ಇನಿಯನ ಮೌನ

Submitted by ತೇಜಸ್ವಿನಿ ಕುಕ್ಕೂರ್ on Fri, 05/15/2020 - 15:02
ಬರಹ

ನನ್ನ ಒಲವಿನ ಇನಿಯನೆ 
ನಿನ್ನ ಸಭ್ಯತೆ, ಸದ್ಗುಣಗಳ 
ಎಷ್ಟು ವರ್ಣಿಸಿದರೂ ಸಾಲದು 
ನನ್ನ ಪದಗಳ ಅಕ್ಷರ ಮಾಲೆ. 😊

ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ 
ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ 
ನೂರಾರು ಸ್ನೇಹಿತರ ನಡುವೆ 
ನೀನೆ ಅತಿಯಾಗಿ ಆಕರ್ಷಿಸಿದೆ. 😍

ನಿನ್ನ  ಹೃದಯದ ಸರೋವರದ ಜೊತೆ 
ನನ್ನ ಭಾವನೆಗಳ ಚಿನುಮೆ  ಹರಿಸಲು  ಬಂದಾಗ 
ಶಾಂತಸಾಗರದಷ್ಟೇ ನಿಮ್ಮ ಮನ ಮೌನವಾಗಿರುದೇಕೆ !?  😌