ಶಿಶುಗೀತೆ - ಕಿತ್ತು ಕೊಡುವೆಯಾ..?

ಶಿಶುಗೀತೆ - ಕಿತ್ತು ಕೊಡುವೆಯಾ..?

ಕವನ

ಮರದ ತುಂಬ ಮಾವು ಹಣ್ಣು

ನಿನಗೆ ಕಾಣದೇ

ತಿನ್ನಲೀಗ ಆಸೆ ನನಗೆ

ನಿನಗೆ ಅರಿಯದೇ

 

ತಾತ ನನಗೆ ಒಂದು ಸಾಕು

ಕಿತ್ತು ಬಿಡುವೆಯಾ

ಕಚ್ಚಿ ತಿನ್ನಲಾಗದೆನಗೆ

ಕೊಚ್ಚಿ ಕೊಡುವೆಯಾ

 

ಕಾಣದಂತೆ ದೂರ ಹೋಗಿ

ಕುಳಿತುಕೊಳ್ಳುವಾ

ನಾನು ನೀನು ಸೇರಿಕೊಂಡು

ಜೊತೆಗೆ ತಿನ್ನುವಾ

 

ಒಂದು ತುಂಡು ನೀನು ತಿನ್ನು

ನಾನು ಕೊಡುವೆನು

ಉಳಿದುದೆಲ್ಲ ನನ್ನ ಪಾಲು

ಹೆಚ್ಚು ನೀಡೆನು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ್