ಅಂತರಿಕ್ಷದತ್ತ ಕರೀಂ ಅಬ್ಬಾಸ್ ಅಲಿರವರ ಚಿತ್ತ !

ಅಂತರಿಕ್ಷದತ್ತ ಕರೀಂ ಅಬ್ಬಾಸ್ ಅಲಿರವರ ಚಿತ್ತ !

ದ್ವಿತೀಯ ಮಹಾಯುದ್ಧವನ್ನು ಅನುಸರಿಸಿ ಎರಡು ಆರ್ಥಿಕ ದೈತ್ಯರಾದ ಅಮೇರಿಕ ಮತ್ತು ರಷ್ಯಾ ನಡೆಸಿದ ನಾಟಕೀಯ ಅಂತರೀಕ್ಷ ಸ್ಪರ್ಧೆಯಲ್ಲಿ, ಅಮೇರಿಕವು ನೀಲ್ ಆರ್ಮ್ ಸ್ಟ್ರಾಂಗ್ ಅವರನ್ನು ತಿಂಗಳಿನ (ಚಂದ್ರನ) ಅಂಗಳಕ್ಕೆ ಕಳುಹಿಸುವ ಸಫಲ ಯಾನ ಎಸಗಿದರೆ, ರಷ್ಯಾ ದೇಶವು ಯೂರೀ ಗಗಾರಿನ್ ಅವರನ್ನು ಅಂತರಿಕ್ಷಕ್ಕೆ ಕಳುಹಿಸಿ ಬಾಹ್ಯಾಕಾಶದ ಸ್ಪರ್ಧೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿತು. ಯೂರೀ ಗಗಾರಿನ್ ಅವರು ಸೋವಿಯತ್ ರಷ್ಯಾದ ಗಾಳಿ ತೇರಾಳು (ವಿಮಾನದ ಚಾಲಕರು) ಮತ್ತು ಗಗನಯಾತ್ರಿಯಾಗಿದ್ದು, ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊತ್ತ ಮೊದಲ ಮಾನವರಾಗಿದ್ದರು. ವೋಸ್ಟಾಕ್ 1 ಕ್ಯಾಪ್ಸುಲಿನಲ್ಲಿ (Vostok 1 Capsule) ಪ್ರಯಾಣಿಸಿದ ಗಗಾರಿನ್ 12 ಏಪ್ರಿಲ್ 1961ರಂದು ಅಂತರಿಕ್ಷದಲ್ಲಿ ಭೂಮಿಯ ಒಂದು ಕಕ್ಷೆಯನ್ನು ಪೂರ್ಣಗೊಳಿಸಿದರು. ಈ ಗಮನಾರ್ಹ ಸಾಧನೆಯ ಮೂಲಕ ಯೂರೀ ಗಗಾರಿನ್  ಅವರು ಅಂತರರಾಷ್ಟ್ರೀಯ ಪ್ರಸಿದ್ಧಿಗೊಳಿಸಿದರು; ಅಲ್ಲದೇ, ರಷ್ಯಾದ ಅತ್ಯುನ್ನತ ಗೌರವವಾದ 'Hero of the Soviet Union' ಸೇರಿದಂತೆ ಅನೇಕ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳನ್ನು ಪಡೆದರು. ಆದರೆ, ಮಾನವನನ್ನು ಮೊತ್ತಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸುವ ಯೋಜನೆಯಾದ 'Soviet space programme' ಅಭಿಯಾನವನ್ನು ಸಫಲವಾಗಿ ಸಂಯೋಜಿಸಿದವರು ಮತ್ತು ಎಸಗಿದವರು ಅಝರ್ಬೈಜಾನದ ಕರೀಂ ಅಬ್ಬಾಸ್ ಅಲಿ ಕೆರಿಮೊವ್!

