ಕವನಗಳು

ವಿಧ: ಕವನ
July 02, 2024
ಮೂಡಣ ತೆಂಕಣ ಗಾಳಿಯು ಬೀಸಿತು ಹೋ ಹೋ ಗಾಳಿಯೊ ಮರವದು ಬಾಗಿತು   ಸೊಂಯ್ ಸೊಂಯ್ ಶಬ್ದವು ಸುತ್ತಲು ಕೇಳಿತು ಹೋಯ್ ಹೋಯ್ ಜನರ ಕೂಗದು ಮೊರೆಯಿತು   ದನವದು ಉಂಮ್ಮಾ ಎನ್ನುತ ಓಡಿತು ಕರುವದು ಹಿಂದೆಯೆ ಉಂಬೇ ಎಂದಿತು   ಗಿಡವದು ಬಾಗಲು ಎಲೆಯದು ಉದುರಿತು ಮಾಡಿನ ಹುಲ್ಲದು ದೂರಕೆ ನೆಗೆಯಿತು   ಮಕ್ಕಳ ಮನದಲಿ ಭಯವದು ಕಂಡಿತು ಬೆಕ್ಕದು ಮನೆಯ ಒಳಗಡೆ ಅವಿತಿತು   ರೈತನ ಜೊತೆಗೆ ಎತ್ತದು ಬೆದರಿತು ದೂರಕೆ ದೂರಕೆ ಹೆಜ್ಜೆಯ ಹಾಕಿತು   ಎಂತಹ ಗಾಳಿಯೊ ಕೇಕೆಯ ಹಾಕಿತು ಮೋಡವು ಮುಸುಕಲು ಮಳೆಯದು ಬಂದಿತು -ಹಾ…
ವಿಧ: ಕವನ
July 01, 2024
ಕುತ್ತಿಗೆ ಕಡಿಯಲು ಇರಿಸಿದ ಕತ್ತಿಯ ಹಾಲನು ಖುಷಿಯಲಿ ಕುಡಿಯುತಿಹ ಕತ್ತಿಯ ಹರಿತಕೆ ಸೀಳಿದ ಕುತ್ತಿಗೆ ಮತ್ತದು ಪಡೆಯದು ಮರುಜೀವ   ಬೆಳೆದಿಹ ವೃಕ್ಷದ ಕಾಂಡವ ಕಡಿಯುತ ನಡುವಲಿ ಇವನಿಗೆ ದಣಿವಾಯ್ತೆ ಬಳಲಿಕೆ ಕಳೆಯಲು ನೆರಳನು ನೀಡುವ ವೃಕ್ಷದ ನೆರವದು ಮರೆತೋಯ್ತೆ   ಅಡೆತಡೆ ಇಲ್ಲದೆ ಅನುದಿನ ಮಾನವ ಮಾಡುವ ಗಾಳಿಯ ಮಾಲಿನ್ಯ ಜರಡಿಯನಾಡುತ ಶುದ್ಧದ ಗಾಳಿಯ ನಮಗದು ಕೊಡುವುದು ಪ್ರತಿನಿತ್ಯ   ಗಿಡವನು ನೆಡುವುದು ಪುಣ್ಯದ ಕಾರ್ಯವು ಆಗದೆ ಹೋದರೆ ಸುಮ್ಮನಿರು ಪೀಳಿಗೆಗಾಗಿಯೆ ಇರುವುದ ಉಳಿಸಿಕೊ ನೀಡದೆ…
ವಿಧ: ಕವನ
June 30, 2024
ಅಮ್ಮನು ನಡೆದಳು ಮಕ್ಕಳಜೊತೆಯಲಿ ಕಳೆಯಲು ಕೆಲದಿನ ತವರಿನಲಿ ಸಂತಸಗೊಂಡವು ಪುಟಾಣಿ ಮಕ್ಕಳು ಆಡಲು ಅಜ್ಜಿಯ ಮಡಿಲಿನಲಿ/   ನಗರದಲಿಲ್ಲದ ಹಲಬಗೆ ಸಾಧನ ಮಕ್ಕಳು ಬೆರಗಲಿ ನೋಡಿದರು ಅಜ್ಜಿಯು ಮೊಸರನು ಕಡೆಯಲು