version-4 test
ಅದೇಕೋ ಏನೊ, ನಾನು ಸಿನಿಮಾ ಹಾಡುಗಳನ್ನು ಕೇಳುವಾಗ ಕೆಲವೇ ಕೆಲವು ಹಾಡುಗಳು ಮಾತ್ರ ನನಗೆ ಬಹಳ ಇಷ್ಟವಾಗುತ್ತಿದ್ದವು. ನಾನು ೩ ವರುಷದವನಾಗಿನಿಂದ ಸುಮಾರು ೨೦ ವರುಷಗಳ ಕಾಲ ಸಿನಿಮಾ / ಶಾಸ್ತ್ರೀಯ ಸಂಗೀತ (ಕರ್ಣಾಟಕ ಮತ್ತು ಹಿಂದೂಸ್ತಾನಿ ಎರಡೂ ಶೈಲಿಗಳು) ಕೇಳುತ್ತಿದ್ದೆ (ಅಥವಾ ಕಿವಿಯ ಮೇಲೆ ಬೀಳುತ್ತಿತ್ತೆಂದರೆ ಸರಿಯೇನೋ). ಆದರೆ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಪಿ.ಯು.ಸಿ / ಕಾಲೇಜು ದಿನಗಳಲ್ಲಿ ಹೆಚ್ಚಾಗಿ ಕೇಳುತ್ತಿದ್ದದ್ದು - ರೇಡಿಯೋದಲ್ಲಿ ರಾತ್ರಿ ಹತ್ತೂವರೆಯಿಂದ ಹನ್ನೊಂದರವರೆಗೆ ಆಲ್ ಇಂಡಿಯ ರೇಡಿಯೊ ಉರ್ದು ಸರ್ವಿಸ್ ಕೇಂದ್ರದಲ್ಲಿ ಪ್ರಸಾರವಾಗುತ್ತಿದ್ದ ಹಳೆಯ ಅಂದರೆ ೫೦-೬೦ರದಶಕದ ಹಿಂದಿ ಚಿತ್ರಗೀತೆಗಳು, ಹನ್ನೊಂದರಿಂದ ಹನ್ನೊಂದೂವರೆವರೆಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ನಂತರ ಹನ್ನೊಂದೂವರೆಯಿಂದ ಒಂದೂವರೆವರೆಗೆ ಆಕಾಶವಾಣಿ ರಾಷ್ಟ್ರೀಯ ಪ್ರಸಾರಣ್ ಸೇವಾ ಕೇಂದ್ರದಿಂದ ಮತ್ತೆ ಹಳೆಯ ಹಿಂದಿ ಚಿತ್ರಗೀತೆಗಳು ಹೀಗೆ. ಪರೀಕ್ಷೆಗೆ ಓದುತ್ತಿದ್ದಾಗಲೂ ಹಿನ್ನೆಲೆಯಲ್ಲಿ ರಾತ್ರಿಯೆಲ್ಲಾ ಟ್ರಾನ್ಸಿಸ್ಟರ್ ಹಾಡುತ್ತಲೇ ಇರುತ್ತಿತ್ತು. ಎಷ್ಟೋ ಬಾರಿ ಅದನ್ನು ಆರಿಸಲು ಮರೆತು...