ಲೆಫ್ಟಿನೆಂಟ್ ಜನರಲ್ ಕರೀಂ ಅಬ್ಬಾಸ್ ಅಲಿ ಕೆರಿಮೊವ್ (ನವೆಂಬರ್ 14, 1917 - ಮಾರ್ಚ್ 29, 2003) ಅಝರ್ಬೈಜಾನ ಮೂಲದ ಕ್ಷೀಪಣಿ ತಜ್ಞರು ಮತ್ತು ಸೋವಿಯತ್ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಅವರು ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ಕಾರ್ಯಕ್ರಮದ ಪ್ರಮುಖ ವಿಜ್ಞಾನಿಗಳು ಮತ್ತು ಸಂಸ್ಥಾಪಕರಲ್ಲಿ ಒಬ್ಬರು; ಮತ್ತು ಹಲವು ವರ್ಷಗಳಿಂದ ಸೋವಿಯತ್ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಿದ ಪ್ರಮುಖ ವ್ಯಕ್ತಿಯಾಗಿದ್ದರು.

ಕರೀಂ ಕೆರಿಮೊವ್ ನವೆಂಬರ್ 14, 1917ರಂದು ಅಝರ್ಬೈಜಾನ್ (ಅಂದಿನ ರಷ್ಯಾದ ಗಣರಾಜ್ಯದ ಭಾಗವಾಗಿದ್ದು) ಬಾಕುದಲ್ಲಿ ಎಂಜಿನಿಯರ್-ತಂತ್ರಜ್ಞರ ಕುಟುಂಬದಲ್ಲಿ ಜನಿಸಿದರು. 1942ರಲ್ಲಿ ಅಝರ್ಬೈಜಾನ್ ಇಂಡಸ್ಟ್ರಿಯಲ್ ಇನ್ಸ್ಟಿಟ್ಯೂಟ್'ನಿಂದ ಪದವಿ ಪಡೆದ ನಂತರ, ಕೆರಿಮೊವ್ Dzerzhinsky Artillery Academyಯಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಅಲ್ಲಿ ಅವರು ರಾಕೆಟ್ ವ್ಯವಸ್ಥೆಗಳ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಅವರು ಸೋವಿಯತ್ ಬಾಹ್ಯಾಕಾಶ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರು ಮತ್ತು ಅನೇಕ ಸೋವಿಯತ್ ಬಾಹ್ಯಾಕಾಶ ಕಾರ್ಯಾಚರಣೆಗಳ ಹಿಂದೆ ಪ್ರಮುಖ ಯಂತ್ರಶಿಲ್ಪಿ ಎಂದು ಹೆಸರುಗಳಿಸಿದರು. ಅವರು ರಾಕೆಟ್ ವಿಜ್ಞಾನ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ತಮ್ಮ ಗಮನಾರ್ಹ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ.

'Roscosmos'ಯ ಪುರೋಭಿವೃದ್ಧಿಯಲ್ಲಿ ಕೆರಿಮೋವ್'ರವರ ಕೊಡುಗೆಗಳು : 

ಕರೀಂ ಕೆರಿಮೋವ್ ಅವರು ರಷ್ಯಾದ ಅಂತರೀಕ್ಷದ ಸಂಸ್ಥೆಯಾದ Russian Federal Space Agency : 'Roscosmos'ರ ಪುರೋಭಿವೃದ್ಧಿಯಲ್ಲಿ ಕ್ರಿಯಾತ್ಮಕವಾಗಿ ಪ್ರಮುಖ ಭಾಗವನ್ನು ವಹಿಸಿದರು. ಅವರು 1957ರಲ್ಲಿ ಸ್ಪುಟ್ನಿಕ್ 1 (Sputnik 1) ತಂಡದಲ್ಲಿ ಸಕ್ರಿಯ ಸದಸ್ಯರಾಗಿದ್ದರು. 'Strategic Rocket Forces'ಗಳ ಪ್ರತಿನಿಧಿಯಾಗಿ, ಅವರು ವೋಸ್ಟಾಕ್ (Vostok Programme) ಅಭಿಯಾನದ ರಾಜ್ಯ ಆಯೋಗದ ಸದಸ್ಯರಾಗಿದ್ದರು, ಇದು Vostok 1 ಹಾರಾಟಕ್ಕೆ ಕಾರಣವಾಯಿತು. 1960ರ ದಶಕದ ಮಧ್ಯಭಾಗದಲ್ಲಿ ಅವರು ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ನಾಯಕತ್ವದ ಪಾತ್ರಕ್ಕೆ ಬಡ್ತಿ ಪಡೆದರು. 