ಹೊರಟಿರೆ ಅಜ್ಜಿಯ ಮಡಿಲನು ಸೇರಿದರು/   ಸುತ್ತಿದ ಹಗ್ಗವ ಅಜ್ಜಿಯು ಜಗ್ಗಲು ತಿರುಗುತಲಿದ್ದಿತು ಕಡೆಗೋಲು ಅಜ್ಜಿಯ ಜೊತೆಯಲಿ ಹಗ್ಗವನೆಳೆಯಲು ಮಕ್ಕಳು ಉತ್ಸುಕರಾಗಿರಲು/   ಪ್ರೀತಿಯ ಚಿಣ್ಣರ ಮುದ್ದಿಸಿ ಅಜ್ಜಿಯು ಮೊಗದಲಿ ನಸುನಗೆ ಸೂಸುತ್ತ ಬಸಿರಿನ ಮೊಸರದು ಬೆಣ್ಣೆಯ ಹಡೆಯಿತು…
ವಿಧ: ಕವನ
June 22, 2024
ಹಲಸಿನ ಹಣ್ಣಿನ ಸವಿಯನು ಮೆಚ್ಚಿದ ಗಿಡವನು ನಾಟಿದ ಹಿತ್ತಲಲಿ ನೀರಿನ ಜೊತೆಯಲಿ ಗೊಬ್ಬರ ನೀಡಿದ ಫಲವನು ನೀಡಿತು ವರ್ಷದಲಿ   ಬುಡದಲಿ ಬಿಟ್ಟಿದೆ ಕಾಯ್ಗಳು ಮೂರಿವೆ ಒಡೆಯನು ನೋಡಲು ಮರೆತಿಹನೆ? ಸುಮ್ಮನೆ ಕುಳಿತರೆ ಕೊಳೆಯುವ ಸಂಭವ ಬಿರಿಯಿತು ಕಾಯಿಯು ತನ್ನನ್ನೆ   ಹಲಸಿನ ಹಣ್ಣಿನ ಒಳಗಿನ ಸೊಳೆಗಳ ತೋರುತಲಿರುವುದು ಎದೆ ಬಿಚ್ಚಿ ಘಮ್ಮನೆ ಪರಿಮಳ ಹೊಮ್ಮಿಸಿ ಕರೆದಿದೆ ಮೆಲ್ಲುತ ನುಡಿಯಿರಿ ಸವಿ ಮೆಚ್ಚಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
June 20, 2024
ಕನಸಿನ ಅರಮನೆಯಂಥ ಸೌಧ ಕಟ್ಟಬೇಕು ಮುತ್ತಿನಂಥ ಮನೆ ಮನ ಆಗಿರಬೇಕು ಪ್ರೀತಿ ಸ್ನೇಹ ನಿತ್ಯ ತುಂಬಿ ತುಳುಕಬೇಕು ಹಸಿದು ಬಂದವರಿಗೆ ಅನ್ನ ನೀಡ ಬೇಕು ದಣಿದು ಬಂದೋರಿಗೆ ನೀರು ಕೊಡಬೇಕು   ಹೆತ್ತ ವರನ್ನು ಪ್ರೀತಿಯಿಂದ ನೋಡಿ ಕೊಳ್ಳಬೇಕು  ಮಕ್ಕಳನ್ನು ಮುದ್ದಿನಿಂದ ಸಾಕಬೇಕು  ಪ್ರಾಣಿಗಳಿಗೆ ಸ್ನೇಹ ಪ್ರೀತಿ ಹಂಚಬೇಕು  ಹಕ್ಕಿಗಳ ಕಲರವವ ನಿತ್ಯ ಆಲಿಸಬೇಕು    ಸುತ್ತಲೂ ಚಂದದ ಗಿಡಗಳು ಇರಬೇಕು ಹೂಗಳ ಸುಗಂಧ ಎಲ್ಲೆಡೆ ಹರಡಬೇಕು ಹೂದೋಟದಿ  ಬಣ್ಣದ ಚಿಟ್ಟೆಗಳು ಹಾರುತ್ತಿರಬೇಕು ಚಿಟ್ಟೆಗಳ ನೋಡುತ ಮನ…
