ಹೋ ಹೋ ಗಾಳಿ...

ಹೋ ಹೋ ಗಾಳಿ...

ಕವನ

ಮೂಡಣ ತೆಂಕಣ

ಗಾಳಿಯು ಬೀಸಿತು

ಹೋ ಹೋ ಗಾಳಿಯೊ

ಮರವದು ಬಾಗಿತು

 

ಸೊಂಯ್ ಸೊಂಯ್ ಶಬ್ದವು

ಸುತ್ತಲು ಕೇಳಿತು

ಹೋಯ್ ಹೋಯ್ ಜನರ

ಕೂಗದು ಮೊರೆಯಿತು

 

ದನವದು ಉಂಮ್ಮಾ

ಎನ್ನುತ ಓಡಿತು

ಕರುವದು ಹಿಂದೆಯೆ

ಉಂಬೇ ಎಂದಿತು

 

ಗಿಡವದು ಬಾಗಲು

ಎಲೆಯದು ಉದುರಿತು

ಮಾಡಿನ ಹುಲ್ಲದು

ದೂರಕೆ ನೆಗೆಯಿತು

 

ಮಕ್ಕಳ ಮನದಲಿ

ಭಯವದು ಕಂಡಿತು

ಬೆಕ್ಕದು ಮನೆಯ

ಒಳಗಡೆ ಅವಿತಿತು

 

ರೈತನ ಜೊತೆಗೆ

ಎತ್ತದು ಬೆದರಿತು

ದೂರಕೆ ದೂರಕೆ

ಹೆಜ್ಜೆಯ ಹಾಕಿತು

 

ಎಂತಹ ಗಾಳಿಯೊ

ಕೇಕೆಯ ಹಾಕಿತು

ಮೋಡವು ಮುಸುಕಲು

ಮಳೆಯದು ಬಂದಿತು

-ಹಾ ಮ ಸತೀಶ, ಬೆಂಗಳೂರು

ಚಿತ್ರ್