ಅಂಚು
ಬರಹ
ಬಾಲ್ಯದಂಚಿಗೆ ಹೋಗಿದ್ದೇನೆ
ಮಿಂಚುವ ನೋಟ
ತುಂಟ ನಗೆ ಬರೀ ಹುಡುಗಾಟ
ಗುರಿಕಾಣದೆ ಹಿಂದಿರುಗಿದ್ದೇನೆ
ಸ್ನೇಹದಂಚಿಗೆ ಹೋಗಿದ್ದೇನೆ
ಗೆಲುವಿನೆಡೆಗೆ ನೋಟ
ಪ್ರೀತಿಗಾಗಿ ಹೋರಾಟ, ಹಾರಾಟ
ಗುರಿ ಕಂಡೂ ಕಾಣದಂತಾಗಿದ್ದೇನೆ
ಪ್ರೀತಿಯಂಚಿಗೆ ಹೋಗಿದ್ದೇನೆ
ಸರಸ, ವಿರಸದ ನೋಟ
ಪ್ರೇಮ ಭಾವ, ಚೆಲ್ಲಾಟ, ಕನಸಿನಾಟ
ಪ್ರೀತಿಯೇ ಗುರಿ ಎಂದಿದ್ದೇನೆ
ದಾ೦ಪತ್ಯದ೦ಚಿಗೆ ಹೋಗಿದ್ದೇನೆ
ಬದುಕಿನೆಡೆಗೆ ನೋಟ
ಸಂಸಾರ, ಬರೀ ಹುಡುಕಾಟ
ಪ್ರೀತಿಯ ಗುರಿ ದಾಟಿದ್ದೇನೆ
ಸಾವಿನಂಚಿಗೆ ಹೋಗಿದ್ದೇನೆ
ಶೂನ್ಯದೆಡೆಗೆ ನೋಟ
ನಿಶ್ಯಬ್ಧ , ಸ್ಥಬ್ಧ, ಕತ್ತಲು
ಗುರಿ ಕಂಡು ಹಿಡಿದಿದ್ದೇನೆ
ಮುಕ್ತಿಯೆಡೆಗೆ ಹೋಗುತ್ತಿದ್ದೇನೆ
ದೇದೀಪ್ಯ ನೋಟ
ಜ್ಞಾನ, ಬೆಳಕು, ಭಾರಿ ಸಾಗರ
ಗುರಿ ಹಿಡಿದಿದ್ದೇನೆ