ವಚನಗಳಿಂದ ಆಯ್ದ ನುಡಿಮುತ್ತುಗಳು

ವಚನಗಳಿಂದ ಆಯ್ದ ನುಡಿಮುತ್ತುಗಳು

ಕಯ್ಯಾರೆ ಮಾಡುವ ಧರ್ಮ ಲೇಸು

ಹೃದಯಶೂನ್ಯರ ಒಲವಿಗಿಂತ ಬಲ್ಲವರ ಕದನವೇ ಲೇಸು

ಕುಚ ಹೇಮ ಶಸ್ತ್ರ ಸೋಂಕಿದಾಗ ಶುಚಿ ವೀರ ಧೀರರು ಅಚಲಿತರಾದರು

ಒಳ್ಳೇರ ಒಡನಿದ್ದು ಕಳ್ಳ ಒಳ್ಳೇನಾದ

ಅನುಭವಿಗೆ ಬೇರೆ ಮತವಿಲ್ಲ

ಸಿರಿ ಸೋಂಕಿದವರ ಪರಿ ಬೇರೆ

ಮಾಡಿದ ಕರ್ಮ ಬೆನ್ನಾಡಿ ಬಂತು

ಸೊಲ್ಲಿನ ಬೇದ ತಿಳಿದ ಕಿರಿಯ ಎಲ್ಲರಿಗೂ ಹಿರಿಯ

ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು

ತನ್ನ ತಾನರಿತವಗೇ ತ್ರಿಭುವನ ತನ್ನೊಳಗೆ ಕಂಡಿತ್ತು

ದೈವ ಅನ್ನೋದ ಮತ್ತೆಲ್ಲೂ ನೊಡದೆ ತಾನಿದ್ದ ಒತ್ತಿಲೇ ನೋಡು

ಪೆದ್ದ ಮರದ ತುದಿಯೇರಿ ಅಣಿತಪ್ಪಿ ಬಿದ್ದು ಸತ್ತ

ಬಹುಮನದ ಹಾದಿ ಕೈಗೊಂಡರೆ ಸುಖವಿಲ್ಲ

ಪಾತ್ರವರಿತು ಜಗದ ಜಾತ್ರೆಗೆ ಸಲ್ಲಬೇಕು

ಪುಣ್ಯ ಉಂಡು (=ಸುಖ ಅನುಭೋಗಿಸಿ) ತೀರಿತು, ಪಾಪ ತಿಂದು (=ಕಷ್ಟ ಅನುಭವಿಸಿ) ತೀರಿತು

ಜಪ-ತಪ ಉಪವಾಸ ಇದ್ದರೆ ಅಂತಕನ ವಿಪರೀತ ತಪ್ಪೀತೆ

ಪ್ರಾರಬ್ಧ ಬಂದ ಕಾಲಕ್ಕೆ ಒಂದಲ್ಲ ಒಂದು ಕೇಡು

ಆಗ ಬಾ ಈಗ ಬಾ ಹೋಗಿ ಬಾ ಅನ್ನದೆ ಕೊಡುವ ತ್ಯಾಗವಾಗು

ಕೊಡದ ಲೋಭಿ ಮಾತು ಕೊಡಲಿ ಪೆಟ್ಟು

ಮಾಡುವವ ಉತ್ತಮ ಆಡಿ ಮಾಡದವ ಅಧಮ

ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ

ಏನಾದರೇನು ತಾನು ತಾನಾಗದ ವರೆಗೆ

ಕೊಲ್ಲದಿರುವುದೇ ಧರ್ಮ ಬಲ್ಲವರಿಗೆ ಅದೇ ಸಮ್ಮತ

ಧರ್ಮದ ಹಾದಿ ತಿಳಿದವನಿಗೆ ಓದು ವಾದಗಳೇಕೆ

ನಿಷ್ಠೆ ಇಲ್ಲದವನಿಗೆ ದೈವ ಬಟ್ಟಬಯಲು

ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು

ಕಂಡವರ ಕಂಡು ಕೈಕೊಂಡ ಕೆಲಸ ಕೆಂಡವಾಯ್ತು

ನಿಷ್ಠೆ ಇದ್ದಲ್ಲಿ ದೈವ ಕಲ್ಲುಗುಂಡೊಳಗೆ ಅಡಗಿತ್ತು

ಭಕ್ತಿ ಉಳ್ಳಾತಗೆ ಮುಕ್ತಿ ,ಶಕ್ತಿ ಉಳ್ಳಾತಗೆ ಭುಕ್ತಿ

ಅರಿತು ಮಾಡದ ದಾನ ತೆರೆದು ನೋಡದ ಕಣ್ಣಂತೆ

ಕಾಯ ಕಮಲವೇ ಸೆಜ್ಜೆ ಜೀವ ರತುನವೇ ಜ್ಯೋತಿ

ಜ್ಯೋತಿಯ ನೆಲೆ ಅರಿತವನೇ ಯೋಗಿ

ವಿಧಿ ಕಾಣದ ಎಡೆಗಳಿಲ್ಲ

ದಾರವಿದ್ದರೆ ಮುತ್ತು ಹಾರವೆಂದನಿಸಿತ್ತು

ಆಳಿದ ದೊರೆ ಹುಸಿದರೆ ಅಲ್ಲಿಂದ ಹೇಳದೆ ಹೋಗಬೇಕು

ಬಲ್ಲಿದರೊಡನೆ ಸೆಣಸಿ ಮಾತಾಡಿದರೆ ಅಲ್ಲೇ ಬಂತು ಕೇಡು

ಮಂತ್ರಿಇಲ್ಲದ ರಾಜ್ಯ ಕೀಲು ಮುರಿದ ಯಂತ್ರದಂತೆ