ಲೇಖಕರು: Amith S H
ವಿಧ: ಕವನ
June 20, 2024
ನಾ ಇಚ್ಚಿಸಿದರೆ ಅರ್ಥವಾಗದ್ದನ್ನು ನಿಘಂಟಿನದಿ ಅರ್ಥೈಸುವ‌ ಅರ್ಥದ ಸಾಲುಗಳಲ್ಲದವಳು ಒಂದೇ ಒಂದು ಕಣ್ಣೋಟದಲ್ಲಿಯೇ ಗೂಗ್ಲಿ ಬಿಡುವ, ಅಕ್ಷರಶಃ ಮಹಾರಾಣಿಯ ಗುಣದವಳು ಮಂತ್ರಿಸುತ್ತ ಏಕಾಂಗಿಯ ತನ್ನೊಡದಿ ವಶವಾಗಿಸಿದ ಮಾಟಗಾತಿಯಿವಳು ತಂಗಾಳಿಯದಿ ಪರಿಮಳದಿಂದಾಕರ್ಷಿಸಿಹ ಅಂದದ ಮೈಸೂರು ಮಲ್ಲಿಗೆಯವಳು ತನ್ನ ನಗುಮೊಗದಿಂದ ಎನ್ನೆದೆಯ ಹೂದೋಟದ ಹೂಗಳರಳಿಸಿದ ರವಿಯಾದವಳು ಕೋಗಿಲೆಯ ರಾಗವೂ ನಾಚುವಂತೆ ತನ್ನ ದನಿಯದಿ ಕಿವಿಗಿಂಪಾಗಿಸೋ ಮಯೂರಿಯವಳು ಕಾರ್ಗತ್ತಲ ಭೂಮಿಗೆ ಬೆಳಗೋ ಚಂದಿರನಂತೆ ಭೂಮಿಗಿಳಿದು ಎನ್ನ…
ವಿಧ: ಕವನ
June 17, 2024
ತೆಳ್ಳನೆಯ ಮೈ ತೆಳ್ಳನೆಯ ಮೈಯೊಳಗೆ  ಮಿರ ಮಿರನೆ ಮಿಂಚಿರಲು ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು ವರುಷವೈದೂ ಕಳೆದು  ಮಗುವೊಂದು ಬಂದಿರಲು ಮನೆಯ ಮೂಲೆಯಲಿಂದು ಮಲಗಿರುವೆನು *** ದೇವ ಮಂದಿರ ದೇವ ಮಂದಿರದೊಳಗೆ  ನಡೆಯುತಿವೆ ದಿನ ಪೂಜೆ ದೇವರಿರುವನು ಎನಲು ಅಷ್ಟೆ ಸಾಕು ವಾಮಾಚಾರದ ಹೋಮ  ಹವನಗಳು ಯಾಕೀಗ ನೀತಿ ನಿಯಮಗಳಡಿ ಬದುಕ ಬೇಕು *** ಮಂತ್ರ ತಂತ್ರ ಮಂತ್ರ ತಂತ್ರಗಳಿಗೆ ಮಾಣಿಕ್ಯ ಸಿಗುವುದೆ ಸಿಗುವುದಾದರೆ ಸಿಗಲಿ ಎಂದನೊಬ್ಬ ಹಾಗೆಯೇ ಕಲಿತವನು ನಮ್ಮೂರ ತ್ಯಾಂಪನು ದಿನವಿಡೀ ಮಲಗಿಹನು ಚಾಪೆಯಲೆ…
ವಿಧ: ಕವನ
June 16, 2024
