ಅಂಗವಿಕಲರು ಯಾರು?

ಅಂಗವಿಕಲರು ಯಾರು?

ಕವನ

ಅಂಗವಿಕಲರು ಯಾರು? ಅಂಗವಿಕಲರು ಯಾರು ಗೆಳೆಯಾ?

ಅಂಗ ಊನರಾ? ಅಂಗ ಊನರಾ ಹೇಳು ಗೆಳೆಯಾ? ॥ಪ॥

 

ಮಾಡರು ಆಕ್ಸಿಡೆಂಟ್ ಕಣ್ಣಿಲ್ಲದವರು ।

ಮಾಡುವರು ಆಕ್ಸಿಂಡೆಂಟ್ ಕಣ್ಣಿರುವವರು ।

ಕಿವಿ-ಮೂಗು ಊನರು

ಒಳಿತಿಗೆ ತಲೆ ಬಾಗುವರಿವರು

ಅಂಗವಿಕಲರು ಯಾರು ಗೆಳೆಯಾ? ॥೧॥

 

ಕಲೆಗಾರರು ‘ಕೈ’ ಊನರು

ಕೊಲೆಗಾರರು ‘ಕೈ’ ಇರುವವರು

ಜೀವನ ಜಯಿಸುವರು ‘ಕಾಲು’ ಊನರು

ಜೀವನದಲ್ಲಿ ಜಾರುವರು ಕಾಲಿರುವವರು

ಅಂಗವಿಕಲರು ಯಾರು ಗೆಳೆಯಾ? ॥೨॥

 

ಅಧಿಕಾರ ಎಂಬುದು ಬೆಳಕು, ಸೇವೆಯ ಬದುಕು

ಇದನ್ನರಿತು ಕರ್ತವ್ಯ ಮಾಡುವರು ಅಂಗ ಊನರು,

ಇದ ಮರೆತು ದೇಹ ಬೆಳೆಸಿ, ಪಾಪ ಕೃತ್ಯ ಎಸಗುವರು

ಸುಲಿಗೆ ಮಾಡುವರು, ದೇಹ ದಾಂಡಿಗರು

ಅಂಗವಿಕಲರು ಯಾರು ಗೆಳೆಯಾ? ॥೩॥

 

ಬಡವರುಗಳ ಆಹಾರದ ಹಣ ಹೊಡೆದ ಹಣ ಬಡುಕರು 

ಕೋಟಿಗಟ್ಟಲೆ ಹಣ ಹೊಡೆದ ಹಗರಣಕಾರರು

ದ್ರೋಹ ಮಾಡುವರು ಜೈಲು ಸೇರುವರು

ಮನೆ ಮುರುಕರು ಆದರೂ ಸುಂದರಾಂಗರು ।

ಅಂಗವಿಕಲರು ಯಾರು ಗೆಳೆಯಾ ? ॥೪॥

-ಜಂಬರಗಟ್ಟಿ ಟಿ ಮಂಜಪ್ಪ

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್