1967ರಲ್ಲಿ Cosmos 186 ಮತ್ತು Cosmos 188ರ ಯಶಸ್ವಿ Space Dockingಯ ಮೇಲ್ವಿಚಾರಣೆಯನ್ನು ಮಾಡಿದರು. (Space Docking ಅಂದರೆ ಅಂತರೀಕ್ಷದಲ್ಲಿ ಎರಡು ಬಾಹ್ಯಾಕಾಶ ವಾಹನಗಳನ್ನು ಸೇರಿಸಿಕೊಳ್ಳುವುದು). ಕೆರಿಮೊವ್ 1970ರ ದಶಕದಲ್ಲಿ Salyut Seriesಯ ಬಾಹ್ಯಾಕಾಶ ಕೇಂದ್ರಗಳಿಗೆ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿದರು ಮತ್ತು ನಂತರ ಅವರ ವೃತ್ತಿಜೀವನದಲ್ಲಿ Mir ಯೋಜನೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. (ಮಿರ್ 1986ರಿಂದ 2001ರವರೆಗೆ ಭೂಮಿಯ ಕೆಳಮಟ್ಟದ ಕಕ್ಷೆಯಲ್ಲಿ ಕಾರ್ಯನಿರ್ವಹಿಸುವ ಬಾಹ್ಯಾಕಾಶ ನಿಲ್ದಾಣವಾಗಿತ್ತು). ಕರೀಂ ಕೆರಿಮೋವ್ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಕಾಸ್ಮೋನೋಟ್'ಗಳನ್ನು ಅಂತರೀಕ್ಷದಲ್ಲಿ ಕಳುಹಿಸಿ ರಷ್ಯಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತರೀಕ್ಷ ಸ್ಪರ್ಧೆಯಲ್ಲಿ ಸಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ರಷ್ಯಾ ದೇಶದ ಹೆಮ್ಮೆ ಎನಿಸಿಕೊಂಡರು. (ರಷ್ಯಾದ ಗಗನಯಾತ್ರಿಗಳನ್ನು 'Cosmonaut' ಎಂದು ಕರೆಯುತ್ತಾರೆ)

1964ರಲ್ಲಿ ಅವರು USSR ರಕ್ಷಣಾ ಸಚಿವಾಲಯದ ಹೊಸದಾಗಿ ರೂಪುಗೊಂಡ ಬಾಹ್ಯಾಕಾಶ ಪಡೆಗಳ (TsUKOS) ಕೇಂದ್ರ ನಿರ್ದೇಶನಾಲಯದ ಮುಖ್ಯಸ್ಥರಾದರು. 1966ರಲ್ಲಿ ಸೆರ್ಗೆಯ್ ಕೊರೊಲೆವ್ ಅವರ ಅಗಲಿಕೆಯ ನಂತರ, ಕೆರಿಮೊವ್ ಪೈಲಟ್ ಫ್ಲೈಟ್‌ಗಳ ರಾಜ್ಯ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡರು ಮತ್ತು 25 ವರ್ಷಗಳ ಕಾಲ ಅದರ ಮುಖ್ಯಸ್ಥರಾಗಿದ್ದರು (1966-1991). ಹಿಂದಿನ ಸೋವಿಯತ್ ಒಕ್ಕೂಟಕ್ಕಾಗಿ ಮಾನವಸಹಿತ ಬಾಹ್ಯಾಕಾಶ ಸಂಕೀರ್ಣಗಳು ಮತ್ತು ಮಾನವರಹಿತ ಅಂತರಗ್ರಹ ಕೇಂದ್ರಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಯ ಪ್ರತಿಯೊಂದು ಹಂತವನ್ನು ಅವರು ಮೇಲ್ವಿಚಾರಣೆ ಮಾಡಿದರು. ಕೆರಿಮೊವ್ ಅವರು 1965-1974ರಲ್ಲಿ ಜನರಲ್ ಮೆಷಿನ್ ಬಿಲ್ಡಿಂಗ್ ಸಚಿವಾಲಯದ ಮುಖ್ಯ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದರು. ಕೆರಿಮ್ ಕೆರಿಮೊವ್ 'ಸೋವಿಯತ್ ಏರೋನಾಟಿಕ್ಸ್'ನಲ್ಲಿ ಪ್ರಾರಂಭದಿಂದಲೂ ತೊಡಗಿಸಿಕೊಂಡಿದ್ದರು.