ಮರದ ತುಂಬ ಮಾವು ಹಣ್ಣು ನಿನಗೆ ಕಾಣದೇ ತಿನ್ನಲೀಗ ಆಸೆ ನನಗೆ ನಿನಗೆ ಅರಿಯದೇ   ತಾತ ನನಗೆ ಒಂದು ಸಾಕು ಕಿತ್ತು ಬಿಡುವೆಯಾ ಕಚ್ಚಿ ತಿನ್ನಲಾಗದೆನಗೆ ಕೊಚ್ಚಿ ಕೊಡುವೆಯಾ   ಕಾಣದಂತೆ ದೂರ ಹೋಗಿ ಕುಳಿತುಕೊಳ್ಳುವಾ ನಾನು ನೀನು ಸೇರಿಕೊಂಡು ಜೊತೆಗೆ ತಿನ್ನುವಾ   ಒಂದು ತುಂಡು ನೀನು ತಿನ್ನು ನಾನು ಕೊಡುವೆನು ಉಳಿದುದೆಲ್ಲ ನನ್ನ ಪಾಲು ಹೆಚ್ಚು ನೀಡೆನು||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
June 15, 2024
ಕಾಣುವೆ ನಿನೊಂದು ಕನಸು  ನನಸಾಗಲಿಲ್ಲ ನನ್ನ ಕನಸು ನಾಳೆಯ ಬಗ್ಗೆ ಮುನಿಸು  ಬರುವುದೊ ಇಲ್ಲವೊ ತಿಳಿಸು    ನಾಳೆ ಎಂಬುದು ಬರತೈತಿ  ನಿನ್ನೆ ಎಂಬುದು ಮರಸೈತಿ ಬದುಕು ಎಂಬುದು ಸಾಗೈತಿ  ಬದುಕಿನ ಬಂಡಿ ಹೊಂಟೈತಿ    ಕನಸೊಂದು ಶುರುವಾಗಿ ಗುರಿಯ ಕಡೆಗೆ ತಾ ಬಾಗಿ  ದ್ವೇಷ ಮತ್ಸರದಿಂದ ಸಾಗಿ  ಕಡೆಗೆ ಏನು ಗೊತ್ತಿಲ್ಲದಂತಾಗಿ    ಯಾರು ಕಂಡಾರ ನಾಳೆ ನಾಳೆ ಇರುತ್ತೀರಾ ಹೇಳಿ  ಸಂಸಾರದಲ್ಲಿ ಬೀಸಿದೆ ಗಾಳಿ ನಮಗೆ ಖಾತ್ರಿಯಿಲ್ಲದ ನಾಳೆ    ಅಹಂಕಾರ ಬಿಟ್ಟು ಬಿಡು ಮತ್ಸರ ಬೇಡ ಬಿಡು  ಸರ್ವರನ್ನು ಪ್ರೀತಿ…
ವಿಧ: ಕವನ
June 14, 2024
ತುಂತುರು ಮಳೆಹನಿ ಬಂತದು ಭೂಮಿಗೆ ಚಿಂತೆಯ ಕಳೆಯಿತು ಜೀವಿಗಳ ಸಂತಸವೆಲ್ಲೆಡೆ ತಂತದು  ಹಂಚಲು ಹಂತಕ ಬರವನು ನೀಗಿಸುತ   ಬತ್ತಿದ ಕೆರೆಗಳು ಮತ್ತದು ತುಂಬಿತು ಕುತ್ತಿನ ಬರವನು ಹೊರದೂಡಿ ಭತ್ತವ ಹೊಲದಲಿ ಬಿತ್ತಿದ ರೈತನು ತುತ್ತನು ನೀಡುವ ಬೆಳೆಗಾಗಿ   ಉಸಿರನು ನೀಡುವ ಹಸಿರಿನ ಮೊಳಕೆಯು ಹೊಸೆಯಿತು ನೆಲದಲಿ ಚಿತ್ತಾರ ಬಸಿರಿನ ಒಡಲಲಿ ನಸುನಗೆ ಬೀರುವ ವಸುಧೆಗೆ ಮಾಡಿದೆ ಶೃಂಗಾರ   ಮುತ್ತಿನ ಹನಿಗಳ ಹೊತ್ತಿಹ ಮೇಘವು ಹತ್ತಿರವಾಯಿತು ಮಳೆ ಸುರಿದು ಸುತ್ತಲ ಪರಿಸರ ಚಿತ್ತವ ಸೆಳೆವುದು ಚಿತ್ರವ ಬರೆಯಿತು…