ಅಂಚೆಯ ಅಣ್ಣ

ಅಂಚೆಯ ಅಣ್ಣ

ಕವನ

ಅಂಚೆಯ ಅಣ್ಣ ಬಂದಿಹನು

ವಿಧವಿಧ ಕಾಗದ ತಂದಿಹನು

ಹೆಗಲಿಗೆ ಜೋಳಿಗೆ ಹಾಕಿಹನು

ಬಾಗಿಲ ಬಳಿಯಲಿ ನಿಂತಿಹನು

 

ಹೊರಗಡೆ ಅಪ್ಪನ ಕರೆದಿಹನು

ಅಮ್ಮನು ಇಣುಕುತ ನೋಡುವಳು 

ಪತ್ರವ ಹೊರಗಡೆ ತೆಗೆದಿಹನು

ತಂದೆಯ ಕೈಗೆ ನೀಡಿಹನು

 

ಅಪ್ಪನ ಮೊಗದಲಿ ಸಂತಸವು

ಕಣ್ಣಲಿ ಹೊಳಪಿನ ಆನಂದವು

ಅಕ್ಕನ ಮದುವೆಯ ವಿಷಯವದು

ನನಗೂ ಮನದೊಳು ಸಂಭ್ರಮವು

 

ಅಂಚೆಯ ಅಣ್ಣಗೆ ಕಾಫಿಯನು

ಖುಷಿಯಲಿ ನೀಡಲು ನನ್ನಮ್ಮನು

ಸೈಕಲ್ ಏರಿ ಹೊರಟೇ ಬಿಟ್ಟ

ಪಕ್ಕದ ರಾಯರ ಮನೆಯ ಕಡೆ

 

‘ವಿಶ್ವ ಅಂಚೆಯ ದಿನ’ವಂತೆ

ನೆನೆಯುವ ಸಮಯವು ಬಂದಿದೆಯಂತೆ

ನಮ್ಮ ಮನೆಯ ಸದಸ್ಯನಂತೆ

ಕೃತಜ್ಞತೆ ಸಲಿಸೋಣ ಕರ್ತವ್ಯಕಂತೆ

-ರತ್ನಾ ಕೆ ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೇಟ್ ತಾಣ

ಚಿತ್ರ್