ಜಾಗತಿಕ ಮಹಾಯುದ್ಧದಲ್ಲೂ ರಷ್ಯಾವನ್ನು ಪ್ರತಿನಿಧಿಸಿದ್ದ ಕೆರಿಮೋವ್ :

ರಾಕೆಟ್ ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದ ಅವರು ದ್ವಿತೀಯ ಜಾಗತಿಕ ಮಹಾಯುದ್ಧದ ಕಾಲದಲ್ಲಿ ಪ್ರಸಿದ್ಧ 'ಕತ್ಯುಷಾ ರಾಕೆಟ್ ಲಾಂಚರ್‌'ಗಳ ತಪಾಸಣೆಯ ಕುರಿತು ಕೆಲಸ ಮಾಡಿದರು. ಅವರ ಸೇವೆಯನ್ನು 'Order of the Red Star'ನೊಂದಿಗೆ ಗೌರವಿಸಲಾಯಿತು. ದ್ವಿತೀಯ ಮಹಾಯುದ್ಧದ ನಂತರ, ಕೆರಿಮೊವ್ ಸೋವಿಯತ್ ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದಲ್ಲಿ ಕೆಲಸ ಮಾಡಿದರು, 1960 ರ ಹೊತ್ತಿಗೆ ಯುಎಸ್ಎಸ್ಆರ್ ರಕ್ಷಣಾ ಸಚಿವಾಲಯದ ಕ್ಷಿಪಣಿ ಶಸ್ತ್ರಾಸ್ತ್ರಗಳ ಮುಖ್ಯ ನಿರ್ದೇಶನಾಲಯದ (GURVO) ಮೂರನೇ ನಿರ್ದೇಶನಾಲಯದ ಮುಖ್ಯಸ್ಥರಾಗಿ ರಹಸ್ಯ ಪರೀಕ್ಷಾ ಉಡಾವಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಇತರ ಕ್ಷಿಪಣಿ ತಜ್ಞರ ಜೊತೆಯಲ್ಲಿ, ಜರ್ಮನ್ V-2 ರಾಕೆಟ್ ಕುರಿತು ಮಾಹಿತಿಯನ್ನು ಸಂಗ್ರಹಿಸಲು 1946ರಲ್ಲಿ ಜರ್ಮನಿಗೆ ಅವರನ್ನು ಕಳುಹಿಸಲಾಯಿತು. ದ್ವಿತೀಯ ಜಾಗತಿಕ ಮಹಾಯುದ್ಧದ ನಂತರ ಅವರು ಸೋಯುಜ್ ಕಾರ್ಯಾಚರಣೆಗಳ ಅಧ್ಯಕ್ಷತೆಯನ್ನು ಮುಂದುವರೆಸಿದರು.

ರಷ್ಯಾದಲ್ಲಿ ರಹಸ್ಯಮಯ ಬದುಕು :

