ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ

ನಾವು ಪರಿಸರಕ್ಕೆ ಏನು ಕೊಡುತ್ತೇವೊ, ಪರಿಸರ ನಮಗೆ ಅದನ್ನೇ ವಾಪಾಸ್ ಕೊಡುತ್ತದೆ. ಇಂದು (ಜುಲೈ 3) ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನ (International Plastic Bag Free Day). ಪರಿಸರದ ಕಡೆ ನಾವು ಎಸೆಯುತ್ತಿರುವ ಪ್ಲಾಸ್ಟಿಕ್ ಚೀಲಗಳನ್ನು ಇಂದಿನಿಂದ ಆದರು ನಿಲ್ಲಿಸೋಣ. ಮನೆಯಲ್ಲಿರುವ ಬಟ್ಟೆ ಚೀಲಗಳನ್ನು ಬಳಸೋಣ ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸೋಣ.
ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ಹಕ್ಕು ಮತ್ತು ಜವಾಬ್ದಾರಿ. ದಯವಿಟ್ಟು ಸಂಪೂರ್ಣವಾಗಿ ಪ್ಲಾಸ್ಟಿಕ್ ಅನ್ನು ದೂರವಿರಿಸಿ, ನಿಮ್ಮ ಮಕ್ಕಳಿಗೆ ಪರಿಸರಕ್ಕೆ ಪ್ಲಾಸ್ಟಿಕ್ಕಿನಿಂದಾಗುವ ಹಾನಿಯ ಬಗ್ಗೆ ಮಾಹಿತಿ ನೀಡಿ, ಜಾಗೃತ ಗೊಳಿಸಿ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಕೊಡುವ ಹೊಣೆ ನಮ್ಮ ಮೇಲಿದೆ ಎಚ್ಚರಿಕೆ ಇಂದ ಮುಂದಡಿ ಇಡೋಣ. ಮುಂದೆ ನಡೆಯೋಣ....
***
ಪ್ಲಾಸ್ಟಿಕ್ ಎಂದರೇನು?
ಅತಿ ಹೆಚ್ಚು ದಿನಬಳಕೆಯ ಪ್ಲಾಸ್ಟಿಕ್ ಸಾಮಗ್ರಿ ಹುಟ್ಟಿದ್ದು ಹೀಗೆ...1933ರಲ್ಲಿ ಇಂಗ್ಲೆಂಡಿನ ನಾರ್ಥವಿಚ್‌ನ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಆಕಸ್ಮಿಕವಾಗಿ ತಯಾರಾಯಿತು. ಇದರ ಬಹೂಪಯೋಗಿ ಗುಣದಿಂದ ಬ್ರಿಟಿಷ್ ಪಡೆಗಳು ಎರಡನೇ ಮಹಾಯುದ್ಧದಲ್ಲಿ ಬಳಸಿದವು. ಆದರೆ ಇದನ್ನು ದಿನಬಳಕೆಯ ಸಾಮಾನುಗಳ ತಯಾರಿಕೆಯಲ್ಲೂ ಬಳಸಬಹುದೆಂದು ತೋರಿಸಿಕೊಟ್ಟಿದ್ದು ಸ್ವೀಡನ್ ಮೂಲದ ಸೆಲ್ಲೊಪ್ಲಾಸ್ ಎಂಬ ಕಂಪನಿ. 1965ರಲ್ಲಿ ಈ ಕಂಪನಿಯು ಪ್ಲಾಸ್ಟಿಕ್‌ನಿಂದ ತಯಾರಾದ ಕೈಚೀಲವೊಂದನ್ನು ಪ್ರಥಮವಾಗಿ ಮಾರುಕಟ್ಟೆಗೆ ಪರಿಚಯಿಸಿತು. ಇದರ ಜನಪ್ರಿಯತೆಯನ್ನು ಗಮನಿಸಿ ಮತ್ತಷ್ಟು ಕಂಪನಿಗಳು ಹೊಸ ವಿನ್ಯಾಸಗಳನ್ನು ಮಾರುಕಟ್ಟೆಗೆ ತಂದವು. 1980ರ ದಶಕದ ಆರಂಭದಲ್ಲಿ ವಿಶ್ವಾದ್ಯಂತ ಎಲ್ಲ ರಾಷ್ಟ್ರಗಳನ್ನೂ ಆವರಿಸಿಕೊಂಡ ಪ್ಲಾಸ್ಟಿಕ್ ಚೀಲಗಳು ಆ ದಶಕದ ಕೊನೆಯಲ್ಲಿ ಎಲ್ಲೆಡೆ ಏಕಸಾಮ್ಯ ಸ್ಥಾಪಿಸಿದವು.
(ಆಧಾರ) - ಅರುಣ್ ಡಿ'ಸೋಜ, ಮಂಗಳೂರು