ಅವಳು

ಅವಳು

ಕವನ

ನಾ ಇಚ್ಚಿಸಿದರೆ ಅರ್ಥವಾಗದ್ದನ್ನು ನಿಘಂಟಿನದಿ ಅರ್ಥೈಸುವ‌ ಅರ್ಥದ ಸಾಲುಗಳಲ್ಲದವಳು

ಒಂದೇ ಒಂದು ಕಣ್ಣೋಟದಲ್ಲಿಯೇ ಗೂಗ್ಲಿ ಬಿಡುವ, ಅಕ್ಷರಶಃ ಮಹಾರಾಣಿಯ ಗುಣದವಳು

ಮಂತ್ರಿಸುತ್ತ ಏಕಾಂಗಿಯ ತನ್ನೊಡದಿ ವಶವಾಗಿಸಿದ ಮಾಟಗಾತಿಯಿವಳು

ತಂಗಾಳಿಯದಿ ಪರಿಮಳದಿಂದಾಕರ್ಷಿಸಿಹ ಅಂದದ ಮೈಸೂರು ಮಲ್ಲಿಗೆಯವಳು

ತನ್ನ ನಗುಮೊಗದಿಂದ ಎನ್ನೆದೆಯ ಹೂದೋಟದ ಹೂಗಳರಳಿಸಿದ ರವಿಯಾದವಳು

ಕೋಗಿಲೆಯ ರಾಗವೂ ನಾಚುವಂತೆ ತನ್ನ ದನಿಯದಿ ಕಿವಿಗಿಂಪಾಗಿಸೋ ಮಯೂರಿಯವಳು

ಕಾರ್ಗತ್ತಲ ಭೂಮಿಗೆ ಬೆಳಗೋ ಚಂದಿರನಂತೆ ಭೂಮಿಗಿಳಿದು ಎನ್ನ ಪ್ರಶಾಂತಿಸೋ ಚಂದ್ರಿಕೆಯವಳು

ಲೇಖನಿಯ ಶಾಯಿ ಖಾಲಿಯಾದರೂ ಮತ್ತೆ ಮತ್ತೆ ನೆನಪಾಗೋ ಕವಿತೆಯಾದವಳು

❤️💫

                                    - ಅಮಿತು