ಭದ್ರತಾ ಕ್ರಮಗಳಿಂದಾಗಿ ಕೆರಿಮೋವ್ ಅವರ ಗುರುತನ್ನು ಅವರ ವೃತ್ತಿಜೀವನದ ಬಹುಪಾಲು ಸಾರ್ವಜನಿಕರಿಂದ ರಹಸ್ಯವಾಗಿಡಲಾಗಿತ್ತು. ಇತರ ಸೋವಿಯತ್ ಬಾಹ್ಯಾಕಾಶ ಪ್ರವರ್ತಕರ ವಿಷಯದಲ್ಲಿ, ಸೋವಿಯತ್ ಅಧಿಕಾರಿಗಳು ಅನೇಕ ವರ್ಷಗಳ ಕಾಲ ಕೆರಿಮೊವ್ ಅವರ ಗುರುತನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಲು ನಿರಾಕರಿಸಿದರು. ಬಾಹ್ಯಾಕಾಶ ಉಡಾವಣೆಗಳಲ್ಲಿ ಕ್ಯಾಮೆರಾಗಳು ಗಗನಯಾತ್ರಿಗಳ ಮೇಲೆ ಕೇಂದ್ರೀಕರಿಸುತ್ತವೆಯೇ ಹೊರತು ಅವರು ಕಾರ್ಯಾಚರಣೆಯನ್ನು ಕೈಗೊಳ್ಳಲು ತಮ್ಮ ಸಿದ್ಧತೆಯನ್ನು ವರದಿ ಮಾಡಿದ ವ್ಯಕ್ತಿಯಲ್ಲ. ಕೆರಿಮೊವ್ "ರಹಸ್ಯ ಜನರಲ್" ಆಗಿದ್ದರಿಂದ, ಅವರು ಯಾವಾಗಲೂ ಕ್ಯಾಮರಾದ ನೋಟದಿಂದ ಮರೆಮಾಡಲ್ಪಟ್ಟರು; ಅವರ ಧ್ವನಿಯನ್ನು ಮಾತ್ರ ಪ್ರಸಾರ ಮಾಡಲಾಗುತಿತ್ತು. ಸೋವಿಯತ್ ಒಕ್ಕೂಟದಲ್ಲಿ "ಗ್ಲಾಸ್ನೋಸ್ಟ್" ಯುಗದವರೆಗೂ ಅವರ ಹೆಸರು ರಹಸ್ಯವಾಗಿ ಉಳಿಯಿತು, ಅವರು 1987 ರಲ್ಲಿ Pravda ಪತ್ರಿಕೆಯಲ್ಲಿ ಮೊದಲು ಉಲ್ಲೇಖಿಸಲ್ಪಟ್ಟರು.

ಕೆರಿಮೋವ್ ಅವರು ಗಳಿಸಿದ ಮಾನಕಗಳು :

'ಹೀರೊ ಓಫ್ ಸೋಷಿಯಲಿಸ್ಟ್ ಲೇಬರ್', 'ಲಾರಿಯೇಟ್ ಓಫ್ ಸ್ಟಾಲಿನ್', 'ಲೆನಿನ್ ಏಂಡ್ ಸ್ಟೇಟ್ ಪ್ರೈಜ್ಸ ಓಫ್ ದಿ ಸೊವಿಯಟ್ ಯೂನಿಯನ್ ಮತ್ತು ಸೋವಿಯೆತ್ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲಿನ ಹುದ್ದೆ ಒಳಗೊಂಡಂತೆ ಹಲವಾರು ಮಹತ್ವದ ಪ್ರಶಸ್ತಿಗಳಿಗೆ ಕರೀಂ ಅಬ್ಬಾಸ್ ಅಲಿ ಕೆರಿಮೋವ್ ಅವರು ಕೀರ್ತಿ ಪಾತ್ರರಾದರು. 2003ರಲ್ಲಿ ಕೆರಿಮೋವ್ ಅವರು ಚಿರನಿದ್ರೆಗೆ ಜಾರಿದರೂ, ಅವರ ಹೆಸರು Soviet space program ನಲ್ಲಿ ಚಿರಸ್ಥಾಯಿಯಾಗಿದೆ. 2007ರಲ್ಲಿ ಅಝರ್ಬೈಜಾನ್ ದೇಶವು ದಿವಂಗತರ ಭಾವಚಿತ್ರವನ್ನು ತನ್ನ ಅಂಚೆಚೀಟಿಯಲ್ಲಿ ಪ್ರಕಟಿಸಿ, ಕರೀಂ ಅವರಿಗೆ ಗೌರವ ಸಲ್ಲಿಸಿತು.

ಚಿತ್ರ ೧: ಕೋಸ್ಮೋನಟ್ ಗಳನ್ನು ಬೀಳ್ಕೊಡುತ್ತಿರುವ ಕರೀಂ ಅಬ್ಬಾಸ್ ಅಲಿ

ಚಿತ್ರ ೨: 1975ರಲ್ಲಿ ಗಗನ ನೌಕೆಗಳಾದ ಅಪೊಲ್ಲೊ (ಎಡ) ಮತ್ತು ಯೂನಿಯನ್ (ಬಲ) ಸಫಲ ಜೋಡಣೆ ನಡೆಸಿದ ಕರೀಂ ಅಬ್ಬಾಸ್ ಅಲಿ.

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