ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ ೨೦೦೯ - ಉದ್ಘಾಟನೆ

ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ ೨೦೦೯ - ಉದ್ಘಾಟನೆ

ಈ ವರ್ಷ ಗೆಲಿಲಿಯೊ ತನ್ನ ದೂರದರ್ಶಕದ ಮೂಲಕ ಆಕಾಶವನ್ನು ಶೋಧಿಸಿದ ೪೦೦ನೇ ವರ್ಷ. ಇದನ್ನು ಅಂತರರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ (IYA 2009) ಎಂದು ಆಚರಿಸಲಾಗುತ್ತಿದೆ. ಇದು ನಮ್ಮ ಸಮಾಜ, ಸಂಸ್ಕೃತಿಗೆ ಖಗೋಳ ವಿಜ್ಞಾನ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಜಾಗತಿಕ ಹಬ್ಬ. ಇದರ ಉದ್ದೇಶ ಜಗತ್ತಿನ ಎಲ್ಲೆಡೆ ಯುವಜನರಲ್ಲಿ ವಿಜ್ಞಾನ, ಖಗೋಳದ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವುದು. ಇದರ ಧ್ಯೇಯ ವಾಕ್ಯ "ನಮ್ಮ ವಿಶ್ವ, ನಿಮ್ಮ ಅನ್ವೇಷಣೆಗಾಗಿ".

ನಮ್ಮ ಬೆಂಗಳೂರಿನಲ್ಲಿ ಬೆಂಗಳೂರಿನ ಹವ್ಯಾಸಿ ಖಗೋಳ ತಜ್ಞರ ಒಕ್ಕೂಟ (ABAA - Association of Bangalore Amateur Astronomers) ಐವೈಎ ಅನ್ನು ಆಚರಿಸುತ್ತಿದೆ. ಐವೈಎ ಪ್ರಯುಕ್ತ ವರ್ಷದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ.
ಎಬಿಎಎ ೧೯೭೬ರಿಂದ ಖಗೋಳ ವಿಜ್ಞಾನವನ್ನು ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ non-profit ಸಂಸ್ಥೆ. ಈ ಭಾನುವಾರ ಅಂದರೆ ೨೨ ಮಾರ್ಚ್ ೨೦೦೯ ಸಂಜೆ ೪ ಗಂಟೆಗೆ ಎಬಿಎಎ ಐವೈಎ೨೦೦೯ರ ಉದ್ಘಾಟನೆಯನ್ನು ಜವಹರ್ ಲಾಲ್ ನೆಹರು ತಾರಾಲಯದಲ್ಲಿ ನಡೆಸುತ್ತಿದೆ. ತಾರಾಲಯದ ನಿರ್ದೇಶಕ ಖ್ಯಾತ ಖಗೋಳಶಾಸ್ತ್ರಜ್ಞ ಡಾ.ಸಿ.ಎಸ್.ಶುಕ್ರೆಯವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಬಿಎಎಯ ಚಟುವಟಿಕೆಗಳ ಬಗ್ಗೆ ಮಾಹಿಯನ್ನೂ ನೀಡಲಾಗುವುದು. ಅನೇಕ ಬಗೆಯ ದೂರದರ್ಶಕಗಳ ಪ್ರದರ್ಶನವೂ ಇರುತ್ತದೆ. ಪ್ರವೇಶ ಉಚಿತ.
ಕಾರ್ಯಕ್ರಮಕ್ಕೆ ಎಲ್ಲರಿಗೂ ಸುಸ್ವಾಗತ. ಬನ್ನಿ. ಸ್ನೇಹಿತರನ್ನೂ ಕರೆತನ್ನಿ. ವಿಶ್ವವನ್ನು ಅನ್ವೇಷಿಸಿ.
ಹೆಚ್ಚಿನ ಮಾಹಿತಿಗಾಗಿ abaa.org@gmail.comಗೆ ಬರೆಯಿರಿ. (ಎಬಿಎಎ website ಸದ್ಯ ದುರಸ್ತಿಯಲ್ಲಿದೆ).

ದಿನಾಂಕ: ೨೨ ಮಾರ್ಚ್ ೨೦೦೯
ಸಮಯ: ಸಂಜೆ ೪ ಗಂಟೆ
ಸ್ಥಳ: ಜವಹರ್ ಲಾಲ್ ನೆಹರು ತಾರಾಲಯ (planetarium),
ಟಿ. ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್, ಬೆಂಗಳೂರು-೫೬೦೦೦೧