ಹನಿಗಳು ಸರ್ ಹನಿಗಳು !

ಹನಿಗಳು ಸರ್ ಹನಿಗಳು !

ಕವನ

ತೆಳ್ಳನೆಯ ಮೈ

ತೆಳ್ಳನೆಯ ಮೈಯೊಳಗೆ 

ಮಿರ ಮಿರನೆ ಮಿಂಚಿರಲು

ನಲ್ಲೆ ನಿನ್ನೊಲುಮೆಯೊಳು ನಾ ಮಿಂದೆನು

ವರುಷವೈದೂ ಕಳೆದು 

ಮಗುವೊಂದು ಬಂದಿರಲು

ಮನೆಯ ಮೂಲೆಯಲಿಂದು ಮಲಗಿರುವೆನು

***

ದೇವ ಮಂದಿರ

ದೇವ ಮಂದಿರದೊಳಗೆ 

ನಡೆಯುತಿವೆ ದಿನ ಪೂಜೆ

ದೇವರಿರುವನು ಎನಲು ಅಷ್ಟೆ ಸಾಕು

ವಾಮಾಚಾರದ ಹೋಮ 

ಹವನಗಳು ಯಾಕೀಗ

ನೀತಿ ನಿಯಮಗಳಡಿ ಬದುಕ ಬೇಕು

***

ಮಂತ್ರ ತಂತ್ರ

ಮಂತ್ರ ತಂತ್ರಗಳಿಗೆ

ಮಾಣಿಕ್ಯ ಸಿಗುವುದೆ

ಸಿಗುವುದಾದರೆ ಸಿಗಲಿ ಎಂದನೊಬ್ಬ

ಹಾಗೆಯೇ ಕಲಿತವನು

ನಮ್ಮೂರ ತ್ಯಾಂಪನು

ದಿನವಿಡೀ ಮಲಗಿಹನು ಚಾಪೆಯಲೆ ಹಬ್ಬ

***

ನಮ್ಮ ಬೆಂಗಳೂರು

ಬೆಂಗಳೂರು ಪೇಟೆಯಲಿ

ಇರುವಷ್ಟು ದಿನವು

ಕೆಮ್ಮು ದಮ್ಮಿನ ಜೊತೆಗೆ ಬಾಳುತ್ತಿದ್ದೆ

ಈಗ ಹಾಗಲ್ಲ ಗೆಳತಿ

ಮಡಿಕೇರಿಗೆ ಬಂದಿರುವೆ

ಆರೋಗ್ಯ ಸುಖದೊಳಗೆ ಬಾಳುತಿರುವೆ

***

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್