇಳುವಾಗ  "ನನಗೆ ರಾವಣನ ಪಾತ್ರವನ್ನು ಅಭಿನಯಿಸಲು ಕೊಟ್ಟರು ಕೂಡ ನಾನು ಒಂದು ಲಕ್ಷ್ಮಣರೇಖೆಯನ್ನು ಮೀರಲಾರೆ. "  ಎನ್ನುತ್ತಾನೆ !

(ಇದು ಯಾವುದೋ ಒಂದು ಮರಾಠಿ ಕಥೆಯ ಕನ್ನಡ ಅನುವಾದ- ನಾನು ಮಾಡಿದ್ದಲ್ಲ - ಮಯೂರ ಅಥವಾ ಕಸ್ತೂರಿಯಲ್ಲಿ  ಪ್ರಕಟವಾಗಿತ್ತು.  ಓದಿದ ನೆನಪಿನಿಂದ  ನನ್ನ ಮಾತುಗಳಲ್ಲಿ ಸಂಕ್ಷಿಪ್ತವಾಗಿ ಬರೆದಿದ್ದೇನೆ  )

Rating
Average: 4 (4 votes)